ನೀರಲ್ಲಿ ಮೀನಿನ ಹೆಜ್ಜೆ ಗುರುತೂ ...ಹೆಂಗಸಿನ ಮನಸ್ಸೂ.....
------------
ನೀರಲ್ಲಿ ಮೀನಿನ ಹೆಜ್ಜೆ ಗುರುತೂ ...ಹೆಂಗಸಿನ ಮನಸ್ಸೂ.....
ತಿಳಿಯದಂತೆ! ಸರಿಯೇ....
ಹುಡುಗಿಯ(ಹೆಂಗಸರ) ಮನಸ್ಸನ್ನು ಅರಿಯುವುದು ಕಷ್ಟ
ಅಂತಾರೆ.ಯಾಕೊ ಏನೋ.....
ಅಲ್ಲ..
ಹುಡುಗರ(ಗಂಡಸರ) ಮನಸ್ಸನ್ನು ತಿಳಿಯಬಹುದೇ?
ಯಾರ ಮನಸ್ಸನ್ನು ಯಾರಿಗೂ ತಿಳಿಯಲು
ಸಾದ್ಯವಿಲ್ಲ.
ತಿಳಿದಿರುವೆ ಅಂತ
"ಬೆಕ್ಕಿನ ಕೋಡು ನೋಡಿದವ "
ಹೇಳಬೇಕು!ನಾವು ನಂಬಬೇಕು!
(ಹೇಳಿಕೆ ಕೊಡುವುದು,ಎಂಥ ಅಪ್ಪಟ ಸುಳ್ಳು, ಅಥವಾ ಅಹಂಕಾರ ಎನ್ನೋಣವೇ?)
ಇನ್ನೊಬ್ಬರಿಗೆ ಬಿಡಿ..
ಅವರವರಿಗೇ ತಮ್ಮ ಮನಸ್ಸು
ಎಲ್ಲಿ
ಹೇಗೆ
ಯಾಕೆ
ಯಾವಾಗ
ಕುಣಿಯುತ್ತದೆ
ಅಂತ ಗೊತ್ತೇನು ?
ಮನಸ್ಸನ್ನು ಮಣಿಸಿದರೆ ನಾವು
"ಅವನೇ ಆದಂತೆ"
ಸುಕಾ ಸುಮ್ಮನೆ ಅವರಿವರ ಮನಸ್ಸು ಅರಿಯಲು
ಸಾದ್ಯವಿಲ್ಲ,ಅಂತ ತೀರ್ಮಾನಿಸುವ
ನಿರ್ದಾರ,
"ಕಣ್ಣು ಮುಚ್ಚಿ ಹಾಲು ಕುಡಿದಂತೆ"
ನೀವು ಏನ೦ಥಿರ ?
5 comments:
ನೀವು ಓದಿದ್ದಿರಿ,ಸರಿ
ದಯವಿಟ್ಟು ಒಂದು ಸಹಿ ಮಾಡಿ.
absolutely correct, I agree, if you read I have written the same thing as comment for your previous post
'ಮೀನಿನ ಹೆಜ್ಜೆ ಗುರುತು ,ಹೆಣ್ಣಿನ ಮನಸು 'ತಿಳಿಯುವುದು ಯಾರಿಂದಲೂ ಸಾದ್ಯವಿಲ್ಲ ಅನ್ನುವ ಮಾತು ಹಿಂದಿನಿಂದಲೂ ಬಂದ ಮಾತು.ಆದರೆ ನೀವು ಹೇಳ್ದ ಹಾಗೆ ಗಂಡಸರ ಮನಸನ್ನು ತಿಳಿಯಬಹುದೇ?ಅಂದಿರಲ್ಲ ,ನನ್ನ ಪ್ರಕಾರ ಯಾರ ಮನಸ್ಸನ್ನು ಅರಿಯುವುದು ಅಷ್ಟು ಸುಲಭದ ಮಾತಲ್ಲ.
ನಮ್ಮ ಮನಸ್ಸನ್ನು ನಾವೇ ಅರಿತರೆ ಎಷ್ಟೋ ಒಳ್ಳೇದು ಅನ್ನುದೆ ನನ್ನ ಅಭಿಪ್ರಾಯ.ಆಲ್ವಾ?
ಉತ್ತಮ ಬರಹ...
ಹೆಂಗಸರ ಮನಸ್ಸು ಅರಿಯಲಾಗದು ಅಂತ ಹಿಂದಿನವರು ಹೇಳಿದ್ದು ಅವರು ಮನಸ್ಸು ಬದಲಾಯಿಸುವ ಗುಣಕ್ಕೆ.. ಅಂತ ನನ್ನ ಭಾವನೆ.. ಬಹುಶ ಮನಸು ಬದಲಾಯಿಸುವ ಸಂಖ್ಯೆ ಹೆಂಗಸರಿಗಿಂತ ಕಮ್ಮಿ ಅನ್ಸುತ್ತೆ!! :-) ಏನಂತೀರ..??
ಏನೆ ಇರ್ಲಿ, ಉತ್ತಮ ಬರಹ.. ಓದಿ ಖುಷಿಯಾಯಿತು..
"ಯಾರ ಮನಸ್ಸನ್ನು ಯಾರಿಗೂ ತಿಳಿಯಲು
ಸಾದ್ಯವಿಲ್ಲ.
ತಿಳಿದಿರುವೆ ಅಂತ
"ಬೆಕ್ಕಿನ ಕೋಡು ನೋಡಿದವ "
ಹೇಳಬೇಕು!ನಾವು ನಂಬಬೇಕು!"
ಈ ಸಾಲುಗಳು ಇಷ್ಟವಾದವು...:-) ಬರೆಯುತ್ತಿರಿ ಸಾರ್..
ಗೀತೆ,ಶಶಿ,ರವಿ,
ನಿಮಗೆಲ್ಲ ದನ್ಯವಾದಗಳೂ,
ಆಗಾಗ ಬರುತ್ತಿರಿ.
Post a Comment