ಚಿಂತೆ
ಯಾರಿಗೆ ಬೇಡ ಹೇಳಿ?
ನಾವು ಇಲ್ಲಿ ಜೀವಂತವಾಗಿಇದ್ದೇವೆ,
ಅಂತ ನಮಗೇ ನೆನಪಾಗುವುದಕ್ಕೆ ,
ನಮ್ಮ ಎಲ್ಲ ಬುದ್ದಿವಂತಿಕೆ,ಶ್ರಮ /ಕ್ರಮ ಗಳ,
ಸಮಯದ
ಸಾರ್ಥಕ ಉಪಯೋಗಕ್ಕೆ,
ಜೀವನದ ಸಾದನೆಯ ಸಮಾದಾನಕ್ಕೆ .
ಚಿಂತಿಸಿ- ಚಿಂತಿಸಿ,
ಚಿಂತೆಗಳ,ಚಿಂತಾಮಣಿ ಕಟ್ಟು
ತಲೆಯ ಮೇಲೆ ಹೊತ್ತು ನಿಟ್ಟುಸಿರು ಬಿಡುತ್ತಾ ,
ಮತ್ತೆ ಸಮಸ್ಯೆಗಳ ಬಿಡಿಸುತ್ತಾ ,
ನಮ್ಮ ಬೆನ್ನ ನಾವೇ ತಟ್ಟುತ್ತಾ
ಸಾದಿಸಿದ್ದೇನೆ ಎಂದು ಉಬ್ಬಿಕೊಳುದಕ್ಕೆ .
ಒತ್ತಡದ ಒತ್ತಿಟ್ಟಿಗೆಯ,ಗಂಟು ಗಂಟಿನ ಬಲೆಯ,
ಸುತ್ತಿಕೊಳುತ್ತ,ನೋವು ಹತಾಶೆಯ ಹಾವುಗೆಯ ಮೆಟ್ಟಿ
ವಿಲ ವಿಲನೆ ಒದ್ದಾಟ ಮಾಡಿ ಯಾದರೂ
ನಾವು ನುಗ್ಗಿದ ಸುಳಿಯಿಂದ ,
ನಾವೇ
ಮೇಲೆದ್ದು,ಮೀಸೆ ತಿರುವಿ ಕೊಳ್ಳೊದಿಕ್ಕೆ
ಸಕಲ ಸಂಸಾರ ಭಾರವ
ಸಂಬಾಳಿಸಿದ ಆದರ್ಶ ಗ್ರಹಿಣಿ ಆಗೋದಿಕ್ಕೆ.
ಚಿಂತೆ ಯಾರಿಗೆ ಬೇಡ?
ಪಕ್ಕದಲ್ಲಿರುವ ಕಲ್ಲು ಚಪ್ಪಡಿಯ ಎಳೆಎಳೆದು
ಎದೆಯೊಡ್ಡಿ ಎದೆ ಗೂಡಲ್ಲಿ ಬೆಂಕಿಯ ಬೇಗೆಯೆಬ್ಬಿಸಿ
ಬೇನೆ ಬೇಸರಿಕೆಯ ನರಳಾಟದಲ್ಲಿ
ನೊಂದು ಬೆಂದರೂ
ನೋವು ನರಳಾಟದಿಂದ ಮರಳಿ
ಹೊರಳಿ ಹೊರಗೆ ಜಿಗಿದು
ಆನಂದ ಹೊಂದೂದಕ್ಕೆ ,
ಚಿಂತೆ ಯಾಕೆ ಬೇಡ ಹೇಳಿ ?
ಚಿಂತೆ ಯಾಕೆ ಮಾಡತಿಯಾ ?................
ಕೇಳೋದು ಸುಲಬ!
ನಮಗೇ ಬೇಕಾದ್ದು ,ನಾವೇ ಮಾಡದೆ ಸುಮ್ಮನೆ ಇರುವುದು
ಹೇಗಪ್ಪಾ ?
ಕಷ್ಟ ಕಷ್ಟ !
5 comments:
ತಮ್ಮ ಬೇಟಿಯನ್ನು ,ದಾಕಲಿಸಿ
Exactly !
