Friday, October 15, 2010
ಆರು ಚಕ್ರದ ಅಂದದರಮನೆ.
-----------------------
ಮತ್ತೆ ಕರೆಯಬೇಡ ಕಣೆ,ನೀನು ಕಾಮಿನಿ,
ಕಾಮನ ಅರಗಿಣಿ,
ಕಡೆಗಣ್ಣನೋಟದಲಿ ಕೆಣಕಿ, ನನ್ನಲ್ಲಿ
ಆರುತ್ತಿರುವ ಕಿಚ್ಚನ್ನು ಕೆದಕ ಬೇಡವೇ..
ನನ್ನೆದುರಿನ ಚಿನ್ನದ ಚಿಗರೆಯಾಗಿ
ಆಸೆಯ ಉರಿಗೆ ತಿದಿಯೂದಿ
ಭಾವ ಬದಲಾಗಿ,ಕ್ರೋಧ ಹುಟ್ಟಿ
ಕೋಪದ ಕೈಗೊಂಬೆಯಾಗಿಸ ಬೇಡ ಕಣೇ..
ನಿನ್ನಪಡೆಯುವ ಹರ ಸಾಹಸದ
ವೆಚ್ಚಕ್ಕೆ ಹೊನ್ನ ಕೂಡಿಡುವ
ಲೋಭಿಯಾಗಿಸಬೇಡವೇ...ಚಿನ್ನಾ..
ಮೋಹದ ಮಾಯಾ ಮುಸುಕನ್ನು ಮುಚ್ಚಿ,
ಮರೆಸುತ್ತ ಲೋಕದ ರೀತಿನೀತಿಯ
ಚೌಕಟ್ಟಿನಿಂದಾಚೆಗೆ ಸೆಳೆಯಬೇಡವೇ..
ಮೋಹನಾಂಗೀ..
ಆಮೋದ ಪ್ರಮೋದದ
ಹಳೆನೆನಪನುದ್ದೀಪಿಸಿ,
ಮದ ತುಂಬಿ,ಉನ್ಮತ್ತನನ್ನಾಗಿಸ ಬೇಡ
ಕಣೇ..ಮದಗಜಗಾಮಿನಿ.
ನಿನ್ನೆಗಳ ಮರೆಯುವ ಪ್ರಯತ್ನಕ್ಕೆ
ಮಾತ್ಸರ್ಯದ ಸವತಿಯಾಗಿ ಕಾಡಬೇಡವೇ..
ಕನಸಿನ ಕನಕಾಂಗಿ..
ಕಾಡಿ ನೂಕದಿರು ಮತ್ತೊಮ್ಮೆ ನನ್ನ
ಜೀವನದ ಜೋಕಾಲಿಗೆ...
ಅರಿವು ಮರೆಸುವ ಆರು ಚಕ್ರದ ಅಂದದರಮನೆಗೆ...
------------------------
21 comments:
ಒಮ್ಮೆ ಆದ ಅನುಭವ (ಕಹಿಯಾದ) ಮತ್ತೊಮ್ಮೆ ಆಗದಿರಲೆಂದು ಕೇಳಿಕೊಳ್ಳುವ ಪರಿ ಚೆನ್ನಾಗಿ ಮೂಡಿ ಬಂದಿದೆ.
ನೀನು ಮತ್ತೊಮ್ಮೆ ಕರೆದರೆ, ಸೋಲು ನನ್ನದೇ ಎನ್ನುವ ಅಳುಕು,ಕಾಳಜಿ ಕಾಣಸಿಗುತ್ತದೆ.
ಇಲ್ಲಿ ಕೋಪ ಮಿಶ್ರಿತ ವಿನಂತಿ ಮಾಡುತ್ತಾ . . .ಹಾಗು ಎಚ್ಚರಿಕೆ ನೀಡುತ್ತಾ ಹೊಗಳುವ ರೀತಿ ಚೆಂದ . . .
good one.. :)
ಒಳ್ಳೆಯ ಕವನ ಸರ್.ಇಷ್ಟ ಆಯಿತು.
