Wednesday, May 5, 2010





ಬಂಧಿ...
-------------------

ಅದೇಕೊ ಏನೋ
ಇಂದು ಬೆಳಿಗ್ಗೆ
ಅಯಾಚಿತವಾಗಿ,
ಅನಿರೀಕ್ಷಿತವಾಗಿ,
ಬೀಸಿಬಂದ ಗಾಳಿಯ ರಭಸಕ್ಕೆ,
ಶತಮಾನಗಳೆಷ್ಟೊ ತುಂಬಿದ
ನನ್ನ....ಪಂಜರ..
ಚೂರು ಚೂರಾಯಿತು.

ಬಟ್ಟ ಬಯಲಲ್ಲಿ ಬಿದ್ದೂ,
ಅದು ಹೇಗೋ ಸುಧಾರಿಸಿಕೊಂಡು
ಚಾಚಿದ ಮಾಡಿನ ತೊಲೆಯನ್ನಧರಿಸಿ,ಏರಿ
ಅಲ್ಲಿಯೇ
ಕುಳಿತಿದ್ದೇನೆ.

ಪಂಜರದಲ್ಲಿ ,ಹಸಿಬಟಾಣಿ
ಚಪ್ಪರಿಸಿ ತಿನ್ನುತ್ತಾ ಇರುವಾಗ,
ಅನಿಸುತ್ತಿತ್ತು..
ಎಂದಿಗೋ..
ಹೊರಗೆ..ಹಾರಿ..
ಮುಗಿಲನೇರಿ ಆಚೆ ಲೋಕದಾಚೆ
ಅನಂತದೆಡೆಗೆ ಗಮನ.......

ಆದರೆ,
ನಾನಿನ್ನೂ ಕುಳಿತಿರುವೆ ಯಾಕಿಲ್ಲಿ?
ಮರೆತೆ.....ಯಾಕೆ ಹುಟ್ಟುಗುಣ?
ಶತಮಾನದ ಪಂಜರದ ಅಮಲೋ?
ಹಸಿ ಬಟಾಣಿಯ ಮೋಹಕ ರುಚಿಯೋ?

ಅನಾಯಾಸವಾಗಿ ದೊರಕಿದ್ದು ಮೆದ್ದು,
ಸಹಕರಿಸುತ್ತಿಲ್ಲ ದೇಹ.

ಬಹುಶ:
ಕಳಚಿದರೆ ಮಾತ್ರ
ದೇಹ..
ಪಂಜರ ಕಳಚಿಕೊಂಡದ್ದು
ಅರಿವಾಗಿ
ರೆಕ್ಕೆ ಬಿಚ್ಚಿಕೊಂಡೀತೇನೋ...
ದಿಗಂತ..ಗಮನ
ಅನಂತಯಾನ ಲಭ್ಯವೇನೋ?
---------------------------
(ಚಿತ್ರ..ಅಂತರ್ಜಾಲ)

21 comments:

Jyoti Hebbar said...

Nice Kavana... ishta aaytu..

ಸೀತಾರಾಮ. ಕೆ. / SITARAM.K said...

ಪ೦ಜರದಲ್ಲಿದ್ದ ಮನಗಳು ಪ೦ಜರ ಅನಾವರಣವಾದರೂ ಹಾರದ ಮಟ್ಟಕ್ಕೆ ಜಾಡ್ಯ-ಮೌಡ್ಯದಲ್ಲಿ ಹೂತುಹೋಗಿರುವ ಚಿತ್ರಣ ಸೊಗಸಾಗಿದೆ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಕಳಚಿದರೆ ಮಾತ್ರ
ದೇಹ..
ರೆಕ್ಕೆ ಬಿಚ್ಚಿಕೊಂಡೀತೇನೋ...
ದಿಗಂತ..ಗಮನ
ಅನಂತಯಾನ ಲಭ್ಯವೇನೋ?
ಬಹಳ ಇಷ್ಟವಾದವು ಈ ಮೇಲಿನ ಸಾಲುಗಳು.

ಮನದಾಳದಿಂದ............ said...

ಹಳೆಯ ಮೂಡತೆಯ ಪಂಜರದಿಂದ ಹೊರಬಂದರೂ ಅದರ ಅಂಧಕಾರದ ಮೌಲ್ಯಗಲಿದ ಹೊರಬರಲಾಗುವುದಿಲ್ಲ ಎಂಬ ಕಾಟು ಸತ್ಯವನ್ನು ಚೆನ್ನಾಗಿ ತಿಳಿಸಿದ್ದೀರಾ.
ದನ್ಯವಾದಗಳು.

ತೇಜಸ್ವಿನಿ ಹೆಗಡೆ said...

Nice poem....ದಾಸ್ಯದಿಂದ ಮುಕ್ತಿ ದೇಹಕ್ಕಾದರೆ ಸಾಲದು. ಮನಸಿಗೂ ಆಗಬೇಕು..

sunaath said...

