Friday, December 25, 2009

ನನಗೆ ಮಾತ್ರ ಹೀಗೆ ,ಆಗುತ್ತಾ?
ನಿಮಗೂ ಹೀಗೊ೦ದು ಅನಿಸಿಕೆ ಆಗಾಗ
ಕಾಡುತ್ತಾ?
ಸುಮ್ಮನೆ ಇರುವಾಗ,
ಅಲ್ಲ ಮನದೊಳಗೆ ನಾವೇ ಇಣುಕುವಾಗ,
ಸಾಲು ಸಾಲಾಗಿ,ಹೊಸ ಹೊಸ ಪ್ರಶ್ನೆಗಳು,
ಕಿತ್ತು ತಿನ್ನುತ್ತವೆಯೇನು?
ಯಾಕೆ?
ಹೀಗೇಕಾಗುತ್ತದೆ?
ಮನಸ್ಸು ಗೊ೦ದಲದ ಗೂಡಾಗುತ್ತದೆ?
ಒ೦ದೇ ಎರಡೇ ಹಲವು ಪ್ರಶ್ನೆಗಳು
ಯಾಕೋ, ಎಲ್ಲಿ೦ದಲೋ ಬ೦ದು,
ತಲೆ ತಿನ್ನುತ್ತವೆ.
ಅಲ್ಲ!
ನಮ್ಮಲ್ಲಿಯೇ,
ನಮಗೇ ನಾವೇ ಯಾಕೆ ಪ್ರಶ್ನೆಕೇಳಬೇಕು?
ನಮ್ಮಲ್ಲಿ ಹುಟ್ಟಿಕೊ೦ಡ ಪ್ರಶ್ನೆಗಳಿಗೆ ಉತ್ತರ ಯಾರು ಕೊಡಬೇಕು?
ನಾವು ಯಾಕೆ ಉತ್ತರ ಅಪೇಕ್ಶಿಸುತ್ತೇವೆ?
ಇನ್ನೊಬ್ಬರ ಉತ್ತರದಿ೦ದ ನಿಜಕ್ಕೂ ನಮಗೆ ಸಮಾದಾನ ಆಗುತ್ತಾ?
ಉತ್ತರ ಸಿಗದಿದ್ದರೂ,
ನಮ್ಮಲ್ಲಿ ಪ್ರಶ್ನೆಗಳು ಕಡಿಮೆ ಆಗುತ್ತಾ?
ಅಲ್ಲ ಉತ್ತರದಿ೦ದ ಮತ್ತೆ ಪ್ರಶ್ನೆ ಹುಟ್ಟುತ್ತಾ?
ಪ್ರಶ್ನೆಗಳಲ್ಲಿ ಉತ್ತರ ಅಡಗಿರುತ್ತಾ?
ಅಲ್ಲ
ಅಡಗಿರುವ ಉತ್ತರಕ್ಕಾಗಿಯೇ ಪ್ರಶ್ನೆ ಕೇಳುತ್ತೇವೆಯೇ?
ಒ೦ದರಹಿ೦ದೊದು ಬರೀ ಪ್ರಶ್ನೆಗಳು..
ಗೊತ್ತಿರುವ ಪ್ರಶ್ನೆಗಳಿಗೆ ಗೊತ್ತಿಲ್ಲದ ಉತ್ತರಗಳು..
ಗೊತ್ತಿಲ್ಲದ ಪ್ರಶ್ನೆಗಳಿಗೆ,ಉತ್ತರಕ್ಕಾಗಿ...
ಪ್ರಶ್ನೆಗಳು ಮಾತ್ರ!
ಹೀಗೇಕಾಗುತ್ತದೆ?

ಹುಟ್ಟು-ಬದುಕು-ಸಾವು
ಬ೦ದದ್ದೆಲ್ಲಿ೦ದ?ಇರುವುದು ಯಾಕೆ?ಹೋಗುವುದೆಲ್ಲಿಗೆ?
ತಿಳಿಯುವ ಬಗೆಯೆ೦ತು?ಅರಿತು ಮಾಡುವುದೇನು?
ನನಗ೦ತೂ ಹೊಳೆದಿಲ್ಲ!
ಇದ್ದೇನೆ ಇಲ್ಲೇ....ಯಾಕೋ ಗೊತ್ತಿಲ್ಲ!

3 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ನನ್ನ೦ತೆ ನಿಮಗೂ ಹುಟ್ಟುತ್ತವೆಯೇ ಹೀಗೆ ನೂರೆ೦ಟು ಪ್ರಶ್ನೆಗಳು?

geete said...

'ಪ್ರಶ್ನೆಗಳು' -ಹೌದು ಕೆಲವೊಮ್ಮೆ ಹುಟ್ಟಿ, ಹಿಂಬಾಲಿಸಿ, ಸತಾಇಸುತ್ತವೆ ...ಹಾಗಂತ ನಿಂತು, ಉತ್ತರ ಹುಡುಕುವಾಗ ಪ್ರಶ್ನೆಗಳೇ ಇಲ್ಲದೆ ಹೋಗಬಹುದು, ಅಥವಾ ಅವು ಅರ್ಥವಿಲ್ಲದ್ದೂ ಅಂತಲೂ ಅನಿಸಬಹುದು ...ಮನಸ್ಸು ಶಾಂತವಾಗಿರುವಾಗ ಎಲ್ಲೆಲ್ಲಿಯೂ ಉತ್ತರಗಳೇ ಸಿಕ್ಕುತ್ತವೆ!...ಹೀಗೆ ನನ್ನಅನಿಸಿಕೆ

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಹೇಗೇ ಇರಲಿ,
ನಮ್ಮನ್ನು ನಾವು ತಿಳಿಯುವ ಪ್ರಯತ್ನದಲ್ಲಿ ಎಷ್ಟು ಸಫಲರಾಗ್ತೇವೋ,
ಅಷ್ಟರಮಟ್ಟಿಗೆ ಶಾಂತಿ ನಮ್ಮೋಳಗೇ ಹುಟ್ಟಿಕೊಳ್ಳುವುದಂತೂ ನಿಶ್ಚಿತ.
ಬಾಹ್ಯ ಒತ್ತಡದ ಪರಿಣಾಮ ಶೂನ್ಯವಾದ ನೀರಲ್ಲಿ ಅಲೆಗಳು ಇರುವುದಿಲ್ಲ.ಅಲ್ಲವೇ ಗೀತೆ....?

Post a Comment