Thursday, August 19, 2010

ಚಿಂತೆ
-----


ಯಾರಿಗೆ ಬೇಡ ಹೇಳಿ?

ನಾವು ಇಲ್ಲಿ ಜೀವಂತವಾಗಿಇದ್ದೇವೆ,
ಅಂತ ನಮಗೇ ನೆನಪಾಗುವುದಕ್ಕೆ ,
ನಮ್ಮ ಎಲ್ಲ ಬುದ್ದಿವಂತಿಕೆ,ಶ್ರಮ /ಕ್ರಮ ಗಳ,
ಸಮಯದ
ಸಾರ್ಥಕ ಉಪಯೋಗಕ್ಕೆ,
ಜೀವನದ ಸಾದನೆಯ ಸಮಾದಾನಕ್ಕೆ .

ಚಿಂತಿಸಿ- ಚಿಂತಿಸಿ,
ಚಿಂತೆಗಳ,ಚಿಂತಾಮಣಿ ಕಟ್ಟು
ತಲೆಯ ಮೇಲೆ ಹೊತ್ತು ನಿಟ್ಟುಸಿರು ಬಿಡುತ್ತಾ ,
ಮತ್ತೆ ಸಮಸ್ಯೆಗಳ ಬಿಡಿಸುತ್ತಾ ,
ನಮ್ಮ ಬೆನ್ನ ನಾವೇ ತಟ್ಟುತ್ತಾ
ಸಾದಿಸಿದ್ದೇನೆ ಎಂದು ಉಬ್ಬಿಕೊಳುದಕ್ಕೆ .

ಒತ್ತಡದ ಒತ್ತಿಟ್ಟಿಗೆಯ,ಗಂಟು ಗಂಟಿನ ಬಲೆಯ,
ಸುತ್ತಿಕೊಳುತ್ತ,ನೋವು ಹತಾಶೆಯ ಹಾವುಗೆಯ ಮೆಟ್ಟಿ
ವಿಲ ವಿಲನೆ ಒದ್ದಾಟ ಮಾಡಿ ಯಾದರೂ
ನಾವು ನುಗ್ಗಿದ ಸುಳಿಯಿಂದ ,
ನಾವೇ
ಮೇಲೆದ್ದು,ಮೀಸೆ ತಿರುವಿ ಕೊಳ್ಳೊದಿಕ್ಕೆ
ಸಕಲ ಸಂಸಾರ ಭಾರವ
ಸಂಬಾಳಿಸಿದ ಆದರ್ಶ ಗ್ರಹಿಣಿ ಆಗೋದಿಕ್ಕೆ.

ಚಿಂತೆ ಯಾರಿಗೆ ಬೇಡ?

ಪಕ್ಕದಲ್ಲಿರುವ ಕಲ್ಲು ಚಪ್ಪಡಿಯ ಎಳೆಎಳೆದು
ಎದೆಯೊಡ್ಡಿ ಎದೆ ಗೂಡಲ್ಲಿ ಬೆಂಕಿಯ ಬೇಗೆಯೆಬ್ಬಿಸಿ
ಬೇನೆ ಬೇಸರಿಕೆಯ ನರಳಾಟದಲ್ಲಿ
ನೊಂದು ಬೆಂದರೂ
ನೋವು ನರಳಾಟದಿಂದ ಮರಳಿ
ಹೊರಳಿ ಹೊರಗೆ ಜಿಗಿದು
ಆನಂದ ಹೊಂದೂದಕ್ಕೆ ,

ಚಿಂತೆ ಯಾಕೆ ಬೇಡ ಹೇಳಿ ?

ಚಿಂತೆ ಯಾಕೆ ಮಾಡತಿಯಾ ?................
ಕೇಳೋದು ಸುಲಬ!

ನಮಗೇ ಬೇಕಾದ್ದು ,ನಾವೇ ಮಾಡದೆ ಸುಮ್ಮನೆ ಇರುವುದು
ಹೇಗಪ್ಪಾ ?
ಕಷ್ಟ ಕಷ್ಟ !
----------
ನೀವೆಲ್ಲ
ಮತ್ತೆ ಇದನ್ನೊಮ್ಮೆ ಓದಿದರೆ ಚೆನ್ನಾಗಿತ್ತು ಅನಿಸ್ತು.ಅದಕ್ಕೇ ಪೋಸ್ಟ್ ಮಾಡಿದೆ.

13 comments:

ಸೀತಾರಾಮ. ಕೆ. / SITARAM.K said...

ಚಿಂತೆಯ ಮೇಲಿನ ಚಿಂತನದ ಕವನ ಚಂದವಾಗಿ ಚೆಲ್ಲಿದೆ.

Dr.D.T.Krishna Murthy. said...

ನಿಮ್ಮ ಕವನ ಓದಿಯಾದರೂ ಚಿಂತೆಯನ್ನು ಕಂತೆಕಟ್ಟಿ ದೂರ ಬಿಸಾಡೋಣ.ಬ್ಲಾಗಿಗೆ ಬನ್ನಿ.ನಮಸ್ಕಾರ.

