Sunday, December 27, 2009
ಎಚ್ಹರವಾಗಲಿದೆಯೇ?
~~~~~~~~~~~~~

ಅ೦ಗಳದ ತು೦ಬೆಲ್ಲ ಆಲಿ ಕಲ್ಲುಗಳು
ರಾಶಿ ರಾಶಿ,ಗೋಲಿ ಗೋಲಿ.
ಬಿದ್ದ ಬೆಳಕಿಗೆ,ಹೊಳೆಯುತ್ತವೆ,ಫಳ ಫಳ,ಥಳ ಥಳ
ಬಣ್ಣ ಬಣ್ಣದ ಕಾಮನಬಿಲ್ಲು
ಕಣ್ಣೆಲ್ಲ ತ೦ಪು ತ೦ಪು..

ಕರಗದ೦ತೆ ಮೃದುವಾಗಿ ಎತ್ತಿ,
ಆಡಬೇಕು ಬಾಯಲ್ಲಿಟ್ಟು
ಚ೦ದ್ರಹಾಸನ೦ತೆ,
ಮನಸ್ಸೆಲ್ಲ ತು೦ಬಲಿ ಉಲ್ಲಾಸದಿ೦ದ..

ಕಾಲಡಿಗೆ ಸಿಕ್ಕಿ ಹುಡಿಯಾಗದ೦ತೆ
ಹೆಜ್ಜೆಗಳ ಮೆಲ್ಲನೆ ಎತ್ತಿಟ್ಟು
ಓಡಾಡಬೇಕು,ಆಡಬೇಕು..
ಹಾವಸೆ ತು೦ಬಿದೆ,ಜಾರಲೂ ಬಹುದಲ್ಲ!
ಜಾಗ್ರತೆಯಿ೦ದ,ಗಟ್ಟಿ ಒತ್ತಿ ಕಾಲೂರಿ
ನಡೆಯಬೇಕು.

ಅರೆ! ಗಟ್ಟಿಯೆಸ್ಟಿದು ಆಲಿಕಲ್ಲು
ಆಡಬಹುದು ಗೊಲಿಯಾಟ,
(ಬೇಕಿದ್ದರೆ ತು೦ಬ ಬಹುದು,ಬ೦ದೂಕಿಗೂ ಗೊಲಿಯಾಗಿ)

ಬಿದ್ದ ಬೆಳಕು ಒ೦ದಾದರೂ ಬಣ್ಣಗಳು ಏಳು
ನಿಜಕ್ಕೂ ಬಣ್ಣ ಯಾವುದು ಹೇಳು?
ಯಾಕೆ?ಇನ್ನೂ ,ಇಷ್ಟು ಹೊತ್ತಾದರೂ
ಕರಗೂದಿಲ್ಲ?ಕರಗಿ ನೀರಾಗುದಿಲ್ಲ?
ನೀರಲ್ಲೆದ್ದ ಗುಳ್ಳೆಗಳೇ..ಇವು..
ಅಲ್ಲ ಅಲ್ಲ ಆಲಿಕಲ್ಲುಗಳೇ..ಖ೦ಡಿತ

ಅಕ್ಕ ಪಕ್ಕದವರೆಲ್ಲ ಮುತ್ತಿ,ಹೊತ್ತು ಕೊ೦ಡೊಯ್ಯುತ್ತಿದ್ದಾರೆ.
ಅವರ ಮನೆಯ೦ಗಳ ಖಾಲಿಯೇ?
ನನ್ನ ಮಕ್ಕಳು ಮರಿಮಕ್ಕಳು..
ಅಟವಾಡಲು ಬೇಡವೇ ನನಗೆ ಇನ್ನಸ್ಟು?

ಕೈಯ ಚಿವುಟಿಕೊ೦ಡರೂ ಅರಿವಾಗುತ್ತಿಲ್ಲ
ನಾನು ಕ೦ಡದ್ದು ಕನಸೇ?
ಗೊತ್ತಾಗುವುದು ಎಚ್ಹರಾದರೆತಾನೆ!!!

Friday, December 25, 2009

ನನಗೆ ಮಾತ್ರ ಹೀಗೆ ,ಆಗುತ್ತಾ?
ನಿಮಗೂ ಹೀಗೊ೦ದು ಅನಿಸಿಕೆ ಆಗಾಗ
ಕಾಡುತ್ತಾ?
ಸುಮ್ಮನೆ ಇರುವಾಗ,
ಅಲ್ಲ ಮನದೊಳಗೆ ನಾವೇ ಇಣುಕುವಾಗ,
ಸಾಲು ಸಾಲಾಗಿ,ಹೊಸ ಹೊಸ ಪ್ರಶ್ನೆಗಳು,
ಕಿತ್ತು ತಿನ್ನುತ್ತವೆಯೇನು?
ಯಾಕೆ?
ಹೀಗೇಕಾಗುತ್ತದೆ?
ಮನಸ್ಸು ಗೊ೦ದಲದ ಗೂಡಾಗುತ್ತದೆ?
ಒ೦ದೇ ಎರಡೇ ಹಲವು ಪ್ರಶ್ನೆಗಳು
ಯಾಕೋ, ಎಲ್ಲಿ೦ದಲೋ ಬ೦ದು,
ತಲೆ ತಿನ್ನುತ್ತವೆ.
ಅಲ್ಲ!
ನಮ್ಮಲ್ಲಿಯೇ,
ನಮಗೇ ನಾವೇ ಯಾಕೆ ಪ್ರಶ್ನೆಕೇಳಬೇಕು?
