Wednesday, April 14, 2010


ಯಾವ ಮಾನ ಯಾರಿಗೋ?
------------------------

ಉರುಳುವ ಕಾಲಕ್ಕೆ
ವರುಷವೇನು? ನಿಮಿಷವೇನು?
ನಮಗೊಂದು ಲೆಕ್ಕಕ್ಕೆ ಲೆಕ್ಕ
ಸಂವತ್ಸರಕ್ಕೆ ,ವಾರಕ್ಕೆ
ತಿಥಿ,ಘಳಿಗೆ,ನಕ್ಷತ್ರ, ಜನಗಳಿಗೆ..

ತಿಂಗಳಿಗೊಂದು ಮಾನ
ಸೂರ್ಯಂಗೊಂದು ಮಾನ
ಸೂರ್ಯನ ಪಕ್ಷ!
ಚಂದ್ರನ ಪರ!!
ಯಾವ ಮಾನ ಯಾರಿಗೋ?

ಉರುಳುವ ಕಾಲಕ್ಕೆ...
ನರಳುವ ಮನುಜಗೆ
ವರುಷವೇನು? ನಿಮಿಷವೇನು??

ಸೌರಮಾನದಲ್ಲಿ
ಯುಗಾದಿ...
ಮೇಷದಲ್ಲಿ ವೇಷತೊಡುವ
ವಿಷುವಿನ
ಕಣಿಯೇ ಸಂಕ್ರಾಂತಿ..

ಪಂಚಭೂತಗಳ ನೆನಪಿಸುವ
ಪಂಚಲೊಹದ ಉರುಳಿ...
ತುಂಬಿಕೊಂಡ ನವಫಲಗಳ
ಕಂಡರೆ
"ವಿಷು ಕಣಿ"
ಶುಭವಂತೆ ವರುಷ ಪೂರ್ತಿ..

ಉರುಳುವ ಕಾಲ ಚಕ್ರದಲ್ಲಿ
ಆದಿಯೆಲ್ಲೋ? ಅಂತ್ಯವೆಲ್ಲೊ??.
ವೃತ್ತಕ್ಕೆ ಮೊದಲೇನು?ಕೊನೆಯೇನು??
ಸುಮ್ಮನೇ ಇರಲಾರದ
ನಮಗೊಂದು
ಲೆಕ್ಕ..
ಸೌರಮಾನ..ಚಾಂದ್ರಮಾನ..
ವಿಷು..ಯುಗಾದಿ.."ಕಣಿ"..ಪಂಚಾಂಗ ಶ್ರವಣ...
ಎಳೆ ಗೇರುಬೀಜದ ಪಾಯಸ...ಪಲ್ಯ!!

ಉರುಳವ ಕಾಲಕ್ಕೆ
ವರುಷವೇನು? ನಿಮಿಷವೇನು?
ಲೆಕ್ಕಕ್ಕೆ......... ಲೆಕ್ಕ
ಸಂವತ್ಸರಕ್ಕೆ ,ವಾರಕ್ಕೆ
ತಿಥಿ,ಘಳಿಗೆ,ನಕ್ಷತ್ರ, ಜನಗಳಿಗೆ..
-----------------------

19 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಎಲ್ಲರಿಗೂ "ವಿಷು" ಹಬ್ಬದ ಶುಭಾಶಯಗಳು.
ನಾಳೆ
ಬೆಳಿಗ್ಗೆ "ಕಣಿ" ನೊಡಿ,
ಹಿರಿಯರಿಗೆ ನಮಸ್ಕರಿಸಿ,
ಕಿರಿಯರಿಗೆ ಆಶೀರ್ವದಿಸಿ,
ಆನಂದದಿಂದ ಆಚರಿಸುವ
ಸೌರಮಾನ ಯುಗಾದಿ,
"ವಿಷು"--ಹೊಸವರ್ಷದ ಮೊದಲದಿನದ
ಮೊದಲ ಹಬ್ಬ,
ವರ್ಷಪೂರ್ತಿ ಶುಭ ತರಲಿ..

Shashi jois said...

ಹೊರಗೆ ಹಸಿರು ತೋರಣ

ಒಳಗೆ ಬೇವು ಬೆಲ್ಲದ ಮಿಶ್ರಣ

ನೋವು ನಲಿವಿನ ಸಮಾಗಮ

ನವ ವಸಂತದ ಆಗಮನ

ಸೌರಮಾನ ಯುಗಾದಿಯ ಶುಭಾಶಯಗಳು

ಸಾಗರದಾಚೆಯ ಇಂಚರ said...

ಕಾಲಗಳ ಬಗೆಗಿನ ಕವನ
ಜೊತೆಗೆ ಮನುಷ್ಯನ ಮನಸ್ಸಿನ ಮೇಲೆಯೂ ಪ್ರಭಾವ ಬೀರುವ ಕವನ
ಮಾನವನ ದ್ವಂದ್ವ ಮನಸ್ಸಿನ ಚಿತ್ರಣವೂ ಇದೆ
ಕಾಲ ಶಾಶ್ವತವಲ್ಲ ಎಂಬ ಸಂದೇಶವೂ ಇದೆ
ಸುಂದರ ಕವನ
ಎಲ್ಲರಿಗೂ "ವಿಷು" ಹಬ್ಬದ ಶುಭಾಶಯಗಳು.

Ittigecement said...

