Friday, December 18, 2009
ಪ್ರೀತಿ,
ಉ೦ಡು.ಉಟ್ಟು,ಉರಿದುಹೋಗದ
ಬಳಿದರೂ ಬರಿದಾಗದ,
ಮೊಗೆ ಮೊಗೆದರೂ ಮುದದಿ೦ದುಕ್ಕುವ,
ಚಿರಂತನ ಒರತೆ.
ಚಿರಕಾಲದಿ೦ದ
ಮನುಜನ ಮನಕ್ಕೊ೦ದು
ಮಜಬೂತಾದ ಆದಾರ.
ಪ್ರೀತಿಯಲ್ಲಿ ನೋವಿದೆ,ವಿರಹವಿದೆ,
ಅಗಲುವಿಕೆ ಇದೆ..ಇತ್ಯಾದಿ ಇತ್ಯಾದಿ
ಇತ್ತೀಚೆಗಿನ ಆರೊಪ,ಪ್ರಲಾಪ.
ಸ್ನೆಹ-ಸಹಜ,ಸು೦ದರ,ಪವಿತ್ರ
ಅ೦ತ
ಜನರೆಲ್ಲ ಬರೆದದ್ದೇ ಬರೆದದ್ದು.
ಹಾ ಹಾ ಎ೦ದು ತಲೆದೂಗಿದ್ದೇ ತೂಗಿದ್ದು.
ಸ್ನೆಹವಿಲ್ಲದೆ ಪ್ರೀತಿ ಚಿಗುರುವುದೇ?
ಪ್ರೀತಿಯಿಲ್ಲದೆ ಸ್ನೆಹ ಬಾಳುವುದೇ?
ಪ್ರೀತಿ-ಸ್ನೇಹಗಳು
ಸ೦ಬ೦ದದೆರಡು ಕಣ್ಣುಗಳು
ಜೀವನದ ಜೀವನದಿಗಳು.
ಸ್ನೇಹಗಳಿಸೋದು,ಪ್ರೀತಿ ಉಳಿಸೋದು
"ಬೀಜದಿ೦ದ ಮರವೇ?ಮರದಿ೦ದ ಬೀಜವೇ"
ಹಾಗೆ ಸುಮ್ಮನೆ ಕಾಲಹರಣ ಸ೦ಗತಿ.
"ಸ೦ತೆಯೊಳಗೊ೦ದು ಗೋವಿ೦ದ."
ಸ್ನೇಹಿತರಾಗಿ ಪ್ರೀತಿ ಸವಿಯೋಣ,
ಪ್ರೀತಿಸುತ್ತಾ ಸ್ನೇಹ ಉಳಿಸೋಣ.
ಹೃದಯ--ಮನಸಲಿ ???
( ಎದೆಯಾಳದ ಪ್ರೀತಿ,ಮನದಾಳದಸ್ನೇಹ )
ಎರಡೂ ಇರಲಿ ಸುಖವಾಗಿ
ಸಖಿಗೆ ಸಖನಾಗಿ,
ಸಖಗೆ ಸಖಿಯಾಗಿ.
ಪ್ರೀತಿ,ಸ್ನೇಹ,ಒಲವು,
ಒಳ್ಳೆಯತನ ಕ್ಕಿನ್ನೊ೦ದು ಮುಖವಾಗಲಿ
ಎಲ್ಲರದಾಗಲಿ,
ವರವಾಗಲಿ, ಸುಖ , ಶಾ೦ತಿ.
------------------------
8 comments:
ನಿಮಗೇನು ಅನಿಸುತ್ತೆ?
ಎರಡು ಸಾಲು ಬರೀತೀರಾ?
ಪ್ರೀತಿ ಹಾಗೂ ಸ್ನೇಹದ ಬಗೆ ಬಹಳ ಚೆನ್ನಾಗಿ ಬರೆದಿದ್ದೀರ....
ಚೆನ್ನಾಗಿದೆ...
ಮಹೇಶ್!
ಕನಸು ಕಾಣೋ ಮನಸಿಗೊ೦ದು
ಸ್ನೇಹದಿ೦ದ,ಪ್ರೀತಿಪೂರ್ವಕ
ದನ್ಯವಾದಗಳು.
ಪ್ರೀತಿ-ಸ್ನೇಹಗಳು
ಸ೦ಬ೦ದದೆರಡು ಕಣ್ಣುಗಳು
ಜೀವನದ ಜೀವನದಿಗಳು
ಈ ಸಾಲು ತುಂಬ ಇಷ್ಟವಾಯ್ತು.
ತುಂಬ ಮುದ್ದಾಗಿದೆ ಕವನ ವೆಂಕಟಕೃಷ್ಣ ಅವರೆ
:-)
ಮಾಲತಿ ಎಸ್.
ಮಾಲತಿ ಯವರೇ,
ದನ್ಯವಾದಗಳು.ನನ್ನ ಉಳಿದ ಬರೆಹಗಳನ್ನೂ ಓದ್ತೀರಾ?
ಓದಿದಲ್ಲಿ ನಿಮಗೆ ಅನಿಸಿದ್ದು ಬರೆಯಿರಿ.
kavana chennagide :)
beautiful :)
ವೆ೦ಕಟಕೃಷ್ಣರೆ,
ಸ್ವಾರ್ಥವೇ ಮೂಲ ಉಳಿದುದೆಲ್ಲ "ಬೀಜದಿ೦ದ ಮರವೇ?ಮರದಿ೦ದ ಬೀಜವೇ"
ಎ೦ಬ ಹಾಗೆಯೆ.ಕೊನೆಗೆ ನಿಮ್ಮ ಆಶಯ ಚೆನ್ನಾಗಿದೆ.
Post a Comment