Thursday, March 3, 2016

A new baby didn’t stop this inspirational woman from giving birth to another - ZenParent

A new baby didn’t stop this inspirational woman from giving birth to another - ZenParent

Thursday, November 15, 2012


ಧರ್ಮ ಮುಖ್ಯವೋ ಅಥವಾ ಜೀವವೋ?
ಮಾನವೀಯತೆ ಮರೆತರೆ ಅದೂ ಒಂದು ಮತವೇ..?
ಮೂಢನಂಬಿಕೆಯ ಕೊಂಪೆಯಲ್ಲವೇ..?
ಜೀವ ವಿರೋಧಿ ನೀತಿಯ ಇಂತಹುಗಳನ್ನು ನಿಜಕ್ಕೂ ಮತ (ಧರ್ಮ) ಎನ್ನಬೇಕೆ ಎಂಬ ಜಿಜ್ಞಾಸೆ ಮೂಡುತ್ತದೆ.ಸವಿತಾ ಸಾವಿನ ಬಳಿಕ ಈ ಪ್ರಶ್ನೆ ಮತ್ತೆ ಎದ್ದು ನಿಂತಿದೆ.
ಅಹಿಂಸಾ ಪರಮೋ ಧರ್ಮ ಎಂಬ ನಿಲುವ
ು ಒಂದೆಡೆಯಾದರೆ, ಧರ್ಮಕ್ಕಾಗಿ ಜೀವವನ್ನು ಕೊಲ್ಲುವ ಈ ರೀತಿಯ ಕಾನೂನು ಯಾವ ಪುರುಷಾರ್ಥಕ್ಕಾಗಿ? ಐರಿಶ್ ಕಾನೂನಿನಲ್ಲಿ ಬದಲಾವಣೆಯಾಗಬೇಕು ಎಂಬ ಆಗ್ರಹ ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ.
ಸವಿತಾ ಸಾವಿನ ಬಳಿಕವಾದರೂ ಐರಿಶ್ ಸರ್ಕಾರ ಹಾಗೂ ಧರ್ಮಗುರುಗಳು ಕಣ್ಣುತೆರೆಯುತ್ತಾರೆಯೆ?
ಅಷ್ಟಕ್ಕೂ ಸವಿತಾ ಸಾವು, ಸಾವಲ್ಲ. ಅದು ನಿಜಕ್ಕೂ ಕೊಲೆ ಎನಿಸುತ್ತದೆ.
ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವುದು ಜಗತ್ತಿನ ಅನ್ಯಾನ್ಯ ಸರಕಾರಗಳೂ ಸೇರಿದಂತೆ ನಮ್ಮೆಲ್ಲರ ಜವಾಬ್ದಾರಿಯೂ ಹೌದಲ್ಲವೇ..?
http://www.youtube.com/watch?v=4EafNhbF8mg&feature=relmfu

