Sunday, July 4, 2010
ಯಾರ ಕೃಪೆಯ,
ಯಾವಕಾಲದ ಮಹಲೋ?
--------------
ಸಾವಿರದ ಸಮಸ್ಯೆಗಳಿಗೆ,
ಪರಿಹಾರ
ಎಲ್ಲರಿಗೂ....ಎಲ್ಲ ಕಾಲಕ್ಕೂ ಎಲ್ಲೆಡೆಯೂ,
(ಕಾಲ ದೇಶಾತೀತವಾಗಿ)
ದೊರಕಿದ್ದರೆ....
ಇಲ್ಲೇ ಅಲ್ಲವೇ?
ಕಾಲ! ಅಹಾ,
ಅದೆಂತಹ ಕಲ್ಪನೆ!
ಪ್ರಕೃತಿಯೊಂದಿಗಿನ ಸಹಬಾಳ್ವೆಗಾಗಿ
ಹಗಲು ರಾತ್ರಿಯ ಚಕ್ರಕ್ಕೆ
ಎಣಿಕೆ ಬರೆಯುವ ಹುಚ್ಚಿನಲ್ಲಿ
ಕಟ್ಟಿಕೊಂಡ ಸುಂದರ ಮಹಲು!
ಇಲ್ಲಿ ಪಹರಿಗಳಿಲ್ಲ, ಒಡೆಯರೂ ಇಲ್ಲ.
ಗೊತ್ತಿಲ್ಲದ ಯಜಮಾನನ ಮಾಲಕತ್ವ ಒಪ್ಪಿ
ಸಾಗಿದೆ ಬದುಕು..ನಿರಾತಂಕ,ನಿರುಮ್ಮುಳ!
ಇಲ್ಲಿ ಬೀಸುವ ಗಾಳಿಗೆ,
ಬೆಳದಿಂಗಳಿನ ಸುಖ ನಿದ್ದೆಗೆ,
ಎಲ್ಲ ಮರೆಯುವ ಮರೆಸುವ
ಅದೆಂತಹ ಶಕ್ತಿ!
ಸಮಯದ ನಾಡಿ ಹಿಡಿದು
ಹೊತ್ತು ಹೊತ್ತಿಗೆ,
ಬೇಕಾದ ಎಲ್ಲವ...
ಬೇರಾರಿಗೂ ಇಲ್ಲವೆನ್ನುವಷ್ಟು ನೀಡಿ,
ನೋವ ನೀವುತ್ತ ಮನವ ಮುದಗೊಳಿಸಿ..ಮುದ್ದಿಸಿ,
ಶಕ್ತಿತುಂಬುವ
ಅದ್ಭುತ ಮಹಲು!
ಸವೆಸಲೇಬೇಕಾದ ಬದುಕಿಗೆ
ಸಾಸಿವೆಯಷ್ಟೂ ಕೊರತೆಯಾಗದಂತೆ...
ಅದೆಷ್ಟು ಲೆಕ್ಕಾಚಾರ..
ಯೋಚಿಸಬೇಕಾದ್ದಿಲ್ಲ..
ಒಡೆಯನಿಗೊಪ್ಪಿಸಿಕೊಂಡರಾಯಿತು!
ಇಷ್ಟು ನಿಶ್ಚಿಂತೆಯ
ಮನೆಯ ಮಡಿಲು ದೊರಕಿದ್ದು
ಯಾರ ಕೃಪೆಯೋ??
---------------
23 comments:
ಸರ್
ಸವೆಸಲೇಬೇಕಾದ ಬದುಕಿಗೆ
ಸಾಸಿವೆಯಷ್ಟೂ ಕೊರತೆಯಾಗದಂತೆ...
ಅದೆಷ್ಟು ಲೆಕ್ಕಾಚಾರ..
ಯೋಚಿಸಬೇಕಾದ್ದಿಲ್ಲ..
ಒಡೆಯನಿಗೊಪ್ಪಿಸಿಕೊಂಡರಾಯಿತು!
ಎಂತಾ ಸಾಲುಗಳು
VK ಸರ್,
ಕವನ ಚನ್ನಾಗಿದೆ.