ಪಂಜರವನ್ನು ಪ್ರೀತಿಸುವ ಹಕ್ಕಿ ಬಂಧಮುಕ್ತವಾದೀತೆ? ಸುಂದರವಾದ ಕವನ.

ಓ ಮನಸೇ, ನೀನೇಕೆ ಹೀಗೆ...? said...

ಪಂಜರದಲ್ಲೇ ಜೀವನ ಕಳೆದ ಹಕ್ಕಿಗೆ ಆ ಪಂಜರ ಪ್ರಪಂಚದಿಂದ ಹೊರ ಬಂದಾಗ ಆಗುವ ಅಯೋಮಯ ಮನಸ್ತಿತಿಯ ಚಿತ್ರಣ ಚೆನ್ನಾಗಿ ಬಂದಿದೆ, ಸುಂದರ ಕವನ ..ಇಷ್ಟವಾಯ್ತು ಸರ್.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಜ್ಯೋತಿ,ಸೀತಾರಾಮ್,ಮುಳಿಯಾಲ,ಮನದಾಳದಿಂದ,ತೇಜಸ್ವಿನಿ,sunaath,
ಓ ಮನಸೇ,
ಎಲ್ಲರಿಗೆ ವಂದನೆಗಳು..

V.R.BHAT said...

nice

Ittigecement said...

ಬಹಳ ಚಂದದ ಕವನ..!

geete said...

ದಾಸ್ಯಕ್ಕೊಳಗಾದ ಮನಸ್ಸು, ದೇಹ, ಈ ಜೀವನ - ಸ್ವಾತಂತ್ರದ ಸುಖದ ಅರಿವಿದ್ದರೂ, ಅಂತರಂಗದ ಇಚ್ಚೆಗೆ ವಿರುದ್ಧವಾಗಿ, ಹಂಗಿನ ಅರಮನೆಯನ್ನೇ ಬಯಸುವುದು!- ಎಷ್ಟು ವಿಚಿತ್ರ? ಆದರೂ ಎಷ್ಟು ಸತ್ಯ..."...ಬಯಕೆ ತೋಟದ ಬೇಲಿಯೊಳಗೆ, ಕರಣಗಣದಿ ರಿಂಗಣ ...." ಅಡಿಗರ ಕವನವನ್ನೇ ಪ್ರತಿಬಿಂಬಿಸುತ್ತಿದೆ, ಒಂದು ರೀತಿಯಲ್ಲಿ ನಿಮ್ಮ ಕವನ-ಚೆನ್ನಾಗಿದೆ

Unknown said...

Chennaagide..

Snow White said...

ಆದರೆ,
ನಾನಿನ್ನೂ ಕುಳಿತಿರುವೆ ಯಾಕಿಲ್ಲಿ?
ಮರೆತೆ.....ಯಾಕೆ ಹುಟ್ಟುಗುಣ?
ಶತಮಾನದ ಪಂಜರದ ಅಮಲೋ?
ಹಸಿ ಬಟಾಣಿಯ ಮೋಹಕ ರುಚಿಯೋ?

awesome lines :)

Raghu said...

ಒಳ್ಳೆಯ ಕವನ..ತುಂಬಾ ವಿಬಿನ್ನ ರೀತಿಯಲ್ಲಿ ಇದೆ...
ನಿಮ್ಮವ,
ರಾಘು.

H S ASHOK KUMAR said...

ಬಂಧಿ ಕವನ ಉತ್ತಮವಾಗಿದೆ

ದೇಹದ ಪಂಜರ
ಅತ್ಮದ ಅರಿವು
ಬ್ರಹ್ಮಾಂಡದ ದರ್ಶನ

ಪ್ರಾಪಂಚಿಕವಾಗಿ ಪ್ರಾರಂಭವಾಗಿ
ಪಾರಮಾರ್ಥಿಕವಾಗಿದೆ ಕವನ

© ಹರೀಶ್ said...

nice

ಹೊನ್ನ ಹನಿ
http://honnahani.blogspot.com
ಸಮಯ ಸಿಕ್ಕಾಗ ನನ್ನ ಬ್ಲಾಗಿಗು ಬೇಟಿ ನೀಡಿ

© ಹರೀಶ್ said...

nice

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಪ್ರತಿಕ್ರೀಯಿಸಿದ ಎಲ್ಲರಿಗೂ ಧನ್ಯವಾದಗಳು.

Unknown said...

ಹೌದು ಇದೇ ಅಭ್ಯಾಸ ವಾದರೆ ಇನ್ನೂ ಕಷ್ಟ
ಕವನ ಚೆನ್ನಿದೆ

ಗುಡಸಿ ದುನಿಯಾ said...

nimma kavanavella odide tumba ista aytu sir, tumba tumba chennagive......

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಬೆಳ್ಳಾಲ ಗೋಪಿಯವರಿಗೆ,
ಹಾಗೂ
ದುನಿಯಾವಿಷ್ಣುರವರಿಗೂ
ವಂದನೆಗಳು.

Post a Comment