Thursday, February 4, 2010
ಗೆಳತೀ..
-----
ನೀನು ಏನೇಹೇಳು ಬದುಕನ್ನು
ಎಲ್ಲ ರಸಗಳೂ ಆಳುತ್ತವೆ.ಅಳೆದ ತೂಗುತ್ತವೆ.
ಅದ್ಭುತ ಕರುಣ ವೀರ ಶಾಂತ
ಭಯ ಭೀಭತ್ಸ ರೌದ್ರ ಹಾಸ್ಯ
ರಸಗಳ ತೂಗಿ ತೊನೆಯುವ
ಅಲೆಗಳುಯ್ಯಾಲೆಗಳು ಜೊಕಾಲಿಯಾಡುತ್ತವೆ.
ಆಡಲೇಬೇಕಾಗುತ್ತದೆ.
ಆದರೆ ಗೆಳತೀ,
ಈ ಶೃಂಗಾರ ರಸಗಳ ರಾಜ.
ವಿರಹಿಗಳಿಗೆ ಮಾತ್ರವಲ್ಲ,
ಧೀರರ ಸ್ಥಾಯೀ ಭಾವ
ಬದುಕಿನ ಆಸ್ಥಾನದಲ್ಲೊಂದು
ಶೃಂಗವಂತ.
ನಿನ್ನೆಗಳ ನೆನಪಲ್ಲಿ ಸಂತೊಷವೇಪಡು
ಆಸೆಯಿದ್ದರೆ ಕೊರಗು.
ನಾಳೆಗಳ ಕಲ್ಪನಾ ಸಾಮ್ರಾಜ್ಯದಲಿ
ವಿಹಾರ ಹೊರಡು
ಸುಖವೇ ಸಿಗಲಿ ಭಯವೇ ಭಾಧಿಸಲಿ
ಎಷ್ಟಾದರೂ ಇವೆಲ್ಲ
ಭೂತದ ನೆನಪು,ಭವಿಷ್ಯದ ಆಶಾದೀಪ.
ಗೆಳತೀ,
ನಿನ್ನ
ಅನುಭವಕ್ಕೆ,ಪ್ರಜ್ಞೆಯ ಅಳವಿಗೆ
ಏನಾದರೂ
ದೊರಕ ಬೇಕಿದ್ದರೆ...
ವರ್ತಮಾನದ ಬದುಕಿನ ಮೇಲೆ ಮಾತ್ರ ಗಮನವಿಡು.
ಮುಳುಗಿಯೇಳುತ್ತ
ಶೃಂಗಾರ ರಸಸಾಗರದಿ
ಅನುಭವಿಸು ಜೀವನವ
ಜೀನುಕಟ್ಟಿದ ಕುದುರೆಯ
ಅಬ್ಬರದ ಆನಂದವ
ತಳಮುಟ್ಟ ಹೀರಿ..
ಬಂದಕಾರ್ಯದಿ ತೊಡಗು
ಮನಸ ಮಣಿಸುತ್ತ..
ಕುಣಿದು ಕುಣಿಸುತ್ತ..
..ಗೆಳತೀ..
---------------
15 comments:
ಮನ ಮಣಿಸಿ ಕುಣಿದು ಕುಪ್ಪಳಿಸಿ ಬಂದಳಲ್ಲ ನಿಮ್ಮ ಗೆಳತಿ.
ಅನುಭವಕ್ಕೆ,ಪ್ರಜ್ಞೆಯ ಅಳವಿಗೆ ವರ್ತಮಾನದ ಬದುಕಿನ ಮೇಲೆ ಮಾತ್ರ ಗಮನವಿಡು.ಬಹಳ ಇಷ್ಟವಾದ ಸಾಲುಗಳು.