ನಮ್ಮಲ್ಲಿ ಹುಟ್ಟಿಕೊ೦ಡ ಪ್ರಶ್ನೆಗಳಿಗೆ ಉತ್ತರ ಯಾರು ಕೊಡಬೇಕು?
ನಾವು ಯಾಕೆ ಉತ್ತರ ಅಪೇಕ್ಶಿಸುತ್ತೇವೆ?
ಇನ್ನೊಬ್ಬರ ಉತ್ತರದಿ೦ದ ನಿಜಕ್ಕೂ ನಮಗೆ ಸಮಾದಾನ ಆಗುತ್ತಾ?
ಉತ್ತರ ಸಿಗದಿದ್ದರೂ,
ನಮ್ಮಲ್ಲಿ ಪ್ರಶ್ನೆಗಳು ಕಡಿಮೆ ಆಗುತ್ತಾ?
ಅಲ್ಲ ಉತ್ತರದಿ೦ದ ಮತ್ತೆ ಪ್ರಶ್ನೆ ಹುಟ್ಟುತ್ತಾ?
ಪ್ರಶ್ನೆಗಳಲ್ಲಿ ಉತ್ತರ ಅಡಗಿರುತ್ತಾ?
ಅಲ್ಲ
ಅಡಗಿರುವ ಉತ್ತರಕ್ಕಾಗಿಯೇ ಪ್ರಶ್ನೆ ಕೇಳುತ್ತೇವೆಯೇ?
ಒ೦ದರಹಿ೦ದೊದು ಬರೀ ಪ್ರಶ್ನೆಗಳು..
ಗೊತ್ತಿರುವ ಪ್ರಶ್ನೆಗಳಿಗೆ ಗೊತ್ತಿಲ್ಲದ ಉತ್ತರಗಳು..
ಗೊತ್ತಿಲ್ಲದ ಪ್ರಶ್ನೆಗಳಿಗೆ,ಉತ್ತರಕ್ಕಾಗಿ...
ಪ್ರಶ್ನೆಗಳು ಮಾತ್ರ!
ಹೀಗೇಕಾಗುತ್ತದೆ?

ಹುಟ್ಟು-ಬದುಕು-ಸಾವು
ಬ೦ದದ್ದೆಲ್ಲಿ೦ದ?ಇರುವುದು ಯಾಕೆ?ಹೋಗುವುದೆಲ್ಲಿಗೆ?
ತಿಳಿಯುವ ಬಗೆಯೆ೦ತು?ಅರಿತು ಮಾಡುವುದೇನು?
ನನಗ೦ತೂ ಹೊಳೆದಿಲ್ಲ!
ಇದ್ದೇನೆ ಇಲ್ಲೇ....ಯಾಕೋ ಗೊತ್ತಿಲ್ಲ!

Thursday, December 24, 2009

ಮುಖವಾಡ ಕಳಚೂದಿಲ್ಲ
ಯಾಕೆ ನಾವು?

ಬೆದರಿಕೆಯೇ
ನಿಜ ಮುಖ ತೊರಿಸಲು..
ತನ್ನ ಬದುಕನ್ನು ತನಗೆ ಬೇಕಾದ೦ತೆ
ಕಟ್ಟಿಕೊಳ್ಳಲು..

ಇ೦ದು ನಿನ್ನೆಯದಲ್ಲ ರೀತಿ
ಲಾಗಾಯ್ತಿ೦ದಲೂ ಮನುಜನ ಈ ಗತಿ
ಜಗತ್ತಿನೆಲ್ಲೆಡೆ ಮಾನವ ನಡೆ ಇದೇ ರೀತಿ

ಅ೦ದುಕೊಳ್ಳುವುದು ಒ೦ದು
ಅನ್ನುವುದು ಇನ್ನೊ೦ದು!
ಇರುವುದೆಲ್ಲವ ಒಳಗಿರಿಸಿ ಮಡಿಸಿ,
ಇನ್ನೊಬ್ಬರ ಮುಡಿಗೆ ಹೂ ಮುಡಿಸಿ,
ಪಡುವ ಸ೦ತೊಷ..ಆಹಾ ಆ ತೊಷ,
ನೆಮ್ಮದಿ..ನಿರುಮ್ಮುಳ.

ನಮಗೆ ನಾವೇ ಮಾಡಿಕೊಳ್ಳುವ
ವ೦ಚನೆ, ತರುವ ಆನ೦ದವೇ!!
ಆತ್ಮರತಿ...
ನಮಗೆ ನಮ್ಮದೇ ಆರತಿ.

ಹೆದರಿಕೆ ಅ೦ದಿರಾ..
ಅಲ್ಲಪ್ಪಾ...
ಸಹಜಾತ..ಸಹಜ ಗುಣ.. ಸದ್ಗುಣ.

ತೊಟ್ಟು ಮುಖವಾಡ
ಬಳಿದು ಬಣ್ಣ.
ಲೋಕದಲಿ ಆಟ ಚೆನ್ನ.

ಪ್ರಹಸನ,ಪ್ರದಶನ,
ಪ್ರಶ೦ಸೆಗಿಟ್ಟಿಸಿತೆ೦ದು,ನಮ್ಮ ಬೆನ್ನು
ನಾವೇ ತಟ್ಟಿಕೊಳ್ಳುತ್ತಾ...
ಬೀಗಿ ಬಿರಿಯುವುದು ಯಾರ ಎದುರಿಗೋ...?

ಎ೦ದಿಗೆ ಕೊನೆಯೊ?
ಮುಳ್ಳಿನ ಮೊನೆಯ ಈ ಮನೆಯ ಬದುಕು?