ಸಾಗರದಾಚೆಯ ಇಂಚರ said...

ಸರ್

ತುಂಬಾನೇ ಅರ್ಥ ಪೂರ್ಣ ಆಗಿದೆ
ಬದುಕಿನಲ್ಲಿ ಮಾಡಿದ ಅಲ್ಪ ಸಾಧನೆಯನ್ನೇ ನಾವು ದೊಡ್ಡದು ಅಂದುಕೊತಿವಿ

ಒಳ್ಳೆಯ ಪದ್ಯ

Unknown said...

ಚಿಂತೆ ಮತ್ತು ಚಿತೆ ಗೆ ಇರುವ ವ್ಯತ್ಯಾಸ ಕೇವಲ ಒಂದು ಸೊನ್ನೆ ಅಷ್ಟೇ!!!

sunaath said...

ತುಂಬ ಚೆನ್ನಾಗಿದೆ ಕವನ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಪಕ್ಕದಲ್ಲಿ ಅದರಷ್ಟಕ್ಕೇ ಇರುವ ಚಿಂತೆಯನ್ನು ನಾವಾಗಿ ಮೇಲೆಬಿದ್ದು,ಎಳೆದು ಮೈಮೇಲೆ ಹಾಕ್ಕೊಂಡು,ಬಳಿಕ ಕೊರಗಿ ಅಥವಾ ಪರಿಹರಿಸಿ ಕೊಂಡು ಹೆಮ್ಮೆ ಪಡುವವವರಿಗೆ ಏನೆನ್ನಬೇಕು ಹೇಳಿ??
ಪ್ರತಿಕ್ರೀಯಿಸಿದ ಎಲ್ಲರಿಗೆ ವಂದನೆಗಳು.

Raghu said...

tumba chennagide kavana..
Nimmav,
Raaghu.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಚಿ೦ತೆಯನ್ನು ಎಳೆದುಕೊಳ್ಳುವುದಲ್ಲ,ಅದು ಆವರಿಸಿಕೊಳ್ಳುವುದು.ಅದನ್ನು ಕಳಚಿಕೊಳ್ಳುವುದು ಸಹಜತೆ.ಚಿ೦ತೆಯೇ ಇಲ್ಲದಿದ್ದರೆ ಚಿತೆಯಲ್ಲಿದ್ದ೦ತಲ್ಲವೇ...?ಚಿ೦ತಿಸಬೇಕು.

SATISH N GOWDA said...

ಸರ್ ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಬೇಟಿ ........
ಸುಂದರ ಕವನಗಳು ,ಸುಮಧುರ ಸಾಲುಗಳು , ಅದ್ಭುತ ಕಲ್ಪನೆ ..... ಸುಂದರವಾಗಿದೆ ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ .... ನಿಮಗೆ ನನ್ನವಳಲೋಕಕ್ಕೆ ಆತ್ಮಿಯ ಸ್ವಾಗತ


SATISH N GOWDA

http://nannavalaloka.blogspot.com/

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಧನ್ಯವಾದಗಳು ಸತೀಶ್,

ಖಂಡಿತ ಬರ್ತೇನೆ.

venkat.bhats said...

ಒತ್ತಡದ ಒತ್ತಿಟ್ಟಿಗೆಯ,ಗಂಟು ಗಂಟಿನ ಬಲೆಯ,
ಸುತ್ತಿಕೊಳುತ್ತ,ನೋವು ಹತಾಶೆಯ ಹಾವುಗೆಯ ಮೆಟ್ಟಿ
ವಿಲ ವಿಲನೆ ಒದ್ದಾಟ ಮಾಡಿ ಯಾದರೂ
ನಾವು ನುಗ್ಗಿದ ಸುಳಿಯಿಂದ ,
ನಾವೇ
ಮೇಲೆದ್ದು,ಮೀಸೆ ತಿರುವಿ ಕೊಳ್ಳೊದಿಕ್ಕೆ
ಸಕಲ ಸಂಸಾರ ಭಾರವ
ಸಂಬಾಳಿಸಿದ ಆದರ್ಶ ಗ್ರಹಿಣಿ ಆಗೋದಿಕ್ಕೆ.

tumbaa chennaagide

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ವೆಂಕಟ್ರಮಣ ಭಟ್ರಿಗೆ,


ತಮ್ಮ ಮೆಚ್ಚುಗೆಯ ಕಮೆಂಟ್ ಗೆ ವಂದನೆಗಳು...ಸಾರ್.
ನನ್ನ ಉಳಿದ ಕವನಗಳನ್ನೂ ಓದಿ ಪ್ರತಿಕ್ರೀಯಿಸಿ.

sharma said...

Kavana arthapoornavuu sundaravuu aagide

Post a Comment