ನಾಟಕ....ಎಲ್ಲ ನಾಟಕ
~~~~~~~~~~~~`
ಏನು ವಿಚಿತ್ರ!
ನಾಟಕದಲ್ಲಿ
ಪರಿಣಿತರು ನಾವೆಲ್ಲ.
ಬಾಲ್ಯದಿಂದಲೇ,
ಅಪ್ಪ ,ಅಮ್ಮನಲ್ಲಿ ,
ಅಣ್ಣ,ತಮ್ಮ,
ಅಕ್ಕ,ತಂಗಿಯರಲ್ಲಿ,
ಎಲ್ಲಕಡೆಯಲ್ಲಿ,ಎಲ್ಲೆಂದರಲ್ಲಿ,ಸುತ್ತುಮುತ್ತಲ್ಲಿ,
ನಾವೆಲ್ಲ ಪಾತ್ರ ದಾರಿಗಳು,
ಸೂತ್ರ ಹಿಡಿದವನು ಮೇಲೊಬ್ಬ
ಅಂತ ಹೇಳುದನ್ನ ಕೇಳುತ್ತ.........
ಇದ್ದರೂ
ನೆನಪಿರಲ್ಲ ನಮಗೆ ನಮ್ಮ ಬಗ್ಗೆ.
ನಾಟಕದೊಳಗೆ ನಾಟಕ ಮಾಡುವುದರಲ್ಲಿ,
ನಮ್ಮನ್ನು ಮಿರಿಸುವರು ಯಾರು ಹೇಳಿ?
ಒಮ್ಮೊಮ್ಮೆ
ಅಸ್ಟು ತಲ್ಲೀನತೆ ನಮಗೆ.
ನಾಟಕದೊಳಗಿನ ನಾಟಕದಲ್ಲಿ,ಪಾತ್ರ ಬದಲಾಯಿಸೋದರಲ್ಲಿ
ನಾವಂತೂ ನಿಸ್ಸೀಮರು.
ಆಗ -ಗೊತ್ತಿದ್ದರೂ
ಆಡುತ್ತೇವೆ ಆಟ,ಆಟದೊಳಗಿನ ಆಟ.
ಯಾಕೆ ಬೇಕು ಹೇಳಿ,
ಈ ರೀತಿ..... ನೀತಿ ?
ಗೊತ್ತಿದ್ದೂ ಗೊತ್ತಿದ್ದೂ,
ಒಳಗೊಂದು,ಹೊರಗೊಂದು !
ಇಲ್ಲ ,ಬಿಡಲ್ಲ
ನಾಟಕ ...ನಾಟಕ...
ಯಾಕೆಂದರೆ
ನಾಟಕದಲ್ಲಿ ಪರಿಣಿತರು........ಬಾಲ್ಯದಿಂದಲೇ
6 comments:
ಒಂದು ರೀತಿಯಲ್ಲಿ ಅದುವೇ ಚಂದ ಅಲ್ವ? ಕಾಲಕ್ಕೆ ತಕ್ಕಂತೆ, ಸಂಬಂಧಕ್ಕೆ ತಕ್ಕಂತೆ, ವ್ಯಕ್ತಿ ಬದಲಾಗದೆ ಇದ್ದರೆ ಸ್ವಾರಸ್ಯವೆಲ್ಲಿಯದು?
ಹಾಗೆ ನೋಡಲಿಕ್ಕೆ ಹೋದರೆ, ಯಾವುದನ್ನ ನೈಜ ಅಂತ ಹೆಸರಿಸ್ತೀರಿ?
ಮನುಶ್ಯನ ಹಿಪೊಕ್ರೆಸಿ ಕೆಲವೊಮ್ಮೆ
ತು೦ಬ ನೊವು ಕೊಡುತೆ.
ಅದು ಸರಿ, hipokracy ತಪ್ಪು,
ಸಾಧಾರಣ ತಿಳಿವು ಬಂದಾಗಿನಿಂದ ನಮ್ಮ ತಿಳಿವಿಗೆ ಸರಿ ಕಂಡಂತೆ ನಮ್ಮ ವರ್ತನೆ ಇರುತ್ತದೆ, ಅದೇ ವರ್ತನೆ, ಕಾಲಾಂತರದಲ್ಲಿ ನಮಗೆ ಸರಿ ತೋರದೆ ಇರಬಹುದು....ಹೀಗೆ ಯೋಚನೆ ಮಾಡುವಾಗ 'ನನ್ನ ನೈಜ ಸ್ವಭಾವ' - ಅಷ್ಟನ್ನೇ ತಿಳಿದುಕೊಳ್ಳುವಲ್ಲಿ ನಾನು ಸಫಲ ಆದರೆ ದೊಡ್ಡ ಗುರಿಯನ್ನ ಸಾಧಿಸಿದಂತೆ ಅಂತ ನನ್ನ ಅನಿಸಿಕೆ
ಎಲ್ಲಾನು ನಾಟಕ ಅಂತ ಹೇಳಲಾಗಲ್ಲ.ಒಮ್ಮೊಮ್ಮೆ ಆ ತರ ಸನ್ನಿವೇಶಗಳು ಸೃಷ್ಟಿ ಆದಾಗ ನಾಟಕ ಆಡಬೇಕಾಗುತ್ತೆ.ಅದರಿಂದ ಇನ್ನೊಬ್ಬರಿಗೆ ತೊಂದರೆ ಆಗದಿದ್ದರೆ ಸರಿ .ಏನಂತೀರಿ!!
ಸಾರ್ ಚೆನ್ನಾಗಿ ಬರ್ದಿದ್ದೀರ... ಆದರೆ ಗೀತೆ ಅವರು ಹೇಳಿದ್ದು ಸರಿ ಅನ್ಸುತ್ತೆ.. ಕಾಲಕ್ಕೆ ತಕ್ಕ ಕೊಳ ಅಲ್ಲವೇ??? ಆದರೆ ನಾಟಕವಾಡುತ್ತಾ ಕೆಸರಿನೊಳಗಿನ ಕೊಲಾಗದಿದ್ದರೆ ಸಾಕು.. (ಗಾಳಿ ಬಂದ ಕಡೆ ವಾಲುತ್ತೆ ಅದು)..
ಸರಿ ತಪ್ಪುಗಳ ವಿಮರ್ಶೆ ಯಾಕೆ?
ಹೀಗಿದೆ....ಅಸ್ತೆ.
Post a Comment