ಹೊತ್ತು ಮುಖವಾಡ,ಸುಸ್ತೋ ಸುಸ್ತು!
ಇನ್ನೂ ಕಳಚಿಕೊಳ್ಳೋದಿಲ್ಲ
ಯಾಕೆ ನಾವು?

Friday, December 18, 2009


ಪ್ರೀತಿ,
ಉ೦ಡು.ಉಟ್ಟು,ಉರಿದುಹೋಗದ
ಬಳಿದರೂ ಬರಿದಾಗದ,
ಮೊಗೆ ಮೊಗೆದರೂ ಮುದದಿ೦ದುಕ್ಕುವ,
ಚಿರಂತನ ಒರತೆ.

ಚಿರಕಾಲದಿ೦ದ
ಮನುಜನ ಮನಕ್ಕೊ೦ದು
ಮಜಬೂತಾದ ಆದಾರ.

ಪ್ರೀತಿಯಲ್ಲಿ ನೋವಿದೆ,ವಿರಹವಿದೆ,
ಅಗಲುವಿಕೆ ಇದೆ..ಇತ್ಯಾದಿ ಇತ್ಯಾದಿ
ಇತ್ತೀಚೆಗಿನ ಆರೊಪ,ಪ್ರಲಾಪ.

ಸ್ನೆಹ-ಸಹಜ,ಸು೦ದರ,ಪವಿತ್ರ
ಅ೦ತ
ಜನರೆಲ್ಲ ಬರೆದದ್ದೇ ಬರೆದದ್ದು.
ಹಾ ಹಾ ಎ೦ದು ತಲೆದೂಗಿದ್ದೇ ತೂಗಿದ್ದು.

ಸ್ನೆಹವಿಲ್ಲದೆ ಪ್ರೀತಿ ಚಿಗುರುವುದೇ?
ಪ್ರೀತಿಯಿಲ್ಲದೆ ಸ್ನೆಹ ಬಾಳುವುದೇ?

ಪ್ರೀತಿ-ಸ್ನೇಹಗಳು
ಸ೦ಬ೦ದದೆರಡು ಕಣ್ಣುಗಳು
ಜೀವನದ ಜೀವನದಿಗಳು.

ಸ್ನೇಹಗಳಿಸೋದು,ಪ್ರೀತಿ ಉಳಿಸೋದು
"ಬೀಜದಿ೦ದ ಮರವೇ?ಮರದಿ೦ದ ಬೀಜವೇ"
ಹಾಗೆ ಸುಮ್ಮನೆ ಕಾಲಹರಣ ಸ೦ಗತಿ.
"ಸ೦ತೆಯೊಳಗೊ೦ದು ಗೋವಿ೦ದ."

ಸ್ನೇಹಿತರಾಗಿ ಪ್ರೀತಿ ಸವಿಯೋಣ,
ಪ್ರೀತಿಸುತ್ತಾ ಸ್ನೇಹ ಉಳಿಸೋಣ.

ಹೃದಯ--ಮನಸಲಿ ???
( ಎದೆಯಾಳದ ಪ್ರೀತಿ,ಮನದಾಳದಸ್ನೇಹ )

ಎರಡೂ ಇರಲಿ ಸುಖವಾಗಿ
ಸಖಿಗೆ ಸಖನಾಗಿ,
ಸಖಗೆ ಸಖಿಯಾಗಿ.

ಪ್ರೀತಿ,ಸ್ನೇಹ,ಒಲವು,
ಒಳ್ಳೆಯತನ ಕ್ಕಿನ್ನೊ೦ದು ಮುಖವಾಗಲಿ
ಎಲ್ಲರದಾಗಲಿ,
ವರವಾಗಲಿ, ಸುಖ , ಶಾ೦ತಿ.
------------------------

Wednesday, December 16, 2009

ಚಿಂತೆ


ಯಾರಿಗೆ ಬೇಡ ಹೇಳಿ?

ನಾವು ಇಲ್ಲಿ ಜೀವಂತವಾಗಿಇದ್ದೇವೆ,
ಅಂತ ನಮಗೇ ನೆನಪಾಗುವುದಕ್ಕೆ ,
ನಮ್ಮ ಎಲ್ಲ ಬುದ್ದಿವಂತಿಕೆ,ಶ್ರಮ /ಕ್ರಮ ಗಳ,
ಸಮಯದ
ಸಾರ್ಥಕ ಉಪಯೋಗಕ್ಕೆ,
ಜೀವನದ ಸಾದನೆಯ ಸಮಾದಾನಕ್ಕೆ .

ಚಿಂತಿಸಿ- ಚಿಂತಿಸಿ,
ಚಿಂತೆಗಳ,ಚಿಂತಾಮಣಿ ಕಟ್ಟು
ತಲೆಯ ಮೇಲೆ ಹೊತ್ತು ನಿಟ್ಟುಸಿರು ಬಿಡುತ್ತಾ ,
ಮತ್ತೆ ಸಮಸ್ಯೆಗಳ ಬಿಡಿಸುತ್ತಾ ,
ನಮ್ಮ ಬೆನ್ನ ನಾವೇ ತಟ್ಟುತ್ತಾ
ಸಾದಿಸಿದ್ದೇನೆ ಎಂದು ಉಬ್ಬಿಕೊಳುದಕ್ಕೆ .

ಒತ್ತಡದ ಒತ್ತಿಟ್ಟಿಗೆಯ,ಗಂಟು ಗಂಟಿನ ಬಲೆಯ,
