Friday, March 5, 2010

ಪಯಣದ ಸುಖ!!

ನಿನ್ನಿಷ್ಟ ಏನಿದ್ದರೂ
ಸಾವು ಘಟಿಸುವ ತನಕ
ಬದುಕಲೇ ಬೇಕು
ಒದಗಿಬಂದದ್ದು
ಅನುಭವಿಸಲೇ ಬೇಕು.

ಹುಟ್ಟಿದ ಬಳಿಕ ಸಾವೇ
ಪಯಣದ ಕೊನೆ.
(ಇಚ್ಚಾಮರಣಿಗೂ ಕೊನೆಗೆ
ದೊರಕಿದ್ದು ಮರಣವೇ ತಾನೇ?)
ಅರಿವಾದರಿಷ್ಟು,...
ಇನ್ನು
ಆತಂಕಯಾಕೆ?

ಅತ್ತುಕರೆವ ಗೊಣಗಾಟ
ಚಿಂತೆಯ ಚಿತೆಯ ನರಳಾಟ
ಅಟ್ಟಿಬಿಡು ಆಚೆ.

ನಿನ್ನೊಳಗೇ ಇದೆಯಲ್ಲ,
"ಆನಂದದ ಅಮೃತಕಲಶ"
ಹೀರುತ್ತ ಖುಷಿಯ,
ಅನುಭವಿಸು ಪಯಣದ ಸುಖವ!
-------------------------


10 comments:

Subrahmanya said...

"ಇಚ್ಚಾಮರಣಿಗೂ ಕೊನೆಗೆ ಮರಣವೇ ತಾನೇ.." ..Superb lines. ಕವನ ಪಯಣದ ವಾಸ್ತವ.

ಸೀತಾರಾಮ. ಕೆ. / SITARAM.K said...

ತು೦ಬಾ ಸು೦ದರವಾದ ಕವನ

ಮನಮುಕ್ತಾ said...

ಕವನ ಇಷ್ಟವಾಯ್ತು..
ಸೊಗಸಾದ ಸಾಲುಗಳು.

ಮನದಾಳದಿಂದ............ said...

ಹುಟ್ಟಿನಿಂದ ಸಾವಿನ ವರೆಗಿನ ಪಯಣದ ಸುಖದ ಬಗ್ಗೆ ಸುಂದರ ಸಾಲುಗಳು, ನಿರಂತರವಾಗಿರಲಿ ನಿಮ್ಮ ಬರವಣಿಗೆ.
"ಇಚ್ಚಾಮರಣನಿಗೂ ಕೊನೆಗೆ ಸಾವೇ ತಾನೇ" ಅದ್ಭುತ!

Shiva Kote said...

ಕವನ ಚೆನ್ನಾಗಿದೆ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಇರುವುದರ ಇರುವಷ್ಟ್ಟು ಸಮಯ ಅನುಭವಿಸುವ ಆನ೦ದವೇ ಬೇರೆ.ಏನ೦ತೀರಿ ಕೆ.ಕೆ.ಯವರೇ?

ಓ ಮನಸೇ, ನೀನೇಕೆ ಹೀಗೆ...? said...

ಹುಟ್ಟು ಸಾವಿನ ನಡುವೆ ಯಾಕಿಷ್ಟು ತೊಳಲಾಟ ಎಂಬುದನ್ನು ಸುಂದರವಾದ ಕವನ ದ ಮೂಲಕ ಸರಳವಾಗಿ ತಿಳಿಸಿದ್ದೀರಿ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಓದಿದ ಮತ್ತು ಪ್ರತಿಕ್ರೀಯಿಸಿದ ಎಲ್ಲ ಗೆಳೆಯ/ಗೆಳತಿಯರಿಗೆ
ವಂದನೆಗಳು.

Raghu said...

ಬಿಂದಾಸ್ ಆಗಿ ಇರಿ ಜೀವ ಇರೋ ತನಕ...ಬಂದಿದ್ದೆಲ್ಲ ಬರಲಿ...
ಒಳ್ಳೆಯ ಕವನ...
ನಿಮ್ಮವ,
ರಾಘು.

ಅಜಕ್ಕಳ ಗಿರೀಶ ಭಟ್ said...

ಸಾಲ ಮಾಡಿ ತುಪ್ಪ ಕುಡೀಬೇಕು ಅನ್ನುವುದಕ್ಕಿಂತ ಭಿನ್ನವಾದ ಪಯಣಸುಖವನ್ನು ಹಾರೈಸುವುದರಿಂದ ಚೆನ್ನಾಗಿದೆ.- ಗಿರೀಶ.

Post a Comment