Tuesday, March 9, 2010

ವಿದ್ಯೆ..ಕೈಚಾಚಿ ಪಡೆಯುವುದಕ್ಕಲ್ಲ!!
------------------------

ಕೈತಗ್ಗಿಸಿ ನಡುಬಗ್ಗಿಸಿ
ಪಡೆಯಲೆಂದು...
ಪಡೆಯಲಿಲ್ಲ "ವಿದ್ಯೆ".
"ಅವಿದ್ಯೆ"ಯ ಕೈಚಾಚಿ ತಳ್ಳಿ...
ಪಡೆಯ ಬಯಸಿದ್ದು
ಕೈತುಂಬ ನೀಡಬಲ್ಲ "ವಿದ್ಯೆ".

ತುಂಬ....ತುಂಬಿಕೊಳ್ಳಬೇಕೆ೦ದು
ಹಿಡಿದು ಹೊರಟೆ ದೊಡ್ಡ ಕೊಡ,
ಖಾಲಿಯಾಗದೆ..ಏನನ್ನದರೂ
ಹೇಗೆ ತುಂಬಲಿ?

ಅಬ್ಬ! ನೆನೆದರೆ
ಅದೆಷ್ಟು ಕಷ್ಟ..ಅಲ್ಲ,
"ಅಸೀಧಾರಾ ವೃತ".
"ಪಾಲಿಸಿದವಗೆ ಪಾವತಿಯಿಲ್ಲ"ವೆಂಬುದು
ಮಾತ್ರ ಇಲ್ಲಿ ಇಲ್ಲವೇ ಇಲ್ಲ.

ವಿಸ್ತಾರದ ತಿಳಿವಾದಾಗ..
ಈ ವಿದ್ಯಾಸಾಗರದ ಆಳಕ್ಕಿಳಿದೆ.
ಆಳಾಗುವುದು ತಪ್ಪಲಿ ಎಂದು.
ಸಾಗರದ ಅಲೆಗಳಡಿಯಲಿ
ನುತಿಸುತ ಮಿಂದು
ಬೆಳಕ ಕಂಡು ಬೆರಗುಗೊಂಡೆ!

"ಭವ..ಸಾಗರ"ವ ದಾಟಿ ಕೇವಲ
"ಭವಿ"ಯಾಗದೆ-ಅನುಭಾವಿ
ಆದವರೆ "ಗುರು"ವಾಗಿ ಒದಗಿ,
ಒಡೆದದ್ದಲ್ಲವೇ ಅವಿದ್ಯೆ?

ಅಚ್ಚರಿ!!!

ವಿನಯದಿಂದ "ವಿದ್ಯೆ"ಗಾಗಿ
ಬೆಳ್ಳಂಬೆಳಗ್ಗೆ ಬೇಗನೆ ಎಚ್ಚರಗೊಂಡದ್ದು..
ಮಾತ್ರ..ನೆನಪಿದೆ,
ತಗ್ಗಿ ಬಗ್ಗಿ ನವೆದು ನಡೆದು
"ಮೂರು ಬೆಳೆ"
ಪಡೆದದ್ದು..ಅರಿವಾಗಲೇ ಇಲ್ಲ.

ಅರೆ!
"ಅರಿವು" ಅರಿಯದೆ ಉಳಿದು..
ನಮಗೆ ನಾವೇ ಅರಿ ಯಾಗುವುದೇಕೆಂದು
ಅನ್ನ ರುಚಿಗಳ ಮರೆತು
ಗುರುವಿನಡಿಯಲಿ ಕುಳಿತು
ಗಳಿಸಿಕೊಂಡೆ "ವಿದ್ಯೆ".

...ಪಡೆದ ವಿದ್ಯೆ..ಕೈಚಾಚಿ ಪಡೆಯುವುದಕ್ಕಲ್ಲ!!!
--------------------------------------

13 comments:

ಮನದಾಳದಿಂದ............ said...

good
ವಿಧ್ಯೆಯ ಮಹಿಮೆಯನ್ನು ಬಲು ಸೋಗಸಲಿ ಬಣ್ಣಿಸಿದಿರಲ್ಲ.
ಸುಂದರವಾಗಿದೆ.

ಸಾಗರದಾಚೆಯ ಇಂಚರ said...