ಸುತ್ತಿಕೊಳುತ್ತ,ನೋವು ಹತಾಶೆಯ ಹಾವುಗೆಯ ಮೆಟ್ಟಿ
ವಿಲ ವಿಲನೆ ಒದ್ದಾಟ ಮಾಡಿ ಯಾದರೂ
ನಾವು ನುಗ್ಗಿದ ಸುಳಿಯಿಂದ ,
ನಾವೇ
ಮೇಲೆದ್ದು,ಮೀಸೆ ತಿರುವಿ ಕೊಳ್ಳೊದಿಕ್ಕೆ
ಸಕಲ ಸಂಸಾರ ಭಾರವ
ಸಂಬಾಳಿಸಿದ ಆದರ್ಶ ಗ್ರಹಿಣಿ ಆಗೋದಿಕ್ಕೆ.

ಚಿಂತೆ ಯಾರಿಗೆ ಬೇಡ?

ಪಕ್ಕದಲ್ಲಿರುವ ಕಲ್ಲು ಚಪ್ಪಡಿಯ ಎಳೆಎಳೆದು
ಎದೆಯೊಡ್ಡಿ ಎದೆ ಗೂಡಲ್ಲಿ ಬೆಂಕಿಯ ಬೇಗೆಯೆಬ್ಬಿಸಿ
ಬೇನೆ ಬೇಸರಿಕೆಯ ನರಳಾಟದಲ್ಲಿ
ನೊಂದು ಬೆಂದರೂ
ನೋವು ನರಳಾಟದಿಂದ ಮರಳಿ
ಹೊರಳಿ ಹೊರಗೆ ಜಿಗಿದು
ಆನಂದ ಹೊಂದೂದಕ್ಕೆ ,

ಚಿಂತೆ ಯಾಕೆ ಬೇಡ ಹೇಳಿ ?

ಚಿಂತೆ ಯಾಕೆ ಮಾಡತಿಯಾ ?................
ಕೇಳೋದು ಸುಲಬ!

ನಮಗೇ ಬೇಕಾದ್ದು ,ನಾವೇ ಮಾಡದೆ ಸುಮ್ಮನೆ ಇರುವುದು
ಹೇಗಪ್ಪಾ ?
ಕಷ್ಟ ಕಷ್ಟ !

Sunday, December 13, 2009

ನೀರಲ್ಲಿ ಮೀನಿನ ಹೆಜ್ಜೆ ಗುರುತೂ ...ಹೆಂಗಸಿನ ಮನಸ್ಸೂ.....
------------

ನೀರಲ್ಲಿ ಮೀನಿನ ಹೆಜ್ಜೆ ಗುರುತೂ ...ಹೆಂಗಸಿನ ಮನಸ್ಸೂ.....
ತಿಳಿಯದಂತೆ! ಸರಿಯೇ....
ಹುಡುಗಿಯ(ಹೆಂಗಸರ) ಮನಸ್ಸನ್ನು ಅರಿಯುವುದು ಕಷ್ಟ
ಅಂತಾರೆ.ಯಾಕೊ ಏನೋ.....
ಅಲ್ಲ..
ಹುಡುಗರ(ಗಂಡಸರ) ಮನಸ್ಸನ್ನು ತಿಳಿಯಬಹುದೇ?

ಯಾರ ಮನಸ್ಸನ್ನು ಯಾರಿಗೂ ತಿಳಿಯಲು
ಸಾದ್ಯವಿಲ್ಲ.
ತಿಳಿದಿರುವೆ ಅಂತ
"ಬೆಕ್ಕಿನ ಕೋಡು ನೋಡಿದವ "
ಹೇಳಬೇಕು!ನಾವು ನಂಬಬೇಕು!

(ಹೇಳಿಕೆ ಕೊಡುವುದು,ಎಂಥ ಅಪ್ಪಟ ಸುಳ್ಳು, ಅಥವಾ ಅಹಂಕಾರ ಎನ್ನೋಣವೇ?)

ಇನ್ನೊಬ್ಬರಿಗೆ ಬಿಡಿ..
ಅವರವರಿಗೇ ತಮ್ಮ ಮನಸ್ಸು
ಎಲ್ಲಿ
ಹೇಗೆ
ಯಾಕೆ
ಯಾವಾಗ
ಕುಣಿಯುತ್ತದೆ
ಅಂತ ಗೊತ್ತೇನು ?

ಮನಸ್ಸನ್ನು ಮಣಿಸಿದರೆ ನಾವು
"ಅವನೇ ಆದಂತೆ"
ಸುಕಾ ಸುಮ್ಮನೆ ಅವರಿವರ ಮನಸ್ಸು ಅರಿಯಲು
ಸಾದ್ಯವಿಲ್ಲ,ಅಂತ ತೀರ್ಮಾನಿಸುವ
ನಿರ್ದಾರ,
"ಕಣ್ಣು ಮುಚ್ಚಿ ಹಾಲು ಕುಡಿದಂತೆ"
ನೀವು ಏನ೦ಥಿರ ?

Friday, December 11, 2009

ನಾಟಕ....ಎಲ್ಲ ನಾಟಕ
~~~~~~~~~~~~`

