Sunday, November 29, 2009

ಗೆಳೆತನಕ್ಕೆ ಇತಿ/ಮಿತಿ ಗಳಿವೆಯೇ?
ಯಾವುದನ್ನು ನೀವು ಗೆಳೆತನ ಎನ್ನುತ್ತಿರಿ ? ವಿಚಿತ್ರ ಎನಿಸುತ್ತೆ ಅಲ್ಲ !
ಮಾನವ ಸಂಘಜೀವಿ ಎಲ್ಲ ನಿಜ ಆದರೆ ಎಲ್ಲ ಕಾಲಕ್ಕೂ ಒಂದೇ ಸಂಘ ಅಲ್ಲ
ಅದೇ ಅಚ್ಚರಿ !
ಜೀವನದ ಅರ್ದಕ್ಕು ಹೆಚ್ಚಿನ ದಾರಿ ಕ್ರಮಿಸಿದವರಿಗಂತು ಅರ್ಥವಾದಿತು.
ಪರಸ್ಪರ ಕೊಡು ಕೊಳ್ಳುವಿಕೆಯಲ್ಲಿಯೇ ಗೆಳೆತನದ ಪಂಚಾಗ. ಕಟ್ಟಡ ಎಲ್ಲ!
ಸಂಬಂದಕ್ಕೆ ,ಸಂಪರ್ಕವೇ ಸಾದನ.
ಸಂಪರ್ಕಕ್ಕೆ ಅವಶ್ಯಕತೆಯೇ ಅದಾರ.
ಅಗತ್ಯ ಇದ್ದಾಗ, ಆಹಾ ಅದೇನು ಒಡನಾಟ,
ಒಡಲಿಂದ ಹುಟ್ಟಿ ಬರುವ ಪ್ರೀತಿ, ಕಾಳಜಿ.
ಅನುಭವಿಸಿದರಿಗೆ ಗೊತ್ತು.
ಹ೦, ನಿಮಗೂ ಗೊತ್ತು ತಾನೆ?

ಸಮಯದ ಸರಿದಾರಿಯಲ್ಲಿ
ಸೇರಿಹೋಗುವ ಜನಗಳು ಅದೆಸ್ಟೋ!
ಜನಬದಲಾದರು.....ರೂ,
ಬಾವ ಒಂದೇ.

ಇಷ್ಟೆ... ಅದರೂ,ಅದೇ ತೀವ್ರತೆ ಇರುತ್ತಲ್ಲ!

ಇರಬೇಕು. ಯಾಕೆಂದರೆ ಮಾನವ ಸಂಘಜೀವಿ.

Saturday, November 28, 2009

ಆಸೆ / ಆಕಾಂಕ್ಷೆ .
ಆಸೆ,ಆಕಾಂಕ್ಷೆಗಳು ಮಾನವನಿಗೆ" ಸಹಜ ."
ಅಂದ್ರೆ ಹುಟ್ಟಿನಿಂದಲೇ ಬಂದದ್ದು .ಹೌದು ತಾನೆ?
ಯಾರು ಇವುಗಳನ್ನು ಬೆಳೆಸಿದ್ದು ?
ಅಪ್ಪ, ಅಮ್ಮ ,ಅವರು, ಇವರು ,ಎಲ್ಲರೂ .
ಕಿಡಿಯಾಗಿದ್ದ ಬೆಂಕಿಗೆ ಎಲ್ಲರೂ ತಿದಿ ಒತ್ತಿದವರೇ!

ಆಸೆಯೇ ದುಕ್ಕಕ್ಕೆ ಮೂಲ
ಅಂದವನ ಮಾತು ಕೇಳಿ ,
ಈಗ ಮತ್ತೆ ಇವರೆಲ್ಲ
ಆಸೆ ಒಳ್ಳೇದಲ್ಲ ,ಅತಿಯಾಸೆ ಕಂಡಿತಒಳ್ಳೇದಲ್ಲ ಅಂತ
ರಾಗ ಎಳೆದು... ತಲೆ ತಿನ್ತಾರೆ .

ಅಂದು,ಅಂದ ಬುದ್ದನಿಗೆ ನಿಜವಾದದ್ದು
ಉಳಿದ ಎಲ್ಲರಿಗೆ ಹೇಗೆ ನಿಜವಾಗಬೇಕು?

"ತಾನು ಸಾಯಬೇಕು ಸ್ವರ್ಗ ಪಡೆಯಬೇಕು "
ಗೊತ್ತಿದ್ದವರೂ ಕೊಲೆ ಮಾಡ್ತಾರಲ್ಲ?

ಹಿಂಸೆ ಪಾಪ ಅಲ್ವಾ?....
ಅಲ್ವಾ?.........

Thursday, November 26, 2009

ಹಸಿವು
ಯೋಚಿಸಿದರೆ ಒಂದು ವಿಚಿತ್ರ ಸಂಗತಿ
ಹಸಿವಿಲ್ಲ ದಿದ್ದರೆ ನಮ್ಮ ಬದುಕು ಅರ್ಥ ಶೂನ್ಯ ಅಂಥ
ನಿಮಗೆ ಎಂದಾದರೂ ಅನಿಸಿದೆಯ ?
ಹಸಿವಿನಿಂದಾಗಿಯೇ ಜಗತ್ತು ಓಡುತ್ತುದೆ.
ಅಲ್ಲವೇ?
ಎಲ್ಲ ಚಟುವಟಿಕೆಗಳು ಹಸಿವಿನ ಸುತ್ತ -ಮುತ್ತ
ರಾಜಕೀಯದಿಂದ ವೇದಾಂತದವರೆಗೆ
ಸಂಪಾದನೆಯಿಂದ ಸಮಸ್ಯೆಗಳವರೆಗೆ
ಒಂದೇ ಸೂತ್ರ
ಹಸಿವು
ಅದಕ್ಕಾಗಿಯೇ ಬಾಲ್ಯದಿಂದ ಮುಪ್ಪಿನವರೇಗೆ
ಎಲ್ಲ ಚಟುವಟಿಕೆಗಳು .
ಪರಿಣಾಮ..
ಎಲ್ಲ ಹೆಣಗಾಟ ಗೊಣಗಾಟ ದೊಂಬರಾಟ
-------

ಯಾಕೆ ಯೋಚಿಸುತ್ತಿರ
ಇದುವೇ ಜೀವನ...
ಬದುಕು ಹೀಗೆಲ್ಲ ಯಾಕೆ ಹೀಗೆ ಅಂತ
ನೋಡಿದಾಗ ಅನಿಸಿದ್ದು..ಹೀಗೆ
ಬೇರೆ ಕಾರಣ ಗಳಿದ್ದರೆ ?
ಇದ್ದರೆ
ಇರಬಹುದೇನೋ .............