
ನೆಮ್ಮದಿ..ಬೇಕಿದ್ರೆ...
-----------------
ನಿಜಕ್ಕೂ ಅವರಿಗೆ ನನ್ನ ಬಗ್ಗೆ ಪ್ರೀತಿಇದೆಯಾ?
ಇವರಿಗೆ ತುಂಬಾ ಮತ್ಸರಪ್ಪಾ..
ಅವನು ನಿಜವಾಗಿ ನನ್ನ ಕೆಲಸ ಮೆಚ್ಚಿ ಹೇಳಿದ ಮಾತಲ್ಲ ಇದು.
ಅವನಿಗೆ ಖಂಡಿತ ನನ್ನ ಬಗ್ಗೆ ಒಳಗೊಳಗೇ ಅಸಮಧಾನ.ಎದುರಿಗೆ ತೋರಿಸಿಕೊಳ್ಳೊದಿಲ್ಲ ಅಸ್ಟೇ..
ನಮ್ಮನ್ನೇ ಗಮನಿಸುತ್ತಾ ಇರ್ತಾರೆ..ನನಗೆ ತುಂಬಾ ಗರ್ವ,ಜಂಬ ಅಂತ ಗ್ರಹಿಸಿದ್ದಾನೆ/ಳೆ.
ಇದೆಲ್ಲಾ ಎದೆಯಾಳದ ಮಾತ?
ಹೀಗೆ...
ನಾವು ಇನ್ನೊಬ್ಬರು ನಮ್ಮ ಬಗ್ಗೆ ಏನು ಯೋಚಿಸುತ್ತಿರಬಹುದು ಅಂತ ಯೋಚಿಸುವುದು ಎಷ್ಟರಮಟ್ಟಿಗೆ ಸರಿ?
ಅಲ್ಲಾ..ಇನ್ನೊಬ್ಬರ ಮನಸ್ಸಿನಲ್ಲಿ ಏನಿರಬಹುದು?
ಅವನ/ಳ ಯೋಚನೆ ಹೀಗೆಇರುತ್ತೆ ಅಂತ ನಾವು ಹೇಗೆ ಕಂಡುಕೊಳುತ್ತೇವೆ?
ನಾವು ನಮ್ಮನಮ್ಮಲ್ಲೇ ತೀರ್ಮಾನಕ್ಕೆ ಬರುವುದು ತಪ್ಪಲ್ವೇ?
ಇನ್ನೊಬ್ಬರು ಏನು ಯೋಚಿಸ್ತಿರಬಹುದು ಅನ್ನೊ ಯೋಚನೆಯನ್ನು ನಾವು ಮಾಡದಿದ್ರೆ..ಬಹುಶಃ ನಮಗೆ ನೆಮ್ಮದಿ.ಅಲ್ವೇ?
------------------------------
ಇದೇನು ಕವನವಾ,ಗದ್ಯಬರೆಹವೇ ಅಂತ ಯೋಚಿಸಬೇಡಿ.ವಿಷಯದ ಬಗ್ಗೆ ಗಮನ ಹರಿಸಿ.
ನನ್ನ ಮನಸಿಗೆ ಅನಿಸಿದ್ದು.ಬರೆಹಕ್ಕೆ ಇಳಿದಿದ್ದು ಹೀಗೆ..ನಿಮ್ಮಲ್ಲಿ ಹಂಚಿಕೊಂಡಿದ್ದೇನೆ.
15 comments:
its just how any normal human being is, if not he should either be a child, or a saint or a person above normal.
You know i am more impressed by this child's photo-so fresh, innocent...adikke alva helodu-makkalu devaridda hage anta :)
Good chintane....
ಗೀತೆ,ರವಿ,
ದನ್ಯವಾದಗಳು...
ನಿಜ ನಿಮ್ಮ ಮಾತು, ಇನ್ನೊಬ್ಬರ ಮನಸಿನಲ್ಲಿ ಹೀಗಿದೆ, ಹಾಗಿದೆ ಅನ್ನೋದು ನಮ್ಮ ಅನ್ನಿಸಿಕೆ ಅಷ್ಟೇ...ಅದೇ ಎದುರಿನವರ ಅನಿಸಿಕೆಯಾಗಿರಬೇಕು ಅಂತ ಏನೂ ಇಲ್ಲ. ಬಹಳ ಯೋಚನೆ ಮಾಡೋ ವಿಚಾರ. ಪಂಡೋರಾ ಪೆಟ್ಟಿಗೆ ತೆರೆದಿದ್ದೀರಿ ಯಾರಿಗೆ ಯಾವುದು ಬೇಕೋ ಹೇಗೆ ಬೇಕೋ ಯೋಚಿಸಬಹುದು.
’ಅವರ’ ಪ್ರೀತಿ ತಿಳಿಯುವುದಾ
ಅಲ್ಲ... ನೀವು :’ ಮುಖ ಮುಖ ವೂ ಮುಖವಾಡವ ಧರಿಸಿದಂತಿರುವವರ ಮುಖ ಹೇಗೆ ನೋಡುತ್ತೀರಿ ಮಾರಾಯ್ರೇ..?