ಏನು ವಿಚಿತ್ರ!
ನಾಟಕದಲ್ಲಿ
ಪರಿಣಿತರು ನಾವೆಲ್ಲ.
ಬಾಲ್ಯದಿಂದಲೇ,
ಅಪ್ಪ ,ಅಮ್ಮನಲ್ಲಿ ,
ಅಣ್ಣ,ತಮ್ಮ,
ಅಕ್ಕ,ತಂಗಿಯರಲ್ಲಿ,
ಎಲ್ಲಕಡೆಯಲ್ಲಿ,ಎಲ್ಲೆಂದರಲ್ಲಿ,ಸುತ್ತುಮುತ್ತಲ್ಲಿ,

ನಾವೆಲ್ಲ ಪಾತ್ರ ದಾರಿಗಳು,
ಸೂತ್ರ ಹಿಡಿದವನು ಮೇಲೊಬ್ಬ
ಅಂತ ಹೇಳುದನ್ನ ಕೇಳುತ್ತ.........
ಇದ್ದರೂ
ನೆನಪಿರಲ್ಲ ನಮಗೆ ನಮ್ಮ ಬಗ್ಗೆ.

ನಾಟಕದೊಳಗೆ ನಾಟಕ ಮಾಡುವುದರಲ್ಲಿ,
ನಮ್ಮನ್ನು ಮಿರಿಸುವರು ಯಾರು ಹೇಳಿ?
ಒಮ್ಮೊಮ್ಮೆ
ಅಸ್ಟು ತಲ್ಲೀನತೆ ನಮಗೆ.
ನಾಟಕದೊಳಗಿನ ನಾಟಕದಲ್ಲಿ,ಪಾತ್ರ ಬದಲಾಯಿಸೋದರಲ್ಲಿ
ನಾವಂತೂ ನಿಸ್ಸೀಮರು.

