ಸತ್ಯ, ಶಾಂತಿ, ತ್ಯಾಗ,ನ್ಯಾಯ,
ಪರೋಪಕಾರ, ದಯೆ, ಕರುಣೆ,
ದಾನ, ದರ್ಮ, ಪ್ರೀತಿ,ಪ್ರೇಮ,
ಬೇಕಾಗಿದ್ದು ಸಾಮಾಜಕ ಜೀವನ ನೆಮ್ಮದಿಯಿಂದ
ವ್ಯವಸ್ಥಿತವಾಗಿ ನಡೆಯೋದಕ್ಕೆ.
ಮಾತ್ರ.
ಮನಸನು ಮುದುಡಿಸಿ,ಸೃಜನ ಶೀಲತೆಯ ಹೊಸಕಿ
ಕಣ್ಣಿಗೆ ಪಟ್ಟಿ ಕಟ್ಟಿ ದುಡಿಸೋಕಲ್ಲ.
ಮುಗ್ದರ ಸವಾರೀ ಮಾಡೋಕಲ್ಲ
ಚಿಕ್ಕ ಮೀನನು ,ದೊಡ್ಡ ಮೀನು ನುಂಗುವ
ಈ ಜಗತ್ತಲ್ಲಿ
ಇಂದು ಕಾಣುತ್ತಿರೋದು
ಈ ಎಲ್ಲದರ ಹೆಸರಲ್ಲಿ
ನಡೆಯೋ ಶೋಷಣೆ
ಅರೆ! ಬಿಚ್ಚಿಬಿಡಿ
ಮನಸ್ಸು ಹೊರಡಲಿ,ಹಾರಾಡಲಿ,
ಕಲಾ ಕಲ್ಪನೆಯ ಕುದುರೆಯನ್ನೇರಿ .
ವಿಹರಿಸಲಿ ಮುಕ್ತ ಬಾನಂಗಳದಲಿ .
ಚಿಂತೆ!
ಚಿಂತೆಯಾದರೆ ನಿಮಗೆ,
ಮತ್ತೆ ಸಿಲುಕುವಿರಿ
ಒಳಗೊಂದು,ಹೊರಗೊಂದು,ನಟನಾಚತುರ ವಿಶಾರದರ,
"ಗಾಳವಿಕ್ಕುವ,ಲೋಕಕ್ಕೆ ಉಚಿತ ಬುದ್ದಿ ಹೇಳುವ"
ಅತಿ ಬುದ್ದಿವಂತರ ಚತುರ ಚಾದರದೊಳಗೆ .
ಮೆಟ್ಟಿ ಮುರಿದಿಕ್ಕಿ ಬಾವನೆಗಳ.....
...ಅತಿಯನ್ನ
ಅತಿಯಾದರೆ ಅಮೃತವೂ ವಿಷ.
3 comments:
ಮೊದಲ ಬಾರಿಗೆ ನಿಮ್ಮ ಬ್ಲಾಗ್ ಕಂಡೆ.. ಚೆನ್ನಾಗಿದೆ... ಸತ್ಯ, ಶಾಂತಿ, ತ್ಯಾಗ,ನ್ಯಾಯ,ಪರೋಪಕಾರ, ದಯೆ, ಕರುಣೆ,ದಾನ, ದರ್ಮ, ಹುಹ್ ಇದೆಲ್ಲ ಈಗ ಎಲ್ಲಿದೆ ಸ್ವಾಮೀ... ಈ ಬೆಂಗಳೂರಿನಲ್ಲಂತೂ ನನಗೆ ಎಲ್ಲೂ ಕಾಣಿಸಲಿಲ್ಲ...
ಬ್ಲಾಗ್ ಎಡ್ಡೆ ಉಂಡು... ಒರ ಎನ್ನ ಬ್ಲಾಗ್ ಗ್ಲ ಬಲೆ..
chenagide, berita iri, odta irtini
thenx...........
nimagellariguuuuuu......
Post a Comment