'ಸಾಧನೆ' - ಗುರಿಯನ್ನ ತಲುಪುವುದು;
ಗುರಿ- ನಮ್ಮ ಕನಸು
ಕನಸು- ಮನಸ್ಸಿಗೆ ಮುದ ನೀಡುವನ್ತದ್ದು
ಹೀಗೆ ಒಂದಕ್ಕೊದು ಕೊಂಡಿಯಾಗಿ ಬೆಸೆದುಕೊಂಡು ಹೋಗುತ್ತದೆ...ಕನಸಿನಿಂದ ಸಾಧನೆಗೆ ತಲುಪುವ ಮಾರ್ಗದಲ್ಲಿ, ಯೋಚನೆ-ಚಿಂತೆಗಳು ಸಹಜ,
ಹಾಗಂತ ಮಾರ್ಗ ಸುಲಭವಾಗಿದ್ದರೆ, ಸಾಧನೆಗೆ ಸ್ವಲ್ಪ ಬೆಲೆ ಕಮ್ಮಿ, ಎಡರು-ತೊಡರುಗಳು ಹೆಚ್ಚಿದಸ್ಟು ಅದಕ್ಕೆ ಬೆಲೆ ಜಾಸ್ತಿ! ಇದೆಲ್ಲ ನಮ್ಮ ನಮ್ಮ ಅನಿಸಿಕೆ-ಅಭಿಪ್ರಾಯಗಳು , ಹಾಗಾಗಿ ಚಿಂತೆಯಿಂದಾಗಿ ನಮ್ಮ ಐಡೆಂಟಿಟಿ ಅಂತ ಹೇಳುವುದಕಿನ್ತಲೂ ನಮ್ಮ ಸಾಧನೆಗೆ ಬೆಲೆ ಹೆಚ್ಚಲಿ ಎಂಬ ಆಶೆ, ಅದಕ್ಕಾಗಿ ಹೆಚ್ಚಿನ ಒತ್ತಡ-ಚಿಂತೆ...ಅನಿವಾರ್ಯವಾಗಿಬಿಡುತ್ತದೆ ಅಂತ ನನ್ನ ಅನಿಸಿಕೆ-ಏನಂತೀರಿ?
ಇಲ್ಲಿ ಬ೦ದ ವಿಚಾರ ಏನ೦ದ್ರೆ...
ಎಲ್ಲ ಒತ್ತಡ,ಚಿ೦ತೆ,ನೊವು,ಸಮಸ್ಯೆ,
ನಾವಾಗಿ,ನಮಗೆ ಬೇಕಾಗಿ
ನಮ್ಮ ಮೇಲೆ ಎಳೆದುಕೊಳ್ಳುವುದು.
ಆ ಬಳಿಕ ಒದ್ದಾಟ,ಗುದ್ದಾಟ.
ಇವೆಲ್ಲಾ ನಿಜಕ್ಕೂ ನಮಗೆ ಬೇಡದಿದ್ದರೆ....!
ಆದರೆ
ಎಲ್ಲರಿಗೂ ಬೇಕಾದ್ದು-ನೊವು,ನರಳಾಟ-ಸಾದನೆ,ಸಮಾದಾನದ
ಜೀವನ ತಾನೆ?
ಪ್ರಿಯ ವೆಂ.ಕೆ.ಕೆ.,
ನಿಮ್ಮ ಜಾಲಲೇಖ ಚೆನ್ನಾಗಿದೆ. ನೀವು ಕವಿ ಅಂತ ಗೊತ್ತಿರಲಿಲ್ಲ. ಈಗ ಗೊತ್ತಾಗಿ ಸಂತೋಶವಾಯಿತು.ಹೀಗೇ ಮುಂದುವರಿಯಲಿ.
ಇತಿ ನಿಮ್ಮ,
ಗಿರೀಶ.
ಚಿಂತೆ ಯಾರಿಗೆ ಬೇಡ ಅಂದಿರಲ್ಲ ,ಯಾರು ತಾನೇ ಬೇಕು ಅಂತಾರೆ ಹೇಳಿ .ಬೇಡ ಅಂದ್ರು ಸುಲಭವಾಗಿ ನಮ್ಮ ಹತ್ತಿರ ಸುಳಿಯುವುದು ಅಂದೊಂದೇ ಆಲ್ವಾ !!ನಿಮ್ಮ ಕವನ ಚೆನ್ನಾಗಿತ್ತು.
Post a Comment