" ಕಾಲನ ಮಹಲಲ್ಲಿ ಪಹರೆಗಳಿಲ್ಲ, ಒಡೆಯರಿಲ್ಲ! ಗೊತ್ತಿಲ್ಲದ ಯಜಮಾನನ ಮಾಲಕತ್ವ ಒಪ್ಪಿ ಸಾಗಿದೆ ಬದುಕು..ನಿರಾತಂಕ,ನಿರುಮ್ಮುಳ"
ಸುಂದರ ಸಾಲುಗಳು.
ಆಹಾ ! ಎಂತಹ ಮಾರ್ಮಿಕವಾದ ಕವನ !. ’ಅರ್ಥಗಳು’ ಹೊರಹೊಮ್ಮುತ್ತಿವೆ.
ಯಾರ ಬದುಕು ಎಲ್ಲೋ ? ಹೇಗೋ ? ಅದು ಹಾಗೆ .
ಗುರುಮೂರ್ತಿಯವರೇ,ಪ್ರವೀಣ್ರವರೇ,
ಧನ್ಯವಾದಗಳು.
ಕಳೆದ ಒಂದೂವರೆ ತಿಂಗಳಿಂದ ವೈಯಕ್ತಿಕ ಕಾರಣಗಳಿಂದ ಬ್ಲಾಗ್ ಕಡೆ ಬರಲಾಗಲಿಲ್ಲ.
ಈಗ ಮತ್ತೆ ಹವ್ಯಾಸದ ಈಕಣಕ್ಕೆ ಮರಳಿದ್ದೇನೆ..
ಸುಬ್ರಮಣ್ಯ ಭಟ್ರೆ....ವಂದನೆಗಳು
tumba chennagive sir saalugalu.. :)tumba ista aitu :)
nice poem. thanks -girisha
ವೆಂಕಟಕೃಷ್ಣ;ನಮಸ್ಕಾರ.ಕವನ ಚೆನ್ನಾಗಿದೆ.ಬ್ಲಾಗಿಗೆ ಬನ್ನಿ.ಧನ್ಯವಾದಗಳು.
ಬಿಳಿಯ ಹಿಮಕ್ಕೂ..
ಗಿರೀಶರಿಗೂ..
ವಂದನೆಗಳು.
Liked it, nice
nice one.
ಚೆಂದ ಆಶಯದ ಕವನ "ಒಡೆಯನಿಗೊಪ್ಪಿಸಿಕೊಂಡರಾಯಿತು" ಚೆ೦ದದ ಅಭಿವ್ಯಕ್ತಿ.
ವಿ.ಆರ್.ಭಟ್,
ರಘು,
ಸೀತಾರಾಮ್,
ನಿಮಗೆಲ್ಲ ವಂದನೆಗಳು.
ಪ್ರತೀ ಸಾಲೂ ಸುಂದರ.. ತುಂಬ ಒಳ್ಳೆಯ ಕವನ
ಚೆ೦ದದ ಕವನಕ್ಕೆ ಅಭಿನ೦ದನೆ.
ವಸಂತ್ , ಜ್ಯೋತಿ, ಮುಳಿಯಾಲ
ತಮ್ಮ ಪ್ರತಿಕ್ರೀಯೆಗೆ ವಂದನೆಗಳು.
sundaravada salugalu http://vdbhatsugavi.blogspot.com klik madi nodi
ಇದು ತಾಯಿಯ ಮಡಿಲಲ್ಲಿ ಮಾತ್ರ
ಉತ್ತಮ ಕವನ
ಪಂಪಾವನದ ಭಟ್ರಿಗೆ
ಹಾಗೂ
ಬೆಳ್ಳಾಲ ಗೋಪಿನಾಥ ರಾಯರಿಗೆ
ವಂದನೆಗಳು..
Sreeutha Venkata avarige,
Kaalada kavanada prayathnakke abhinandanehgalu!
Nannannu nimma bolgge suggest maadidhakke dhanyavadagalu!
Shubhashayagalondige,
Adarsha Mavinakuli!
ಧನ್ಯವಾದಗಳು..ಮಾವಿನಕುಳಿಯವರಿಗೆ....
ತು೦ಬ ಅರ್ಥವಿರುವ ಕವನ. ಇದನ್ನು ಅಳವಡಿಸಿದರ೦ತೂ ಬದುಕು ನಿರರ್ಗಳವಾದೀತು.
tumbaa chennagi moodi bandide kavanada saalugalu.. abhinandanegalu..!
Post a Comment