Sunday, October 24, 2010
ರೂಪಾಂತರ
-----------
ಬೀಜದೊಳಗಿದ್ದೆನೋ?
ಗೊತ್ತಿಲ್ಲ..
ಬೀಜ ಲಯವಾಗಿ
ಮೊಳಕೆ ಚಿಗುರಾದೆ.
ಚಿಗುರೊಳಗಿದ್ದೆನೋ?
ಗೊತ್ತಿಲ್ಲ..
ಚಿಗುರು ಚಿರುಟಿ
ಗಿಡವಾಗಿ ಮೇಲೆದ್ದೆ.
ಮೇಲೆ..ಮೇಲೆ
ಒಂದಕ್ಕೆ ಎರಡಾಗಿ
ಎರಡು ನೂರಾಗಿ
ಸಾವಿರಾರು ಟಿಸಿಲೊಡೆದು
ಲಕ್ಷ ಲಕ್ಷ ಎಲೆ ಬೆಳೆದು.
ಉದುರಿ ಉದುರಿ
ಮೆತ್ತೆ ಬೆಳೆಯುತ್ತಾ
ಹೂವಾಗಿ ಅರಳಿನಿಂತೆ..
ಅರಳಿ ಮುದುಡಿದ್ದೇ..
ಕಾಯಾದೆ..
ಕಾಯ ಕಹಿ/ದೊರಗು
ರುಚಿ ಕಳೆದು....
ರುಚಿತುಂಬಿ ಹಣ್ಣಾದೆ,ಜಗದ ಕಣ್ಣಾದೆ.
ಉದುರಿ ಅಲ್ಲಿಯೇ ಕೊಳೆತು
ಬೀಜವಾದೆ..
ಕಾಯುತ್ತಿರುವೆ ಎಂದಿಗೋ
ನನ್ನ ವಾಯಿದೆ???
--------------
25 comments:
ಒಳ್ಳೆಯ ಕವನ.ಅಭಿನಂದನೆಗಳು.
ಅದ್ಬ್ಘುತವಾದ ಸೃಷ್ಠಿಕ್ರಿಯೆಯ ಪುನರಾವರ್ತನೆಯ ಚಿತ್ರಣ. ಬದುಕಲ್ಲಿ ಕಳೆಯುತ್ತಿರುವದರಲ್ಲಿ ಬೆಡಗಿನ ಹುಡುಕು ನೋಟ.
Beautiful presentation of a Life Cycle.Thank You
ಜೀವನ ಚಕ್ರದಲ್ಲಿ ಎಲ್ಲರೂ ಸರದಿಗಾಗಿ ಕಾಯಲೇಬೇಕು.ಮತ್ತು ಬದುಕಬೇಕು.
ಡಾ.ಡಿ.ಟಿ.ಕೆ,ಸೀತಾರಾಮ್,ನಾಗರಾಜ್
ತಮ್ಮ ಪ್ರತಿಕ್ರೀಯೆಗೆ ವಂದನೆಗಳು.
ಕುಮಾರಣ್ಣಾ,
ಒಂದು ಅಳಿಯುವ(ಲಯವಾಗುವ) ಕ್ರೀಯೆಯ ಜೊತೆಯೇ ಇನ್ನೊಂದು ಹುಟ್ಟು ಅಡಗಿದೆ.
ಅಥವಾ ಒಂದು ಇಲ್ಲವಾಗದೆ ಇನ್ನೊಂದರ ಉದಯ ಇಲ್ಲವೇನೋ ಎಂದು ಅನಿಸುತ್ತದೆ.
ಹಾಗದರೆ ಒಂದು ಸ್ಥಿತಿಯ ನಾಶವೇ ಇನ್ನೊಂದು ರೂಪದ ತೋರ್ಪಡಿಕೆಗೆ ಸೋಪಾನವೇ?
ಕಾಯಿ ಹಣ್ಣಾಗುವುದೂ,ಕಾಯ ಹಣ್ಣಾಗುವುದೂ ಎರಡನ್ನೂ ಜೀವನ ಚಕ್ರದ ತಿರುಗುವಿಕೆಯನ್ನು ಸೂಚಿಸಲು ಬಳಸಿದ್ದೇನೆ.
ಮತ್ತು
ಇವೆಲ್ಲದಕ್ಕೂ ಒಂದು ವಾಯಿದೆ
(ಎಂದಿಗೆಂದು ಗೊತ್ತಿಲ್ಲದಿದ್ದರೂ) ಇದೆ ಖಂಡಿತ ಎನ್ನುವ ಆಶಾಭಾವದ ಆಶಯವನ್ನೂ ಈ ಕವನ ಹೊಂದಿದೆ ಎನ್ನುವುದು ಸಂತೋಷದ ಸಂಗತಿಯಲ್ಲವೇ?
