
ಅಭಿನಯ ಚತುರ.
--------------
ಹೊನ್ನಿನದ್ದದಾದರೆ
ಶೂಲವೋ,ತ್ರಿಶೂಲವೋ
ಯಾವುದಕ್ಕೂ ಸೈ..
ಬಂಗಾರದ್ದಾದರೆ
ಸರಪಳಿಯೊ,ಕೈಕೋಳವೋ
ಒತ್ತಾಯಕ್ಕೆ ಬೇಕಾದರೆ
ಎರಡೂ ಇರಲಿ...
ಪತ್ರಿಕೆ,ಬಾನುಲಿ
ಟಿವಿಯ ಕವರೇಜ್
ಸರಿಯಾಗಿದ್ದರೆ,
ಪ್ರವಚನ,ಸಂದರ್ಶನ
ಲೊಕೋದ್ಧಾರವೇ ನಮ್ಮ ಗುರಿ..
ಚಿನ್ನದ ಆಭರಣ
ಸಮರ್ಪಣೆ ಇದ್ದಲ್ಲಿ,
ನಡೆಯಲಿ ಉತ್ಸವ ಪರ್ವಕ್ಕೊಂದು..
ಮೋಹದ ಹೆಂಡತಿ
ಮನೆಯೊಳಗಿರಲು,
ಕಾವಿಯ ಬಣ್ಣ ಹೇಗಿದ್ದರೇನು..?
ಅಭಿನಯ ಚತುರನ
ದರ್ಭಾರಿನಲ್ಲಿ
ಪರಾಕ್..ಭೋ..ಪರಾಕ್!!
----------------
21 comments:
ಚೆನ್ನಾಗಿದೆ ವೆಂಕಟಕೃಷ್ಣರೇ !
ದರ್ಬಾರಿನಲ್ಲಿ....ನಾವೂ ಭೋ ಪರಾಕ್..!
ಧನ್ಯವಾದಗಳು
ಅನ೦ತ್
ಚೆನ್ನಾಗಿದೆ
ಹಾಸ್ಯದ ಗವಸು ಹೊದಿಸಿ ನೀಡಿದ ಪಂಚ್ ಸಕತ್ ಆಗಿದೆ!
ಎಂಥಹ ಮಾತುಗಳು ಸರ್
ಸಂಧರ್ಭಕ್ಕೆ ತಕ್ಕ ವೇಷ
ಇಲ್ದೆ ಹೋದ್ರೆ ''ಉದರ ನಿಮಿತ್ತಂ ಬಹುಕ್ರತ ವೇಷಂ''
ಸುಂದರ ಕವಿತೆ
:-). ನಿಮ್ಮ ಮನಸಿಗೆ ಸಂದರ್ಭಕ್ಕೆ ತಕ್ಕುದಾದಂತಹುದೇ ಅನಿಸಿದೆ !.
ಚಿನ್ನದ ಆಭರಣ
ಸಮರ್ಪಣೆ ಇದ್ದಲ್ಲಿ,
ನಡೆಯಲಿ ಉತ್ಸವ ಪರ್ವಕ್ಕೊಂದು..
ಶಭಾಷ್...ಚೆನ್ನಾಗಿದೆ.
ಅಭಿನಯ ಚತುರನ ಚತುರತೆ ಸೊಗಸಾಗಿದೆ...
ಅಭಿನಯ ಚತುರನ
ಪರಾಕ್..ಭೋ..ಪರಾಕ್!!
chenagide sir...
ವಿಕೆಯವರೇ ವಾಸ್ತವ..ಮತ್ತು ಕಟುಸತ್ಯ...ಚಿನ್ನದ ಆಭರಣದ ಸಮರ್ಪಣೆ ಇದ್ದರೆ ನಡೆಯಲಿ..ಎನ್ನುವ ಛಡಿ ಏಟು...
ಸುಂದರ ಕವನ!
good one.
ಹಾಸ್ಯದೊಳಗೊ೦ದು ಕಟು ಸತ್ಯ.........!!
ವೆಂಕಟ್,
ಅಭಿನಯ ಚತುರ ಎನ್ನುವ ಹೆಸರಿಗೆ ಸಮಂಜಸವಾದ ಕವನ.
wow... tumba chennagide sir saalugaLu
ಓದಿ...ಪ್ರೀತಿಯಿಂದ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ನಿಮಗೆಲ್ಲ ನನ್ನ ವಂದನೆಗಳು.
ನನ್ನ ಉಳಿದ ಕವನಗಳನ್ನೂ ಪುರುಸೊತ್ತಿರುವಾಗ ಓದಿ.
ಜಗವೆ ನಾಟಕರ೦ಗವಾಗಿರುವಾಗ ಅಭಿನಯ ಅನಿವಾರ್ಯವೂ ಹೌದಲ್ಲವೇ..? ಚೆನ್ನಾಗಿದೆ ವೆ೦ಕಟಕೃಷ್ಣರೆ.
chennagide...
೨೦೧೧ರಲ್ಲಿ ಸಿಹಿಕ್ಷಣಗಳು ಎದುರಾಗಲಿ...
ಬರಹ ಮಜಬೋತಾಗಿದೇ ರೀ...
vaasthavathe mattu holike chennagide
ಓದಿ...ಪ್ರೀತಿಯಿಂದ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ನಿಮಗೆಲ್ಲ ನನ್ನ ವಂದನೆಗಳು.
ನನ್ನ ಉಳಿದ ಕವನಗಳನ್ನೂ ಪುರುಸೊತ್ತಿರುವಾಗ ಓದಿ.
ಅಭಿಪ್ರಾಯ ತಿಳಿಸಿದರೆ ನನಗೆ ಖಂಡಿತ ಖುಶಿಯಾಗುವುದು.
"ಹೊನ್ನಿನದ್ದದಾದರೆ"- sariyo? :) Baaki olledaaydu appachi :)
Post a Comment