ಹಸಿವು
ಯೋಚಿಸಿದರೆ ಒಂದು ವಿಚಿತ್ರ ಸಂಗತಿ
ಹಸಿವಿಲ್ಲ ದಿದ್ದರೆ ನಮ್ಮ ಬದುಕು ಅರ್ಥ ಶೂನ್ಯ ಅಂಥ
ನಿಮಗೆ ಎಂದಾದರೂ ಅನಿಸಿದೆಯ ?
ಹಸಿವಿನಿಂದಾಗಿಯೇ ಜಗತ್ತು ಓಡುತ್ತುದೆ.
ಅಲ್ಲವೇ?
ಎಲ್ಲ ಚಟುವಟಿಕೆಗಳು ಹಸಿವಿನ ಸುತ್ತ -ಮುತ್ತ
ರಾಜಕೀಯದಿಂದ ವೇದಾಂತದವರೆಗೆ
ಸಂಪಾದನೆಯಿಂದ ಸಮಸ್ಯೆಗಳವರೆಗೆ
ಒಂದೇ ಸೂತ್ರ
ಹಸಿವು
ಅದಕ್ಕಾಗಿಯೇ ಬಾಲ್ಯದಿಂದ ಮುಪ್ಪಿನವರೇಗೆ
ಎಲ್ಲ ಚಟುವಟಿಕೆಗಳು .
ಪರಿಣಾಮ..
ಎಲ್ಲ ಹೆಣಗಾಟ ಗೊಣಗಾಟ ದೊಂಬರಾಟ
-------
ಯಾಕೆ ಯೋಚಿಸುತ್ತಿರ
ಇದುವೇ ಜೀವನ...
ಬದುಕು ಹೀಗೆಲ್ಲ ಯಾಕೆ ಹೀಗೆ ಅಂತ
ನೋಡಿದಾಗ ಅನಿಸಿದ್ದು..ಹೀಗೆ
ಬೇರೆ ಕಾರಣ ಗಳಿದ್ದರೆ ?
ಇದ್ದರೆ
ಇರಬಹುದೇನೋ .............
1 comment:
ಮೇಡಂ ಅದನ್ನ ಕವನ ಅಂತ ಬರೆದಿಲ್ಲ .
ಒಟ್ಟು ಮನಸಿಗೆ ಬಂದ ವಿಚಾರಗಳನ್ನು ಬರಿತ ಹೋದೆ
.ಅದು ಗದ್ಯನೋ ?
ಪದ್ಯನೋ ,ಅಲ್ಲ ಗಪದ್ಯನೋ
ಒಂದೂ ಗೊತ್ತಿಲ್ಲ .
ಮತ್ತೆ ನಾನು ಬರೆಯುವ ರೀತಿನೇ ಸ್ವಲ್ಪ ಹಾಗೆ.
ಕೆಳಗೆ ಕೆಳಗೆ
ತುಂಡು ತುಂಡು ಗೆರೆಗಳು
ಅರ್ಥವನ್ನು ಹಿಗ್ಗಿ ಸುತ್ತೆ .
ಅಂತ ನನ್ನ ಭಾವನೆ
ಇನ್ನು ಹಸಿವು ಅಂದ್ರೆ
ಅಲ್ಲಿ ಬಯಕೆ (ಕಾಮ) ಅನ್ನೋ ಅರ್ಥವೂ ಇದೆ,
ಇರಲಿ ಅಬಿಪ್ರಾಯ ಕೊಟ್ಟಿದ್ದಕ್ಕೆ ತುಂಭಾ ಧನ್ಯವಾದಗಳು.
ಮುಂದಿನ ಬರೆಹ ಗಳನ್ನೂ ಓದಿ
ಅಬಿಪ್ರಯ ತಿಳಿಸಿ .
ಸಂಪರ್ಕದಲ್ಲಿರಿ .
ವಂದನೆಗಳು .
2009/12/3 Shashikala Nagaraja
"ಹಸಿವು " ಕವನ ಚೆನ್ನಾಗಿದೆ.
ಹಸಿವು(ಹೊಟ್ಟೆ) ಗಾಗಿ ತಾನೇ ella !! ಅದು ಇಲ್ಲದಿದ್ದರೆ ಯಾರು ಕೆಲಸ ಕಾರ್ಯ ,.ಮನೆ ಮಠ, ಆಸ್ತಿ ಪಾಸ್ತಿ ಮಾಡಲು ಯಾರು ಹೋಗ್ತಿದ್ದರು ಆಲ್ವಾ?ಮಾನವನ ಜೀವನಕ್ಕೆ ಅರ್ಥ ವಿರುತ್ತಿರಲ್ಲ ಅಂತ ನನ್ನ ಅಭಿಪ್ರಾಯ.ಅಲ್ವ?ಅದಕ್ಕ್ಕಾಗೆ ತಾನೆ ಈ ಹೋರಾಟ ,ಸೆಣಸಾಟ ಮತ್ತು ಗೊಣಗಾಟ .ಅದೇ ಇಲ್ಲದಿದ್ದರೆ ಪ್ರಪಂಚ ಹೇಗೆ ಇರುತ್ತೆ ಅನ್ನುವ ಕಲ್ಪನೆ ಮಾಡಲು ಸಾಧ್ಯವೇ?
Post a Comment