Sunday, July 25, 2010
ಮರೆವೆನೆ ಜೊತೆಯ?
--------------
ಕತ್ತಲ ಕಳೆಯಲು
ತಿಂಗಳ ಚಂದಿರ
ತಿಣುಕಾಡುವ
ಪರಿಯನು ಕಾಣುತ,
ಚುಕ್ಕಿಗಳಂದವು
ಬಾಂದಳದಣ್ಣ..
ನಾವಿರುವೆವು ಜೊತೆಗೆ.
ಜೊತೆಯಿದ್ದರೆ ಕೆಲಸವು ಹಗುರ
ಮನಸು ನಿರಾಳ.
ನಿಶಾದೇವಿಯ ಅಪ್ಪುತ,ತಬ್ಬುತ
ನಿದ್ದೆಗೆ ದೂಡುತ
ಚಂದಿರ ತಂದ
ಬೆಳದಿಂಗಳ ಚಂದ...
ಚುಕ್ಕಿಯ ಚಿಣ್ಣಗೆ
ಕಣ್ಣನು ಮಿಣುಕಿಸಿ
ಚೆಲ್ಲುತ ಬೆಳಕನು
ಚಂದಿರ ಅಂದ...
ಪ್ರೀತಿಯ ನೀಡಿ..ಜೋಡಿಸಿ ಕೈಯನು
ಜೊತೆಯಲಿ ನಿಂದಾ
ನಿಮ್ಮನು ಮೆರೆಸುವೆ ಆಗಸದೆತ್ತರ..
ಮರೆವೆನುಎಂತೂ..
ಮರೆಯೆನು ಎಂದೂ..
ಮರೆಯದೆ ಜತೆಯ
ಮೆರೆಯುವ ನಭದಿ
ಜೊತೆಯಲಿ ನಿಂದು
ಎಂದೆಂದೂ...
++++++
21 comments:
ಕೆಳಗಿನ ಸಾಲುಗಳು
''ಪ್ರೀತಿಯ ನೀಡಿ..ಜೋಡಿಸಿ ಕೈಯನು
ಜೊತೆಯಲಿ ನಿಂದಾ
ನಿಮ್ಮನು ಮೆರೆಸುವೆ ಆಗಸದೆತ್ತರ..
ಮರೆವೆನುಎಂತೂ..
ಮರೆಯೆನು ಎಂದೂ.''
ಸುಂದರವೋ ಸುಂದರ
ಸುಂದರವಾದ ಕಲ್ಪನೆ, ಬಂಧುರವಾದ ಕವನ!
ಬಹಳ ಸುಂದರ ಸಾಲುಗಳು...!
ಅಭಿನಂದನೆಗಳು...
ಸುಂದರ ಕವನ!ಇಷ್ಟವಾಯ್ತು.ಧನ್ಯವಾದಗಳು.
ತುಂಬ ಚೆನ್ನಾಗಿದೆ ಕವನ. ಒಂದು ರಾಗ ಹಾಕಿ ಸುಶ್ರಾವ್ಯವಾಗಿ ಹಾಡಬಹುದು. ಮನಸಿಗೆ ಹಿತವೆನಿಸಿತು.
ಚೆಂದದ ಕವನ!
ಚಂದದ ಸಾಲುಗಳು,
ತುಂಬಾ ಇಷ್ಟವಾಯಿತು........
Chandirana Angaladi beladingala Kavana...
ನವಿರಾದ ಭಾವದಲ್ಲಿನ...ಸೊಗಸಾದ ಸಾಲುಗಳು...ಕವನ ಚೆನ್ನಾಗಿದೆ.
Nice one...
ಒಹ್..! ತಮ್ಮ ಎ೦ದಿನ ಗ೦ಭೀರ ಶೈಲಿಯಿ೦ದ ಹೊರ ಬ೦ದು,ಸು೦ದರವಾಗಿ, ರಾಗದಲ್ಲಿ ಹಾಡಬಹುದಾದ ಚ೦ದದ ಕವನ ಕೊಟ್ಟದ್ದಕ್ಕೆ ತು೦ಬ ತು೦ಬ ದನ್ಯವಾದ ಸಾರ್.
ಪ್ರತಿಕ್ರೀಯಿಸುವ ಪ್ರೀತಿ ತೋರಿದ
ಎಲ್ಲ ಗೆಳೆಯ/ಗೆಳತಿಯರಿಗೆ,
ಧನ್ಯವಾದಗಳು.ವಂದನೆಗಳು.
ಕವನ ಮತ್ತದರ ಹಿಂದಿನ ಭಾವ ಚೆನ್ನಾಗಿದೆ. ಜೊತೆಗೆ ನಾವೆಲ್ಲಾ ಇರುವಾಗ ನೀನೊಬ್ಬನೇ ಕಷ್ಟಪಡಬೇಕೇಕೆ ಎಂದು ನಕ್ಷತ್ರಗಳು ಕೇಳುವ ಪರಿ ಹಿಡಿಸಿತು, ಥ್ಯಾಂಕ್ಸ್
ಚುಕ್ಕಿ ಮಾತು ಹಿಡಿಸಿತು, ಸುಂದರವಾಗಿದೆ :-)
ಚೆಂದದ ಕವನ ...ಧನ್ಯವಾದಗಳು..
nice one dear......
keep it up....
ವಿ ಅರ್ ಭಟ್,
ನಾಗರಾಜ್,
ಪ್ರಗತಿ ಹೆಗಡೆ,
ಶುಶಿಕುಮಾರ್,
ನಿಮ್ಮ ಪ್ರೀತಿಗೆ ಅಭಾರಿ...
ವಂದನೆಗಳು.
ಚೆಂದದ ಸಾಲಿನ ಕವನ .
tumba tumba chennagide padagala jodhane.. :)
ಶಶಿ ಜೋಯ್ಸ್ರಿಗೆ,
ಹಾಗೂ
ಸ್ನೋ ವೈಟ್..
ಇಬ್ಬರಿಗೂ ವಂದನೆಗಳು.
Post a Comment