ನಿಮಗೂ..
ನಿಮ್ಮ ಮನೆಯವರಿಗೆಲ್ಲರಿಗೂ..
ವಿಶು ಹಬ್ಬದ ಶುಭಾಶಯಗಳು..

ನಾನು ಮುಂಬೈನಲ್ಲಿದ್ದಾಗ ಒಂದು ಮಲೆಯಾಳಿ ಕುಟುಂಬದವರ ಸಂಗಡ ಪೇಯಿಂಗ್ ಗೆಸ್ಟ್ ಆಗಿದ್ದೆ..
ವಿಶು ಹಬ್ಬದ ದಿನ ಹಿರಿಯರಿಗೆ ನಮಸ್ಕರಿಸಿ
ಅವರಿಂದ ಆಶೀರ್ವಾದ ಪೂರ್ವಕವಾಗಿ..
"ಹಣವನ್ನು ಪಡೆಯುತ್ತಿದ್ದೆ...

ಅವರಿಂದ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳ ಬೇಕಿತ್ತು..

ಮತ್ತೊಮ್ಮೆ ವಿಶು ಹಬ್ಬದ ಶುಭಾಶಯಗಳು..

ಹಳೆಯ ನೆನಪುಗಳನ್ನು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು..

Manju M Doddamani said...

ನಿಮಗೂ ನಿಮ್ಮ ಮನೆಯವರಿಗೂ ವಿಶು ಹಬ್ಬದ ಶುಭಾಶಯಗಳು..
ನಿಮ್ಮ ಕವನ ತುಂಬಾ ಚನ್ನಾಗಿದೆ
"ಉರುಳವ ಕಾಲಕ್ಕೆ
ವರುಷವೇನು? ನಿಮಿಷವೇನು?"
ಈ ಸಾಲುಗಳು ತುಂಬಾ ಇಷ್ಟ ವಾಯಿತು

Anonymous said...

ತುಂಬಾ ಚೆನ್ನಾಗಿದೆ..
ಗೇರು ಬೀಜದ ಪಾಯಸ, ಪಲ್ಯ ನೆನಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..
ನಿಮಗೂ ಕೂಡ 'ವಿಷು' ಹಬ್ಬದ ಶುಭಾಶಯಗಳು..

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಪ್ರತಿಕ್ರೀಯಿಸಿದ ಎಲ್ಲ ಸ್ನೇಹಿತ/ಸ್ನೇಹಿತೆಯರಿಗೆ ವಂದನೆಗಳು.

ದಿನಕರ ಮೊಗೇರ said...

nimagoo, nimma maneyavarigoo ellarigoo vishu habbada subhaashayagalu.......... kavana chennaagide...... nanna blog kade banni....

ಮನಸಿನಮನೆಯವನು said...

ರೀ.. Venkatakrishna.K.K..,

ಉರುಳುವಕಾಲದ ಬಗೆಗಿನ ಸಾಲುಗಳು ಇಷ್ಟವಾದವು..

ಸೀತಾರಾಮ. ಕೆ. / SITARAM.K said...

ನಿಲ್ಲದೇ ನಿಯಮಿತವಾಗಿ ಓಡುವಾ ಕಾಲಕ್ಕೊ೦ದು ಲೆಕ್ಕ. ಕಾಲದ ಲೆಕ್ಕಗಳ ಮೇಲೆ ತರ್ಕಭಧ್ಧಕವನ ಚೆ೦ದವ್ವಗಿ ಮೂಡಿದೆ. ಹೊಸವರ್ಷದ ಶುಭಾಶಯಗಳು.

Unknown said...

ವಿಷು ಹಬ್ಬದ ಶುಭಾಶಯಗಳು..

Snow White said...

nimagu saha vishu habbada shubashayagalu :)

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಪ್ರತಿಕ್ರೀಯಿಸಿದ ಎಲ್ಲ ಸ್ನೇಹಿತ/ಸ್ನೇಹಿತೆಯರಿಗೆ ವಂದನೆಗಳು.

Badarinath Palavalli said...

Nice poem sir,

Pl. visit my Kanada Poety Blog:
www.badari-poems.blogspot.com

- Badarinath Palavalli

geete said...

Nice photograph. :)

ಓ ಮನಸೇ, ನೀನೇಕೆ ಹೀಗೆ...? said...

ತುಂಬಾ ಚೆನ್ನಾಗಿದೆ ಕವಿತೆ.

ಅರುಂಧತಿ said...

ನಿಲ್ಲದ ಕಾಲದ ಬಗ್ಗೆ
ಕಾಲದ ಪರಿಧಿಯೋಲಕ್ಕೊಕ್ಕು
ನುಸುಳುವ ಕಾಲದ ಬಗ್ಗೆ ನಮಗೆ
ಅರುವು ಮೂಡಿಸಿದ್ದಕ್ಕೆ
ಧನ್ಯವಾದ . .ಬರೀತಾ ಇರಿ..:)

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಪ್ರತಿಕ್ರೀಯಿಸಿದ ಎಲ್ಲ ಸ್ನೇಹಿತ/ಸ್ನೇಹಿತೆಯರಿಗೆ ವಂದನೆಗಳು

ಅಜಕ್ಕಳ ಗಿರೀಶ ಭಟ್ said...

hosakavana yaake baredilla? vishuvuvina kavana baredu aagale 15 -20 dnagaladavu. bareyiri. iti, girisha

Post a Comment