ಒಂದೊಮ್ಮೆ ’ಮುಖ ನೋಡಿದರೆ ತಿಳಿಯಬಹುದು ಎನ್ನುವ ಕಾಲ ಮುಗಿಯಿತೇ..!
ನೀವೊಮ್ಮೆ ನಿಮ್ಮ ಮೊಮ್ಮಗುವನ್ನು ನೋಡಿ ಆಕೆಯನ್ನು ನಗಿಸಿ... ಆಕೆ ನಕ್ಕಳು ಎಂದಾದರೆ ’ ಆಕೆ ಮುಂದೆ ನಿಮ್ಮ ಮುಖವಾಡ ಕಳಚಿತು ಅಲ್ಲವೇ?
ಸರಿ ಎಂದು ನಿಮಗನಿಸಿದರೆ ಆಕೆಗೆ ನಿಮ್ಮ ಮೇಲೆ ಪ್ರೀತಿ ಇದೆ.....ಅಲ್ಲಲ್ಲ....ಪ್ರಾರಂಭವಾಗಿದೆ....ಈ... ಮುದುಕ ಒಳ್ಳೆಯವನಿರಬಹುದು ಎಂದುಕೊಂಡಿರಬಹುದು... ಅದು ಸರಿ..... ಅದನ್ನು ಉಳಿಸುವುದು ಹೇಗೆ....
ಅದಿರಲಿ....ಈಗ ನಮ್ಮ ಬಗ್ಗೆ.....ಅವರ ಚಿಂತೆ ಬಿಡಿ...
ನಮ್ಮಪ್ಪ,ಚಿಕ್ಕಪ್ಪ ಮೇಸ್ಟ್ರುಗಳು ಹೇಳುತಿದ್ದರು. ನಮ್ಮನ್ನು ತಿಳಿದುಕೊಳ್ಳಲು ಪ್ರಾಥಮಿಕ ಶಾಲೆಗೆ ಹೋಗಿ ಸಣ್ಣ ಕ್ಲಾಸಿಗೆ ಪಾಠ ಮಾಡ ಬೇಕು ಆ ಮಕ್ಕಳು ಪ್ರಾಯ ಪ್ರಬುದ್ಧರಾಗುವಾಗ ನೀವು ’ಜನ ಹೇಗ” ಎಂದು ತಿಳಿಯಬಹುದು ಎಂದು.
ನಾನು ಮೇಸ್ತ್ರಾಗಲಿಲ್ಲಾ.....ಛೇ.....
ಒಂದೊಮ್ಮೆ.....ಮೇಸ್ತ್ರುಗಳಿಗೆ ಮೇಸ್ಟ್ರಾಗಲು ಅವಕಾಶವಿತ್ತು...ಸಾಕಷ್ಟು ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದ್ದೆ.
ನಿಮ್ಮ ಈ " ಅನಿಸಿದ್ದು’ ನನಗೊಂದು ರೀತಿ ಅನಿಸಿದ್ದು ಎಂದು ನಿಮಗನಿಸಿದರೆ ’ ಪುನಾ ಒಮ್ಮೆ ವಿವರಿಸಿ ನೋಡಾ....!
ಮಾದಣ್ಣಾ,ನೀವು ಮೊದಲು ನನ್ನ "ಮುಖವಾಡ" ಓದಿ,ಆಮೇಲೆ,ನೆಮ್ಮದಿ ಓದಿದಿರಾ ಅಂತ ಅನಿಸಿತು.ಅಥವಾ ಮೊದಲಿನ ಸಾಲನ್ನು ಮಾತ್ರ ಓದಿದಿರಾ?
ಇಡೀ ಬರೆಹ ಇರುವುದು-ಇನ್ನೊಬ್ಬರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಅಂತ ನಾವು ವ್ಯರ್ಥ್ಯ ಯೋಚಿಸುವುದು.ಅನ್ನುವ ಬಗ್ಗೆ.ಸಾಮಾನ್ಯವಾಗಿ ಜನ ಇನ್ನೊಬ್ಬರ ಬಗ್ಗೆ ಅನಾವಶ್ಯಕವಾಗಿ,ಅಗತ್ಯಕ್ಕಿಂತ ಹೆಚ್ಚು ಯೋಚಿಸುತ್ತಾರೆ.ಮಜಾ ಅಂದ್ರೆ ಅವರು ನಿಜವಾಗಿ ಏನುಯೊಚಿಸುತ್ತಾರೋ ಗೊತ್ತಿಲ್ಲ. ನಮ್ಮ ಮನಸಿನ ನೇರಕ್ಕೆ ಅವರು ಹೀಗೆ ಯೋಚಿಸುತ್ತಿರ ಬಹುದು ಅಂತ ತಿಳಿದುಕೊಂಡು .....
