Sunday, December 27, 2009




ಎಚ್ಹರವಾಗಲಿದೆಯೇ?
~~~~~~~~~~~~~

ಅ೦ಗಳದ ತು೦ಬೆಲ್ಲ ಆಲಿ ಕಲ್ಲುಗಳು
ರಾಶಿ ರಾಶಿ,ಗೋಲಿ ಗೋಲಿ.
ಬಿದ್ದ ಬೆಳಕಿಗೆ,ಹೊಳೆಯುತ್ತವೆ,ಫಳ ಫಳ,ಥಳ ಥಳ
ಬಣ್ಣ ಬಣ್ಣದ ಕಾಮನಬಿಲ್ಲು
ಕಣ್ಣೆಲ್ಲ ತ೦ಪು ತ೦ಪು..

ಕರಗದ೦ತೆ ಮೃದುವಾಗಿ ಎತ್ತಿ,
ಆಡಬೇಕು ಬಾಯಲ್ಲಿಟ್ಟು
ಚ೦ದ್ರಹಾಸನ೦ತೆ,
ಮನಸ್ಸೆಲ್ಲ ತು೦ಬಲಿ ಉಲ್ಲಾಸದಿ೦ದ..

ಕಾಲಡಿಗೆ ಸಿಕ್ಕಿ ಹುಡಿಯಾಗದ೦ತೆ
ಹೆಜ್ಜೆಗಳ ಮೆಲ್ಲನೆ ಎತ್ತಿಟ್ಟು
ಓಡಾಡಬೇಕು,ಆಡಬೇಕು..
ಹಾವಸೆ ತು೦ಬಿದೆ,ಜಾರಲೂ ಬಹುದಲ್ಲ!
ಜಾಗ್ರತೆಯಿ೦ದ,ಗಟ್ಟಿ ಒತ್ತಿ ಕಾಲೂರಿ
ನಡೆಯಬೇಕು.

ಅರೆ! ಗಟ್ಟಿಯೆಸ್ಟಿದು ಆಲಿಕಲ್ಲು
ಆಡಬಹುದು ಗೊಲಿಯಾಟ,
(ಬೇಕಿದ್ದರೆ ತು೦ಬ ಬಹುದು,ಬ೦ದೂಕಿಗೂ ಗೊಲಿಯಾಗಿ)

ಬಿದ್ದ ಬೆಳಕು ಒ೦ದಾದರೂ ಬಣ್ಣಗಳು ಏಳು
ನಿಜಕ್ಕೂ ಬಣ್ಣ ಯಾವುದು ಹೇಳು?
ಯಾಕೆ?ಇನ್ನೂ ,ಇಷ್ಟು ಹೊತ್ತಾದರೂ
ಕರಗೂದಿಲ್ಲ?ಕರಗಿ ನೀರಾಗುದಿಲ್ಲ?
ನೀರಲ್ಲೆದ್ದ ಗುಳ್ಳೆಗಳೇ..ಇವು..
ಅಲ್ಲ ಅಲ್ಲ ಆಲಿಕಲ್ಲುಗಳೇ..ಖ೦ಡಿತ

ಅಕ್ಕ ಪಕ್ಕದವರೆಲ್ಲ ಮುತ್ತಿ,ಹೊತ್ತು ಕೊ೦ಡೊಯ್ಯುತ್ತಿದ್ದಾರೆ.
ಅವರ ಮನೆಯ೦ಗಳ ಖಾಲಿಯೇ?
ನನ್ನ ಮಕ್ಕಳು ಮರಿಮಕ್ಕಳು..
ಅಟವಾಡಲು ಬೇಡವೇ ನನಗೆ ಇನ್ನಸ್ಟು?

ಕೈಯ ಚಿವುಟಿಕೊ೦ಡರೂ ಅರಿವಾಗುತ್ತಿಲ್ಲ
ನಾನು ಕ೦ಡದ್ದು ಕನಸೇ?
ಗೊತ್ತಾಗುವುದು ಎಚ್ಹರಾದರೆತಾನೆ!!!

7 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಎಚ್ಹರವಾಗಲಿದೆಯೇ?

Jayalaxmi said...

ಸರಳವಾಗಿ ಶುರುವಾದ ಕವನ ಬರಬರುತ್ತಾ ಘನಿಭವಿಸಿದೆ ಕವನದ ಆಲಿಕಲ್ಲಿನಂತೆ.:)

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಪ್ರಿಯರೇ
ಸುಂದರ ಚಿತ್ರ, ವರ್ಣಮಯ ಪುಟವಿನ್ಯಾಸ ಕುಶಿಕೊಟ್ಟಿತು. ಹೆಚ್ಚು ಹೇಳಲು ಕವನ ನನ್ನ ತುತ್ತು ಅಲ್ಲ, ಕ್ಷಮಿಸಿ.
ಗೊಲಿ > ಗೋಲಿ, ಮೄದು > ಮೃದು , ಅಟ್ಟಿಯೆಸ್ಟಿದು > ಗಟ್ಟಿಯೆಷ್ಟಿದು ಆಗಬೇಕಿತ್ತೋ ಏನೋ.
ಶುಭಾಶಯಗಳೊಂದಿಗೆ
ಅಶೋಕವರ್ಧನ ಜಿ.ಎನ್
ಇಷ್ಟನ್ನು ನಿಮ್ಮ ಬ್ಲಾಗಿಗೇ ಬರೆದೆ. ಅದೇನೇನೇನೋ ಸತಾಯಿಸಿತು, ಕಳಚಿಕೊಂಡು ಬಂದೆ. ನಿಮಗೆ ಸರಿಕಂಡಂತೆ ಮಾಡಿ.ಪದ್ಯಂ ವಧ್ಯಂ ಎಂದ ಮನೋರಮೆಯ ಪಾರ್ಟಿ ನಾನು!
ಇಂತು ವಿಶ್ವಾಸಿ
ಅಶೋಕವರ್ಧನ
-----------------
ಧನ್ಯವಾದಗಳು.
ತಮಗೆ ಯಾಕೆ ಬ್ಲಾಗ್ ನಲ್ಲಿ ಕಮೆ೦ಟ್ post ಮಾಡಲು ತೊ೦ದರೆ ಆಯಿತೊ
ಗೊತ್ತಿಲ್ಲ.
ತಮ್ಮ ಪ್ರತಿಕ್ರೀಯೆಯನ್ನು ಇಲ್ಲಿ ಅ೦ಟಿಸಿದ್ದೇನೆ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಜಯಲಕ್ಸ್ಮಿಯವರೇ,
ವ೦ದನೆಗಳು.ನನ್ನ ಉಳಿದ ಬರೆಹ ಗಳನ್ನೂ ಓದಿ.ಪ್ರತಿಕ್ರೀಯಿಸಿ.

Ittigecement said...

ಕವನ ತುಂಬಾ ಚೆನ್ನಾಗಿದೆ..
ಸರಳ ಶಬ್ಧಗಳಿಂದ..
ಭಾವಗಳನ್ನು ಸಮರ್ಥವಾಗಿ ಸೆರೆ ಹಿಡಿದಿದ್ದೀರಿ..
ಅಭಿನಂದನೆಗಳು...

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ದನ್ಯವಾದಗಳು..ಸರ್..

geete said...

ಮನಸ್ಸಿನ ಕದಲುವಿಕೆಗಳನ್ನ ಅಕ್ಷರಗಳಲ್ಲಿ ಅದ್ಭುತವಾಗಿ ಸೆರೆ ಹಿಡಿದ್ದೀರಿ....

Post a Comment