ಆಗ -ಗೊತ್ತಿದ್ದರೂ
ಆಡುತ್ತೇವೆ ಆಟ,ಆಟದೊಳಗಿನ ಆಟ.
ಯಾಕೆ ಬೇಕು ಹೇಳಿ,
ಈ ರೀತಿ..... ನೀತಿ ?
ಗೊತ್ತಿದ್ದೂ ಗೊತ್ತಿದ್ದೂ,
ಒಳಗೊಂದು,ಹೊರಗೊಂದು !
ಇಲ್ಲ ,ಬಿಡಲ್ಲ
ನಾಟಕ ...ನಾಟಕ...
ಯಾಕೆಂದರೆ
ನಾಟಕದಲ್ಲಿ ಪರಿಣಿತರು........ಬಾಲ್ಯದಿಂದಲೇ

Sunday, December 6, 2009

ಸತ್ಯ, ಶಾಂತಿ, ತ್ಯಾಗ,ನ್ಯಾಯ,
ಪರೋಪಕಾರ, ದಯೆ, ಕರುಣೆ,
ದಾನ, ದರ್ಮ, ಪ್ರೀತಿ,ಪ್ರೇಮ,
ಬೇಕಾಗಿದ್ದು ಸಾಮಾಜಕ ಜೀವನ ನೆಮ್ಮದಿಯಿಂದ
ವ್ಯವಸ್ಥಿತವಾಗಿ ನಡೆಯೋದಕ್ಕೆ.
ಮಾತ್ರ.
ಮನಸನು ಮುದುಡಿಸಿ,ಸೃಜನ ಶೀಲತೆಯ ಹೊಸಕಿ
ಕಣ್ಣಿಗೆ ಪಟ್ಟಿ ಕಟ್ಟಿ ದುಡಿಸೋಕಲ್ಲ.
ಮುಗ್ದರ ಸವಾರೀ ಮಾಡೋಕಲ್ಲ