ತುಂಬಾ ಸೊಗಸಾದ ಕವನ
''ತುಂಬ....ತುಂಬಿಕೊಳ್ಳಬೇಂದು
ಹಿಡಿದು ಹೊರಟೆ ದೊಡ್ಡ ಕೊಡ,
ಖಾಲಿಯಾಗದೆ..ಏನನ್ನದರೂ
ಹೇಗೆ ತುಂಬಲಿ?''

ಎಷ್ಟೊಂದು ಅರ್ಥ ಗರ್ಭಿತ

ಮನಮುಕ್ತಾ said...

ಕವನವನ್ನು ಓದಿದ೦ತೆಲ್ಲಾ ಅರ್ಥ ವಿಸ್ತಾರವಾಗುತ್ತಾ ಹೋಗುತ್ತದೆ.
ಕವನದಲ್ಲಿ ನಿಜವಾದ ವಿದ್ಯೆಯ ಅರ್ಥ ಅಡಗಿದೆ.”ಪಡೆದ ವಿದ್ಯೆ ಕೈಚಾಚಿ ಪಡೆಯುವುದಕ್ಕಲ್ಲ” ಎ೦ಬ ತತ್ವವಿರಿಸಿಕೊ೦ಡು ವಿದ್ಯೆಗಳಿಸಿಕೊಳ್ಳುವವರು ಬೆರಳೆಣಿಕೆಯಷ್ಟೆ ಇರಬಹುದು ಎನಿಸುತ್ತದೆ.
ತು೦ಬಾ ಚೆನ್ನಾಗಿ ಬರೆದಿದ್ದೀರಿ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ವೆ೦ಕಟಕೃಷ್ಣರೆ.,"ಖಾಲಿಯಾಗದೆ..ಏನನ್ನದರೂ
ಹೇಗೆ ತುಂಬಲಿ?"-ತು೦ಬದೇ ಇರುವುದನ್ನು ಯಾವುದೇ ಆಗಲಿ ಹೇಗೆ ಖಾಲಿ ಮಾಡಲಿ?
ಚೆನ್ನಾಗಿ ಬರೆದಿದ್ದೀರಿ.ವಿದ್ಯೆ..ಕೈಚಾಚಿ ಪಡೆಯುವುದಕ್ಕಲ್ಲ!!

V.R.BHAT said...

ಕವನ ಚೆನ್ನಾಗಿದೆ, ಧ್ವನ್ಯರ್ಥದಲ್ಲಿ ಇದು ಕಾಸು ಮಾಡಲು ಬಳಸುವ ವೈದ್ಯ ವಿದ್ಯೆ ಮತ್ತು ಇಂಜಿನೀಯರಿಂಗ್ ಗೂ ಕೂಡ ಹೋಲುತ್ತದೆ!

PARAANJAPE K.N. said...

ಬಹಳ ಚೆನ್ನಾಗಿದೆ ಕವನ,

Unknown said...

hummmmmmm

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಕ್ಷಮಿಸಿ,ಗೊರೆ ಸಾರ್,
ತಮ್ಮ ಅಭಿಪ್ರಾಯ ಏನೆಂದು ಅರ್ಥಆಗಿಲ್ಲ.

ದೀಪಸ್ಮಿತಾ said...

ವಿದ್ಯೆಯ ಮಹತ್ವ ಚೆನ್ನಾಗಿ ಬರೆದಿದ್ದೀರಿ, ಒಳ್ಳೆ ಕವನ

Raghu said...

ವಿದ್ಯೆ..ಕೈಚಾಚಿ ಪಡೆಯುವುದಕ್ಕಲ್ಲ!! ಸತ್ಯವಾದ ಮಾತು..
ಸುಂದರ ಕವನ...
ನಿಮ್ಮವ,
ರಾಘು.

ಸೀತಾರಾಮ. ಕೆ. / SITARAM.K said...

ಚೆ೦ದದ ಕವನ . ಧನ್ಯವಾದಗಳು.

Snow White said...

arthagarbitha kavana..chennagide sir :)

ಹರೀಶ ಮಾಂಬಾಡಿ said...

ತುಂಬ....ತುಂಬಿಕೊಳ್ಳಬೇಂದು
ಹಿಡಿದು ಹೊರಟೆ ದೊಡ್ಡ ಕೊಡ,
ಖಾಲಿಯಾಗದೆ..ಏನನ್ನದರೂ
ಹೇಗೆ ತುಂಬಲಿ?
....
ಅರ್ಥಗರ್ಭಿತ

Post a Comment