ಯಾಕೆ ಹೀಗಾಯಿತು
ನೀವು ನನ್ನ ಯಾಕೆ ಈ ಊರಿಗೆ
ಕಳಿಸಿದ್ದಿರೋ ನನಗಂತು ಗೊತ್ತಿಲ್ಲ
ನನ್ನಲ್ಲಿ ನೀವು ಹೇಳಲೂ ಮರೆತಿರೆನು?
ನಾನು ಅಂದು ಕೊಂಡಂತೆ ಇಲ್ಲಿ ಇಲ್ಲವಲ್ಲ .
ನನ್ನ ಮನಸಿಗೆ ಇಲ್ಲಿ ಒಂದು ಕ್ಷಣವು ಬಿಡುವಿಲ್ಲ.
ರಾತ್ರಿ ಹಗಲೆನ್ನದೆ
ದುಡಿಮೆ ಅದಕ್ಕೆ .
(ನಾನು ಅಂದುಕೊಂಡದ್ದೇ ತಪ್ಪುಯೆನ್ನುತ್ತಿರೆನೋ)
ನಿಮಗೆ ಬಹುಶ ಆಟವೇನೋ ,ನನಗೋ ಪ್ರಾಣಸಂಕಟ ,ಒದ್ದಾಟ ,ಹೊರಳಾಟ.
ಅಗಲಿ ಅಗಲಿ ,ಪ್ರಾಣವೇ ಹೋಗಲಿ .
ಆಗಿನ ಬಿಡುವಿನಲ್ಲೇ ಮತ್ತೆ ಬರಲೇನಿಮ್ಮಬಳಿಗೆ?
ಮತ್ತೆ ಕಳಿಸದಿರಿ ನನ್ನ ಈ ಬಲೆಯ ಒಲೆಯ ಒಳಗೆ
ನೆಮ್ಮದಿಯ ಉಸಿರು ಬಿಡಲು
ಇರಲಿ ನಿಮ್ಮದೇ ಮಡಿಲು..
ನಿಮ್ಮದೇ ಮಡಿಲು .....
2 comments:
ನಿಮ್ಮ ಅನಿಸಿಕೆಗಳಲ್ಲಿ ಪ್ರಶ್ನಿಗಳೇ ಹೆಚ್ಚು ಅಂತ ನನಗನಿಸಿದ್ದು-ಉತ್ತರದ ಹುಡುಕಾಟದಲ್ಲಿ ಬರೆದದ್ದಿರಬಹುದೇನೋ?
ಸಮಾಜದ ಎಲ್ಲ ಆಗು ಹೋಗುಗಳಲ್ಲಿ ಸಮಂಜಸವಾದ ಕಾರಣ ಸಿಗದೇ ಹೋಯಿತೇ?
ಇಲ್ಲಿ,
ಮತ್ತೆ ಮೂಲಕ್ಕೆ ಮರಳುವ ಅಸೆಯ ತುಡಿತ
ಅರಿವಿದ್ದೋ ,ಅರಿವಿಲ್ಲದೆಯೋ
ಎಲ್ಲರಲ್ಲೂ ಇದ್ದೆ ಇದೆ .
ಅದನ್ನೇ ಮತ್ತೆ ಶಬ್ದ ಗಳಲ್ಲಿ
ಹಿಡಿದಿಡುವ ಒಂದು ಪ್ರಯತ್ನ .
ಮನುಷ್ಯ ಮರಳಿ ಬಂದಲ್ಲಿಗೆ ಹೋಗ್ತಾನೋ
ಗೊತ್ತಿಲ್ಲ.
ಆದರೆ ಹಾಗೆ ಅಂದು ಕೊಂಡು -----,
ಹೋದಾಗ ನೆಮ್ಮದಿ ಸಿಗಬಹುದೇನೋ
ಅಂದುಕೊಂಡು ಬರೆದ ಬರೆಹ .
Post a Comment