ಚಿಕ್ಕ ಮೀನನು ,ದೊಡ್ಡ ಮೀನು ನುಂಗುವ
ಈ ಜಗತ್ತಲ್ಲಿ
ಇಂದು ಕಾಣುತ್ತಿರೋದು
ಈ ಎಲ್ಲದರ ಹೆಸರಲ್ಲಿ
ನಡೆಯೋ ಶೋಷಣೆ

ಅರೆ! ಬಿಚ್ಚಿಬಿಡಿ
ಮನಸ್ಸು ಹೊರಡಲಿ,ಹಾರಾಡಲಿ,
ಕಲಾ ಕಲ್ಪನೆಯ ಕುದುರೆಯನ್ನೇರಿ .
ವಿಹರಿಸಲಿ ಮುಕ್ತ ಬಾನಂಗಳದಲಿ .

ಚಿಂತೆ!

ಚಿಂತೆಯಾದರೆ ನಿಮಗೆ,
ಮತ್ತೆ ಸಿಲುಕುವಿರಿ
ಒಳಗೊಂದು,ಹೊರಗೊಂದು,ನಟನಾಚತುರ ವಿಶಾರದರ,
"ಗಾಳವಿಕ್ಕುವ,ಲೋಕಕ್ಕೆ ಉಚಿತ ಬುದ್ದಿ ಹೇಳುವ"
ಅತಿ ಬುದ್ದಿವಂತರ ಚತುರ ಚಾದರದೊಳಗೆ .
ಮೆಟ್ಟಿ ಮುರಿದಿಕ್ಕಿ ಬಾವನೆಗಳ.....
...ಅತಿಯನ್ನ
ಅತಿಯಾದರೆ ಅಮೃತವೂ ವಿಷ.

Tuesday, December 1, 2009

ಯಾಕೆ ಹೀಗಾಯಿತು


ನೀವು ನನ್ನ ಯಾಕೆ ಈ ಊರಿಗೆ
ಕಳಿಸಿದ್ದಿರೋ ನನಗಂತು ಗೊತ್ತಿಲ್ಲ
ನನ್ನಲ್ಲಿ ನೀವು ಹೇಳಲೂ ಮರೆತಿರೆನು?

ನಾನು ಅಂದು ಕೊಂಡಂತೆ ಇಲ್ಲಿ ಇಲ್ಲವಲ್ಲ .
ನನ್ನ ಮನಸಿಗೆ ಇಲ್ಲಿ ಒಂದು ಕ್ಷಣವು ಬಿಡುವಿಲ್ಲ.
ರಾತ್ರಿ ಹಗಲೆನ್ನದೆ
ದುಡಿಮೆ ಅದಕ್ಕೆ .
(ನಾನು ಅಂದುಕೊಂಡದ್ದೇ ತಪ್ಪುಯೆನ್ನುತ್ತಿರೆನೋ)

ನಿಮಗೆ ಬಹುಶ ಆಟವೇನೋ ,ನನಗೋ ಪ್ರಾಣಸಂಕಟ ,ಒದ್ದಾಟ ,ಹೊರಳಾಟ.
ಅಗಲಿ ಅಗಲಿ ,ಪ್ರಾಣವೇ ಹೋಗಲಿ .
ಆಗಿನ ಬಿಡುವಿನಲ್ಲೇ ಮತ್ತೆ ಬರಲೇನಿಮ್ಮಬಳಿಗೆ?
ಮತ್ತೆ ಕಳಿಸದಿರಿ ನನ್ನ ಈ ಬಲೆಯ ಒಲೆಯ ಒಳಗೆ
ನೆಮ್ಮದಿಯ ಉಸಿರು ಬಿಡಲು

ಇರಲಿ ನಿಮ್ಮದೇ ಮಡಿಲು..
ನಿಮ್ಮದೇ ಮಡಿಲು .....