Saturday, February 27, 2010









...ಚರ!!

ಯಾವುದೂ,ಹೇಗೂ
ಸ್ಥಿರವಿರದ
ನನ್ನ ನಿನ್ನ ಜಗತ್ತಲ್ಲಿ
ಚಲಿಸದಂತೆ ಮನವ
ಮೊಡಿಮಾಡಿ
ಸ್ಥಿರವಾಗಿಸುವ ಪ್ರಯತ್ನ!!
ಅದ್ಯಾವ ಪುಣ್ಯಾತ್ಮ
ತುಂಬಿದನೊ ನಿನ್ನ ತಲೆಯಲ್ಲಿ?

ರಾತ್ರಿಯೂ ಹಗಲೂ
ನೀನೇ ಹೇಳಿಕೊಳ್ಳುವಂತೆ
ಮನಸಿನಒಳಗೂ (ಆಶ್ಚರ್ಯ)
ಹೊರಗೂ "ಅದೇ ಧ್ಯಾನ ವಂತೆ"
ಹೊಸಬಗೆಯ"ರೊಗವಂತೆ"..
ಹೇಗಾಯಿತು?ಹೀಗೇಕಾಯಿತು?

ಅಂತ ನನ್ನ ಕೇಳಿದರೆ
ಏನು ಹೇಳಲಿ ಗೆಳೆಯ?
ನನಗೊ
ಈ ರೋಗ ಹಿಡಿದು
ವರುಷವಾಯಿತು,ಇಪ್ಪತೈದು
ಕೊಟ್ಟಿಲ್ಲ ಯಾವ
ಹೊಸ ವೈದ್ಯನೂ,ಹಳೆರೋಗಿಯೂ
ಇನ್ನೂ ಇದಕ್ಕೆ ಮದ್ದು!!!

ಸ್ಥಿರಗೊಳಿಸುವ ಆಸೆ ನಿಲ್ಲಿಸಿ
ಈಗ
ಅನುಸರಿಸುತ್ತಿರುವೆ ಮನಸ
ಎಲ್ಲಿಗಿದರ ಪಯಣ?
ಹೇಗಿದರ ಪಯಣ?
ಯಾಕಿದರ ಪಯಣ?
ಯಾರಿದರ ಒಳಗಿರುವ ಯಜಮಾನ?
ಎನ್ನುವ "ಕೆಟ್ಟ ಕುತೂಹಲ"ದೊಂದಿಗೆ.

ಹೊಸ ಉಪಾಯ ದೊರೆತರೆ
ಗೆಳೆಯಾ..
ತಿಳಿಸೆನಗೆ
ಮರೆಯದೆ..ಮಹರಾಯ....
-----------------------

7 comments:

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಕೆ.ಕೆ.ಯವರೆ ,ಮನಸ್ಸಿನ ಸ್ಥಾಯಿ ಭಾವವನ್ನು, ಸ೦ಚಾರಿ ಭಾವದೊ೦ದಿಗೆ ಸಮೀಕರಿಸಿದರೆ ಸ್ಥಿರವಾಗಬಹುದೇನೋ?

Manasa said...

Naanentu heLalee... yaava vaidhyara baLee hogirenduu :) ...

good one n thanks for sending the link :)

ಮನಮುಕ್ತಾ said...

nice one!

ಸಾಗರದಾಚೆಯ ಇಂಚರ said...

ಆ ಫೋಟೋಕ್ಕೆ ಮತ್ತು ನಿಮ್ಮ ಬರಹಕ್ಕೆ
ಬಹಳಷ್ಟು ಹೋಲಿಕೆಯಿದೆ
ಮತ್ತೆ ಮತ್ತೆ ಫೋಟೋ ನೋಡಿ ಕವನ ಓದಿದೆ

Unknown said...

Good one!!..

Manjula said...

ಮನಸಿನ ಚಂಚಲತೆ ನಿಗ್ರಹ ಬೇಕಾ? ಮನಸೇಕೆ ಹರಿಯುವ ನೀರಾಗಬಾರದು..? ಹೊಸ ಯೋಚನಾ ಲಹರಿಗಳನ್ನೇ ಮೂಡಿಸುತ್ತಿದೆ, ನಿಮ್ಮ ಸರಳ ಸಹಜ ಕವನ..!!!

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ನೂರಾರು ಸಂಖ್ಯೆಯಲ್ಲಿ ಆಸಕ್ತಿಯಿಂದ ನನ್ನ ಬರಹಗಳನ್ನು ಓದುತ್ತಿರುವ ಎಲ್ಲ ಬಂಧುಗಳಿಗೆ ಆತ್ಮೀಯ ವಂದನೆಗಳು.
ಪ್ರತಿಕ್ರೀಯಿಸಿದ ನಿಮಗೆಲ್ಲ ಧನ್ಯವಾದಗಳು.

Post a Comment