ನಿಮ್ಮ ತಪ್ಪುಗಳನ್ನೆಲ್ಲಾ ’ಆ’ ಮದಗಜಗಾಮಿನಿಯ ಮೇಲೆ ಆರೋಪಿಸುವುದು ಸರಿಯೇ ? :).
ಚಿನ್ನಾ, ಮೋಹನಾಂಗೀ, ಇತ್ಯಾದಿಗಳೆನ್ನುತ್ತಲೇ ನಿಮ್ಮನ್ನ ತೆರೆದುಕೊಂಡ ರೀತಿ ಕವನದಲ್ಲಿ ಚೆನ್ನಗಿ ಮೂಡಿದೆ.
ಕವನ ಸೊಗಸಾಗಿದೆ ಸರ್.ಹೊಗಳಿಕೆಯ ನಂತರ ತುಸು ಕೋಪ ಇಷ್ಟ ಆಯಿತು..
ಮತ್ತೆ ಕರೆಯಬೇಡ ಕಣೆ,ನೀನು ಕಾಮಿನಿ,
ಕಾಮನ ಅರಗಿಣಿ,
ಕಡೆಗಣ್ಣನೋಟದಲಿ ಕೆಣಕಿ, ನನ್ನಲ್ಲಿ
ಆರುತ್ತಿರುವ ಕಿಚ್ಚನ್ನು ಕೆದಕ ಬೇಡವೇ..
chennaagide .nimma lahari heege haridu barali.
ಕಾಡಿ ನೂಕದಿರು ಮತ್ತೊಮ್ಮೆ ನನ್ನ
ಜೀವನದ ಜೋಕಾಲಿಗೆ...
ಅರಿವು ಮರೆಸುವ ಆರು ಚಕ್ರದ ಅಂದದರಮನೆಗೆ...
arishadvargagalannolagonda kavana! tumba chennaagide. dhanyavaadagalu.
Thanks to visit my blog.
Your poem is also nice.
Thank U. Keep visiting my blog.
ಮಾಯೆಗೆ ಸೋಲದಿರಲು ಸಾಧ್ಯವೆ? ಕಾಮಿನಿಯ ಕವನ ಚೆನ್ನಾಗಿದೆ.
ತುಂಬಾ ಚೆನ್ನಾಗಿದೆ ಸರ್
ನಾಗರಾಜ್,ದಿಲೀಪ್,ಡಾ.ಡಿ.ಟಿ.ಕೆ.ಮೂರ್ತಿ,ಸುಬ್ರಹ್ಮಣ್ಯರೇ,
ಶಶಿ,ಬಾಲು,ಗುಬ್ಬಚ್ಚಿ ಸತೀಶ್,ಸುನಾಥ್,
ದೀಪಸ್ಮಿತಾ,ಹಾಗೂ ವಸಂತ್...
ನಿಮಗೆಲ್ಲರಿಗೂ ವಂದನೆಗಳು.
ಪ್ರಭಾಮಣಿ ನಾಗರಾಜ್,
ಅರಿಷಡ್ವರ್ಗಗಳ ಸುಳಿಗೆ ಸಿಕ್ಕ ಮನುಜನ ಮನಸನ್ನು,
ಮತ್ತು ಪುನ: ಆ ಗೊಂದಲದ ಗೊಜಲಿಗೆ
ಸಿಲುಕಬಾರದೆನ್ನುವ ಮನಸ್ಥಿತಿಯನ್ನು ಹಿಡಿದಿಡುವ ಪ್ರಯತ್ನ,
ಇದನ್ನು ಗುರುತಿಸಿ ಅಭಿನಂದಿಸಿದ್ದೀರಾ ತಮಗೆ ಆತ್ಮೀಯ ವಂದನೆಗಳು.
