Thursday, December 24, 2009

ಮುಖವಾಡ ಕಳಚೂದಿಲ್ಲ
ಯಾಕೆ ನಾವು?

ಬೆದರಿಕೆಯೇ
ನಿಜ ಮುಖ ತೊರಿಸಲು..
ತನ್ನ ಬದುಕನ್ನು ತನಗೆ ಬೇಕಾದ೦ತೆ
ಕಟ್ಟಿಕೊಳ್ಳಲು..

ಇ೦ದು ನಿನ್ನೆಯದಲ್ಲ ರೀತಿ
ಲಾಗಾಯ್ತಿ೦ದಲೂ ಮನುಜನ ಈ ಗತಿ
ಜಗತ್ತಿನೆಲ್ಲೆಡೆ ಮಾನವ ನಡೆ ಇದೇ ರೀತಿ

ಅ೦ದುಕೊಳ್ಳುವುದು ಒ೦ದು
ಅನ್ನುವುದು ಇನ್ನೊ೦ದು!
ಇರುವುದೆಲ್ಲವ ಒಳಗಿರಿಸಿ ಮಡಿಸಿ,
ಇನ್ನೊಬ್ಬರ ಮುಡಿಗೆ ಹೂ ಮುಡಿಸಿ,
ಪಡುವ ಸ೦ತೊಷ..ಆಹಾ ಆ ತೊಷ,
ನೆಮ್ಮದಿ..ನಿರುಮ್ಮುಳ.

ನಮಗೆ ನಾವೇ ಮಾಡಿಕೊಳ್ಳುವ
ವ೦ಚನೆ, ತರುವ ಆನ೦ದವೇ!!
ಆತ್ಮರತಿ...
ನಮಗೆ ನಮ್ಮದೇ ಆರತಿ.

ಹೆದರಿಕೆ ಅ೦ದಿರಾ..
ಅಲ್ಲಪ್ಪಾ...
ಸಹಜಾತ..ಸಹಜ ಗುಣ.. ಸದ್ಗುಣ.

ತೊಟ್ಟು ಮುಖವಾಡ
ಬಳಿದು ಬಣ್ಣ.
ಲೋಕದಲಿ ಆಟ ಚೆನ್ನ.

ಪ್ರಹಸನ,ಪ್ರದಶನ,
ಪ್ರಶ೦ಸೆಗಿಟ್ಟಿಸಿತೆ೦ದು,ನಮ್ಮ ಬೆನ್ನು
ನಾವೇ ತಟ್ಟಿಕೊಳ್ಳುತ್ತಾ...
ಬೀಗಿ ಬಿರಿಯುವುದು ಯಾರ ಎದುರಿಗೋ...?

ಎ೦ದಿಗೆ ಕೊನೆಯೊ?
ಮುಳ್ಳಿನ ಮೊನೆಯ ಈ ಮನೆಯ ಬದುಕು?

ಹೊತ್ತು ಮುಖವಾಡ,ಸುಸ್ತೋ ಸುಸ್ತು!
ಇನ್ನೂ ಕಳಚಿಕೊಳ್ಳೋದಿಲ್ಲ
ಯಾಕೆ ನಾವು?

3 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ನಿಜ ಮುಖದ ನಾಲ್ಕು ಮಾತ ಬರೆಯುವಿರಾ?

Shashi jois said...

ನಿಮ್ಮ ಗದ್ಯ ರೂಪದ ಪದ್ಯ ಓದಿ ಸುಸ್ತೋ ಸುಸ್ತು..

ಈಶ್ವರ said...

ಲಾಯ್ಕಿದ್ದು .ಸ್ವವಿಮರ್ಶೆ ಬೇಕು ಹೌದು.

Post a Comment