Thursday, August 5, 2010



ಪಾರವಿಲ್ಲದ ಪ್ರೀತಿ..
=========

ನೋಡಿಲ್ಲ ಇದುವರೆಗೆ ನಿನ್ನ
ಆದರೂ ನಿನ್ನ ಮೇಲೆ
ಅದೇಕೋ
ಅಪಾರ ಪ್ರೀತಿ.
(ನೊಡಿಲ್ಲದ ಕಾರಣದಿಂದ
ಅಂತೂ ಖಂಡಿತ ಅಲ್ಲ!)

ನಿನ್ನನರಿತವರಂತೆ
ಅವರು..
ಇವರು ಅಂದ ಮಾತಿಗೆ
ಬೆಲೆಕೊಟ್ಟು,
ಬೆಲೆಕಟ್ಟಲಾಗದ
ಅವರ ಸಂಗದಲ್ಲಿ
ನಿನ್ನ ಕಾಣುವ ನನ್ನ ಪ್ರಯತ್ನ..
ಹುಸಿಹೋಗಲಿಲ್ಲ.

ನಿನ್ನ ಅಂದ ಚಂದ,
ಗುಣಗಳ ವರ್ಣನೆ ಕೇಳುತ್ತ,ಕೇಳುತ್ತ..
ನಿನ್ನ ಪ್ರೀತಿಯ ಆಳದಲಿ
ಮೀಸಿಬಂದ ಅವರ ತನುಗಂಧ
ಆಘ್ರಾಣಿಸುತ್ತ...ಇದ್ದಂತೆ,
ಪಾರವಿಲ್ಲದ ನಿನ್ನೋಳಗೆ
ಒಂದಾಗುವ..
ತೀರದ ಬಯಕೆ.

ನಿನ್ನಲ್ಲಿ ಒಂದಾಗಿ,
ನನ್ನೊಳಗೆ ನೀನಾಗಿ
ನೀನೇನಾನಾಗಿ
ನಾನಿಲ್ಲದಾಗುವ ಬಯಕೆ..

ಇದು ಹುಚ್ಚಲ್ಲ.
ಎದೆಯೊಳಗೆ ಹುಟ್ಟಿ,
ನಖ ಶಿಖಾಂತ ಹಬ್ಬಿ,
ಈಗ
ನೆತ್ತಿ ಸೀಳಿ
ಜ್ವಲಿಸುವ ಕಿಚ್ಚು.

ಅರೆ! ಇದೇನು ಬಿಂಬವೇ?
ಅಲ್ಲ,
ನಾನೇ ನಿನ್ನ
ಪ್ರತಿಬಿಂಬವೇ??
ಹೇಗೋ......
ನಾನೇ ನಿನ್ನೊಳಗೋ
ನೀನೇ ನನ್ನೊಳಗೋ

ಒಟ್ಟಿನಲ್ಲಿ ಎಂದಿಗೂ..
ಹಾಗೇ ಇರಲಿ
ನಿನ್ನಲ್ಲಿದ್ದ
ಪಾರವಿಲ್ಲದ ಪ್ರೀತಿ,
----------------

16 comments:

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಕಾಣದ ಅನ೦ತದಲ್ಲಿ ಕ೦ಡುಕೊಳ್ಳುವ ಪ್ರಯತ್ನವೇ ಪಾರವಿಲ್ಲದ ಪ್ರೀತಿ.
ಚೆನ್ನಾಗಿದೆ,ಸಾರ್.

sunaath said...

ಕವನದ ಭಾವ ಹಾಗು ರಚನೆ ಚೆನ್ನಾಗಿವೆ.

Dr.D.T.Krishna Murthy. said...

ಉತ್ತಮ ಆಧ್ಯಾತ್ಮಿಕ ಅನುಭೂತಿ ಉಳ್ಳ ಕವನ.

Subrahmanya said...

:). ಒಳ್ಳೆಯ ಕವನ.

PARAANJAPE K.N. said...

ತು೦ಬ ಚೆನ್ನಾಗಿದೆ

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಕುಸುಮ,ಸುನಾಥ್,ಡಿಟಿಕೆ,ಸುಬ್ರಮಣ್ಯ,ಹಾಗೂ ಪರಾಂಜಪೆಯವರೇ,
ಧನ್ಯವಾದಗಳು,
ಕವನ ಓದುತ್ತಾ,ಓದುತ್ತಾ,
ಭಾವವೋಂದನ್ನು ಮೂಡಿಸಿದರೆ,
ಕಲ್ಪನೆಯೊಂದು ಮನದೊಳಗೆ ಮಿಂಚಿದರೆ
ಅದು ಸಾರ್ಥಕವಾದಂತೆ.
ಎಂದು ನನ್ನ ಅನಿಸಿಕೆ.
ಅವ್ಯಕ್ತದೆಡೆಗಿನ ಒಲವು/ಪ್ರೀತಿ ಎಲ್ಲರಿಗೂ,ಎಲ್ಲರೊಳಗೂ
ಇರುವ ಸಂಗತಿ.
ಅದನ್ನು ನೆನಪಿಸುವ ಒಂದು ಪುಟ್ಟ ಪ್ರಯತ್ನ ಇದು ಅಷ್ಟೇ..

ಸಾಗರದಾಚೆಯ ಇಂಚರ said...

ನಿನ್ನೊಳಗಿನ ಪ್ರೀತಿಯ ವ್ಯಕ್ತತೆ ಚೆನ್ನಾಗಿದೆ
ಒಳ್ಳೆಯ ಶಬ್ದ ಜೋಡಣೆ

Unknown said...

"ಪಾರವಿಲ್ಲದ ಪ್ರೀತಿ" ಚೆನ್ನಾಗಿದೆ
ಪ್ರೀತಿಯ ಆಳ ಬಲ್ಲವರಾರು?

ಮನದಾಳದಿಂದ............ said...

nice one.........

ಗಿರೀಶ್ ರಾವ್, ಎಚ್ (ಜೋಗಿ) said...

ಬೆಳಗ್ಗೆ ಓದಿದೆ. ಮನಸ್ಸು ಮುದಗೊಂಡಿತು. ಥ್ಯಾಂಕ್ಸ್.

ಸೀತಾರಾಮ. ಕೆ. / SITARAM.K said...

ನೈಸ್! ತುಂಬಾ ಚೆನ್ನಾಗಿದೆ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸಾಗರದಾಚೆಯ ಇಂಚರ ನಿನ್ನ ಮೆಚ್ಚುಗೆಗೆ ವಂದನೆಗಳು.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಬೆಳ್ಳಾಲ,
ಮನದಾಳ,
ಜೋಗಿ,
ವಿ ಆರ್ ಭಟ್ರೆ,
ಸೀತಾರಾಮರೇ,
ನಿಮ್ಮೆಲ್ಲರ ಹರಕೆಗೆ ಪ್ರೀತಿಯ ಧನ್ಯವಾದಗಳು..

Snow White said...

kavana chennagide sir :)

Unknown said...

Super... tumbaa chennaagide..

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸ್ನೋ ವೈಟ್,(ಬಿಳಿಯ ಹಿಮ, ಅಂದ್ರೆ ಚೆನ್ನಾಗಿರುತ್ತಾ?)
ರವಿಕಾಂತ್ ಸಾರ್,
ತಮ್ಮ ಮೆಚ್ಚುಗೆಗೆ ವಂದನೆಗಳು.

Post a Comment