ನನ್ನ ಹಿಂದಿನ ಕವನಗಳನ್ನೂ ಓದಿ ಪ್ರತಿಕ್ರೀಯಿಸಿದರೆ ನಾನು ಸಂತೋಷಪಡುವೆ.
ಆಧ್ಯಾತ್ಮದ ಒಲವಿರುವ,ಸ್ವಲ್ಪ ಗಂಭೀರವಾದ ಕವನಗಳನ್ನು ಮೆಚ್ಚುವವರು
ತುಂಬಾವಿರಳ.ಒಂದೆರಡು ಕವನಗಳನ್ನು ಬಿಟ್ಟರೆ ನನ್ನ ಉಳಿದ ಎಲ್ಲ ಕವನಗಳೂ
ಒಂದಷ್ಟು ಗಂಭೀರವಾದದ್ದು ಮತ್ತು ಒಳಗಿನ ಚಿಂತನೆಗೆ ಸಂಬಂದಿಸಿದ್ದು,
ಅಂತ ನನ್ನ ಅನಿಸಿಕೆ. ಓದಿ ತಮ್ಮ ಅಭಿಪ್ರಾಯ ಬರೆಯಿರಿ.
ಸರ್
ಕಹಿ ಅನುಭವಗಳ ನಾವರಣ ಮತ್ತೆ ಆಗದಿರಲಿ ಎಮ್ಬ ಆಶಯ ಇಷ್ಟವಾಯಿತು
ಸಾಲುಗಳು ಅದ್ಭುತ
ವಾರೆ ವ್ಹಾಯಾ ಸೂಪರ್ ಕಣ್ರೀ ನಿಮ್ಮ ಕವನ ...
wow.. super agid eri... hige mattastu barataa irali...
ಆರು ಚಕ್ರದ ಅಂದದ ಅರಮನೆ ಅನುಭವ ಇನ್ನೂ ನನಗೆ ಆಗಿಲ್ಲ :)...ನಿಮ್ಮ ಅನುಭವಗಳ ಹೇಳಿಕೊಂಡ ರೀತಿ ಚನ್ನಾಗಿದೆ.ಸಿಹಿ ಮತ್ತು ಕಾರದ ಮಿಶ್ರಣ ಚನ್ನಾಗಿದೆ ಸರ್ .
ಕವನ ಚೆ೦ದವಿದೆ, ಆದರೂ ಏಕೆ ಅಷ್ಟೊ೦ದು ಕೋಪ ಸರ್?
ಶುಭಾಶಯಗಳು
ಅನ೦ತ್
ಅರಿಷ್ಡವರ್ಗದಲ್ಲಿ ಸಿಕ್ಕ ಮನಸ್ಸಿನ ತೊಳಲಾಟ ತುಂಬಾ ಚೆನ್ನಾಗಿ ಮೂಡಿಬಂದಿದೆ.
ಅರಿವು ಮರೆಸುವ ಆರು ಚಕ್ರದ ಅಂದದರಮನೆಗೆ. matte kadabeda anta heluva ritiyali, matte matte kaduva avala kadege nimma prtithinu ide ha ha
ಕೆ.ಕೆ.ಯವರೇ ಷಟ್ ಚಕ್ರಗಳ ಮೇಲಿನ ಹಿಡಿತ ,ಅರಿಷಡ್ವರ್ಗಗಳಳನ್ನು ಮೀರಿ ನಿ೦ತಾಗ ಸೇರಬಹುದಲ್ಲವೇ ಅ೦ದದರಮನೆಗೆ....,
ಧನ್ಯವಾದ ಮತ್ತು ಅಭಿನ೦ದನೆಗಳು.
ತು೦ಬಾ ಚೆನ್ನಾಗಿ ಅರಿಷಡ್ವರ್ಗಗಳು ಅನವರಣಗೊ೦ಡು ಮನವ ಸೆಳೆವ ಪರಿ ಹೇಳಿದ್ದಿರಾ,,
ಇಷ್ಟವಾಯಿತು.
Post a Comment