ತಮ್ಮ ಆಪ್ತ ಪ್ರತಿಕ್ರೀಯೆಗೆ ವಂದನೆಗಳು.
ಕೆ.ಕೆ.ಯವರೇ,ಕಾಯ,ಮತ್ತು ಕಾಯುವ (ವಾಯಿದೆ)ಪ್ರಕ್ರಿಯೆ ಜೀವನ ಚಕ್ರದಲ್ಲಿ ಚಕ್ರದ೦ತೆಯೆ.ಈ ಮಧ್ಯದಲ್ಲಿ ರೂಪಾ೦ತರ ಪ್ರಕಿಯೆಗಳೆಲ್ಲ ನಡೆಯಬೇಕು.ಹಾಗಾಗಿಯೇ ತತ್ವಾರ್ಥದಲ್ಲಿ"ಮತ್ತು ಬದುಕಬೇಕು." ಎ೦ದಿದ್ದು.ಹಾಗಿದ್ದಲ್ಲಿಯೇ ಪೂರ್ಣತ್ವವಲ್ಲವೇ....?
ವೆಂಕಟ್ ಸರ್, ಕವಿತೆ ಸುಂದರವಾಗಿದೆ. ಬದುಕು ಬಹುರೂಪಿ. ರೂಪವಷ್ಟೇ ಬದಲಾಗಿದೆ, ಮತ್ತೊಂದು ಹೊಸ ರೂಪದ ಕೃತಿಯೊಂದಿಗೆ...!
simple na superb sir;)
ವೆ.ಕಿ.ಬೆಳವಣಿಗೆ ಮತ್ತೆ ಆಶಯ ಹೇಗೆ ಮೇಳೈಸುತ್ತೆ ಪರಿಸರದೊಡನೆ ಅನ್ನೋ ಸೂಕ್ಷ್ಮವನ್ನು ಚನ್ನಾಗಿ ಕವನಿಸಿದ್ದೀರಿ...
ಉತ್ತಮ ಕವಿತೆ..
ನನ್ನ 'ಮನಸಿನಮನೆ'ಗೂ ಬನ್ನಿ.
ಜೀವನ ಚಕ್ರ ಒಂದು ಬೀಜದ ಮೂಲಕ ಸೊಗಸಾಗಿ ಹೊಮ್ಮಿದೆ.
ಸುಂದರ ಕವನಕ್ಕೆ ವಂದನೆಗಳು
kavite chennagide...
ವಿನಯ್,
ನನ್ನ ಮನದ ಭಾವಕ್ಕೆ ಕನ್ನಡಿ ಹಿಡಿದಾಗ,
ಜಲನಯನ,
ಕತ್ತಲೆ ಮನೆ,
ಅಪ್ಪ-ಅಮ್ಮ,
ವಸಂತ್,
ಆಶಾ,
ನಿಮ್ಮ ಪ್ರತಿಕ್ರೀಯೆಗೆ ಧನ್ಯವಾದಗಳು.
ನನ್ನ ಹಳೆಯ ಕವನಗಳ ಕಡೆಗೂ ಕಣ್ಣು ಹಾಯಿಸಿ...
Superb!!
ಧನ್ಯವಾದಗಳು ಗೋರೆ ಸರ್..
very nice..!
Tanks..Manamuktaaa..
nice one!!!!!
ಕವನ ಚೆನ್ನಗಿದೆ.
ವಾಣಿಶ್ರೀ,ಸೌಮ್ಯಾ.,
ತಮ್ಮ ಮೆಚ್ಚುಗೆಗೆ ನನ್ನಿ...
beejada saarthakateyanna kavanadalli bahala sogasaagi bimbisiddeera.abhinandanegalu.
ಪುಟ್ಟ ಪುಟ್ಟ ಪದದಲ್ಲಿ ಕಟ್ಟಿದ ಕವಿತೆ ಪುಟ್ಟದಾದ ಬದುಕನ್ನು ಎಚ್ಚರಿಸುವಂತಿದೆ
Sir
chennagide kavite
putta padagallali kattita putta kavite, abhinandane nimage
ಜಿ.ಎಸ್.ಕಲಾವತೀ,ಚುಕ್ಕಿ ಚಂದಿರ,ಡಾ.ಗುರುಮೂರ್ತಿ ಸರ್,
ತಮ್ಮ ಸಾಹಿತ್ಯದಾಸಕ್ತಿಗೆ ವಂದನೆಗಳು..
ಆಗಾಗ ಬರ್ತಾಇರಿ.
ಕವನ, ಬರೆದ ಕವಿಯ೦ತೆ ಚೆನ್ನಾಗಿದೆ.
Post a Comment