Friday, May 6, 2011




ಕನ್ನಡಿ; ಎನಗೊಂದು ಅಚ್ಚರಿ.
~~~~~~~~~~~~~~~~~~~~

ಕನ್ನಡಿ;
ಏನಚ್ಚರಿ..!

ಕನ್ನಡಿ ಗಾಜಿನಿಂದಾಗಿದೆ...ನಿಜ.
ಆದರೆ
"ಗಾಜು"ಗಳೆಲ್ಲವೂ "ಕನ್ನಡಿ"ಗಳಲ್ಲವಲ್ಲ..!

ತನ್ನೊಳಗೆ ಖಾಲಿಯಾಗಿದ್ದೂ ,
ಇರುವುದ ಇರುವಂತೆ ಪ್ರತಿಫಲಿಸುವ
ನಮ್ಮ ಅರಿವಿಗೆ ತರುವ
"ಕನ್ನಡಿ" ಸತ್ಯ !
"ಪಾರದರ್ಶಕ ಗಾಜು" ಮಿಥ್ಯವೇ ?

ಮುಟ್ಟಲಾರದ,ತಲುಪಿ,ತಟ್ಟಲಾರದ
"ಪಾರದರ್ಶಕ ಗಾಜು"
ಕೇವಲ ದರ್ಶಕ !

ಆಹಾ...
ಒಳಗಿನ ಎಲ್ಲವನ್ನೂ ಕಂಡ ದಾರ್ಶನಿಕನಿಗೂ
ಅವನ ನಿಲುವಿನ
ದರ್ಶನಕ್ಕೆ.."ದರ್ಪಣ" ವೇ ಗತಿ !

ಅರೆ ! ಏನಚ್ಚರಿ !
ದಿಕ್ಕುಗಳ ಎಡ,ಬಲ
ಅದಲು ಬದಲಾಗಿ ತೋರಿಸಿದರೂ
ಆಕಾರ ವಿಕಾರಗಳು
ಅನುಭವಕ್ಕೆ ಸಲ್ಲುವುದು,
ನಮ್ಮೆದುರು ಬಂದ"ಪಾರದರ್ಶಕ ಗಾಜು"
ಬೆನ್ನಿಗೊಂದು "ಪರೆ" ಹಚ್ಚಿಸಿಕೊಂಡು
ಅಪಾರ...ದರ್ಶಕವಾಗಿ ಆಗಿ..
ಬದಲಾಗಿ
"ದರ್ಪಣ"ವಾದಾಗ !
ಅರೆ!
ಎಷ್ಟು ಸೊಗಸಾಗಿದೆ.
***********************

Saturday, December 11, 2010



ಅಭಿನಯ ಚತುರ.
--------------
ಹೊನ್ನಿನದ್ದದಾದರೆ
ಶೂಲವೋ,ತ್ರಿಶೂಲವೋ
ಯಾವುದಕ್ಕೂ ಸೈ..

ಬಂಗಾರದ್ದಾದರೆ
ಸರಪಳಿಯೊ,ಕೈಕೋಳವೋ
ಒತ್ತಾಯಕ್ಕೆ ಬೇಕಾದರೆ
ಎರಡೂ ಇರಲಿ...

ಪತ್ರಿಕೆ,ಬಾನುಲಿ
ಟಿವಿಯ ಕವರೇಜ್
ಸರಿಯಾಗಿದ್ದರೆ,
ಪ್ರವಚನ,ಸಂದರ್ಶನ
ಲೊಕೋದ್ಧಾರವೇ ನಮ್ಮ ಗುರಿ..

ಚಿನ್ನದ ಆಭರಣ
ಸಮರ್ಪಣೆ ಇದ್ದಲ್ಲಿ,
ನಡೆಯಲಿ ಉತ್ಸವ ಪರ್ವಕ್ಕೊಂದು..

ಮೋಹದ ಹೆಂಡತಿ
ಮನೆಯೊಳಗಿರಲು,
ಕಾವಿಯ ಬಣ್ಣ ಹೇಗಿದ್ದರೇನು..?
ಅಭಿನಯ ಚತುರನ
ದರ್ಭಾರಿನಲ್ಲಿ
ಪರಾಕ್..ಭೋ..ಪರಾಕ್!!
----------------

Sunday, October 24, 2010



ರೂಪಾಂತರ
-----------

ಬೀಜದೊಳಗಿದ್ದೆನೋ?
ಗೊತ್ತಿಲ್ಲ..
ಬೀಜ ಲಯವಾಗಿ
ಮೊಳಕೆ ಚಿಗುರಾದೆ.

ಚಿಗುರೊಳಗಿದ್ದೆನೋ?
ಗೊತ್ತಿಲ್ಲ..
ಚಿಗುರು ಚಿರುಟಿ
ಗಿಡವಾಗಿ ಮೇಲೆದ್ದೆ.

ಮೇಲೆ..ಮೇಲೆ
ಒಂದಕ್ಕೆ ಎರಡಾಗಿ
ಎರಡು ನೂರಾಗಿ
ಸಾವಿರಾರು ಟಿಸಿಲೊಡೆದು
ಲಕ್ಷ ಲಕ್ಷ ಎಲೆ ಬೆಳೆದು.

ಉದುರಿ ಉದುರಿ
ಮೆತ್ತೆ ಬೆಳೆಯುತ್ತಾ
ಹೂವಾಗಿ ಅರಳಿನಿಂತೆ..
ಅರಳಿ ಮುದುಡಿದ್ದೇ..
ಕಾಯಾದೆ..

ಕಾಯ ಕಹಿ/ದೊರಗು
ರುಚಿ ಕಳೆದು....
ರುಚಿತುಂಬಿ ಹಣ್ಣಾದೆ,ಜಗದ ಕಣ್ಣಾದೆ.

ಉದುರಿ ಅಲ್ಲಿಯೇ ಕೊಳೆತು
ಬೀಜವಾದೆ..
ಕಾಯುತ್ತಿರುವೆ ಎಂದಿಗೋ
ನನ್ನ ವಾಯಿದೆ???
--------------