ಸೊಗಸಾಗಿದೆ ಅಭಿನ೦ದನೆಗಳು ಸಾರ್
ಗೆಳತಿ ಬಂದಮೇಲೆ ಇನ್ನೇನು ಹೇಳಿ..?! ಸೊಗಸಾದ ಕವನ..ಧನ್ಯವಾದಗಳು
ಯಾರ್ರಿ ಆ ಗೆಳತಿ?? ಹಾ ಹಾ ಹಾ.. ಚೆನ್ನಾಗಿದೆ
ಸರ್, ತುಂಬಾ ಚೆನ್ನಾಗಿದೆ
ಅದರಲ್ಲೂ
ಆದರೆ ಗೆಳತೀ,
ಈ ಶೃಂಗಾರ ರಸಗಳ ರಾಜ.
ವಿರಹಿಗಳಿಗೆ ಮಾತ್ರವಲ್ಲ,
ಧೀರರ ಸ್ಥಾಯೀ ಭಾವ
ಬದುಕಿನ ಆಸ್ಥಾನದಲ್ಲೊಂದು
ಶೃಂಗವಂತ.
ಎಂಥಹ ಚಂದವಿದೆ
ಗೆಳತಿ,ಗೆಳೆಯನೂ ಆಗಬಹುದು.
ನಾನೂ ನೀನೂ ಅವರೂ ಇವರೂ ಯಾರೂ
ಆಗಿರಲಿ..
ಶೃಂಗಾರ..ರಸಗಳ ರಾಜ.ಎಲ್ಲರಿಗೂ..
ಪ್ರತಿಕ್ರೀಯಿಸಿದ ಎಲ್ಲರಿಗೂ ಧನ್ಯವಾದಗಳು.
chennagide
Beautifully narrated the essence of living in present, nice :)
ತುಂಬಾ ಚೆನ್ನಾಗಿದೆ, ಬದುಕಿನ ಅಲೆಗಳು ಉಯ್ಯಾಲೆಯಾಡುವ ಪರಿ!
ಚೈತ್ರಾ,ಗೀತಾ,ಶ್ರಿವಿದ್ಯಾ,
ಕಮೆಂಟ್ ಗೆ ವಂದನೆಗಳು...
tumba laaika iddu.saahithyada bhasheli baravale edttille.oodutte.aasvaadisutte.
nimma saahitya(kavite) tumba ollediddu.
ಧನ್ಯವಾದ,ಆಶಾ.ಜೆ.ಪಿ.
ಭಾವನೆಗಳ ಸಂವಹನಕ್ಕಾಗಿ ಮಾತ್ರ ಆನು ಬರವದು.
ವರ್ತಮಾನಲ್ಲಿ ಬದುಕೆಕ್ಕು ಹೇಳುದೇ ಇಲ್ಲಿಯ ಆಶಯ ಅಷ್ಟೇ.
ನಿಂಗೊಎಲ್ಲ ಆಸ್ವಾದಿಸಿದರೆ ಎನಗೆ ಖುಷಿ.
ಎನ್ನ ಎಲ್ಲ post ಓದಿ.
ರೆಜಾ ಆಧ್ಯಾತ್ಮದ ಒಯ್ಲು ಇಪ್ಪ ಕವನಂಗೊ.
ಇಷ್ಟ ಆದರೆ ಕಮೆಂಟ್ ಬರೆಯಿರಿ.
ಸುಂದರ ಕವನ...
ಸುಂದರ ಸಾಲುಗಳು..!!
ಇಷ್ಟವಾಯಿತು ನಿಮ್ಮ ಕವನ...
ಚಂದದ ಕವನಕ್ಕೆ ಅಭಿನಂದನೆಗಳು...
Nice poem..
ಸಿಮೆಂಟು ಮರಳಿನ ಮಧ್ಯೆ...,
ಮನಮುಕ್ತಾ,
ರಿಗೆ
ಧನ್ಯವಾದಗಳು.
ಮನಮುಕ್ತಾರವರೇ ನನ್ನ ಉಳಿದ ಕವನಗಳನ್ನೂ ಓದಿ..
Post a Comment