ನಮ್ಮ ಯೋಚನೆಯನ್ನು ಮುಂದುವರಿಸೋದು..
ಒಂಥರಾ ಇದು ಎದುರುಬದುರು ಒಬ್ಬನೇ ಕುಳಿತು ಚದುರಂಗ ಆಡಿದಂತೆ..
ಈ ರೀತಿ ಸುಮ್ಮನೇ ಕೊರಗುತ್ತೇವಲ್ಲಾ ಅಂತ ಅನಿಸಿದಾಗ ಅದು ಬರೆಹದಲ್ಲಿ ಬಂದದ್ದು ಹೀಗೆ..
heeganta pratipadisuvudu apraamanikateyaguvudillave?
heegiddu navu bittaru manasu kaduvudu sullaguttadeye? bahushaha manasinaddu bahrahakke bandaddaste nemmady erabahude !!
ಮನಸಿಗೆ ಅನಿಸಿದ್ದು ಬರಹಕ್ಕೆ ಬಂದದ್ದಕ್ಕೆ ಖುಶಿ ಇದೆ.ಅದಲ್ಲ ವಿಷಯ..
ಮೊದಲನೇಯದಾಗಿ ನಾನು ಏನೂ ಪ್ರತಿಪಾದನೆ ಮಾಡ್ತಾಇಲ್ಲ ಇಲ್ಲಿ.ಈ ರೀತಿ ನಡೆಯುತ್ತಾ ಬದುಕಿನಲ್ಲಿ? ಅಂತ ನನ್ನ ಕುತೂಹಲಭರಿತ ಪ್ರಶ್ನೆ !
ಇನ್ನು ಮನಸಿಗೆ ಕಾಡುವ ವಿಚಾರ-ಖಂಡಿತ ಸುಳ್ಳಲ್ಲ.ಅದೇ ಸುಳ್ಳು, ಎನ್ನುವ ಮಟ್ಟ ಶಂಕರರ ಅದ್ವೆತ ವನ್ನು ಮುಟ್ಟುತ್ತೆ.ಶ್ರೀ ಸಾಮಾನ್ಯನ ಮಟ್ಟದಲ್ಲಿ ಈ ರೀತಿ ನಾವು ಯೋಚಿಸಿ,ಸುಕಾ ಸುಮ್ಮನೆ ಕೊರಗುತ್ತೇವೆ.(ಎಲ್ಲರೂ ಅಲ್ಲ ಮತ್ತೆ.)
ಅಂತ ನನಗೆ ಅನಿಸಿತು,ಬರೆದೆ.
ಒಟ್ಟಿನಲ್ಲಿ ನಿಮ್ಮ ಪ್ರಶ್ನೆಗಳು ನನ್ನನ್ನು ಇನ್ನೂ ಹೆಚ್ಹಿನ ಚಿಂತನೆಗೆ ಹಚ್ಹಿದ್ದು ಮಾತ್ರ ಸುಳ್ಳಲ್ಲ!
ಧನ್ಯವಾದಗಳು.ಇದೇ ರೀತಿ ಮುಂದೆಯೂ ನಿಮ್ಮ ಅನಿಸಿಕೆಯನ್ನ ಹಂಚಿಕೊಳ್ಳಿ.
ನಾವು ನಮ್ಮ ದ್ರುಷ್ಟಿಕೋನದಿ೦ದ ಬದುಕುವುದಕ್ಕಿ೦ತಾ...
ಬೇರೆಯವರ ಮನಸಿಗೆ ತ್ರುಪ್ತಿಯಾಗುವ೦ತೆ ಬದುಕಲು ಹೊರಡುತ್ತೇವೆ ಅಲ್ಲವೇ... ನಾವು ನಮಗೋಸ್ಕರ ಬದುಕಲು ಹೊರಟಾಗ ಪ್ರಶ್ನೆಗಳಿಗೆ ಉತ್ತರ ದೊರಕ ಬಹುದೇನೋ.....
ವ೦ದನೆಗಳು.
ಸರಿಯಾಗಿ ಹೇಳಿದಿರಿ.ಇನ್ನೊಬ್ಬರನ್ನು ತ್ಕ್ರಪ್ತಿ ಪಡಿಸುವುದೇ ಬದುಕಿನ ಗುರಿಯಾದಾಗ,ಜೀವನ ಅರ್ಥಶೂನ್ಯ.ಬದಲಾಗಿ ನಮ್ಮ ಸಹಜ ಸುಂದರ ಬದುಕು,ಆತ್ಮೀಯರಿಗೆ ಖುಶಿಯನ್ನೂ ಕೊಡುತ್ತದೆ ಎಂದು ತಿಳಿದಾಗ,ಬಾಳು ನಂದನ ಖಂಡಿತ.ಅಗತ್ಯಕ್ಕಿಂತ ಹೆಚ್ಚಿನ ಆಲೋಚನೆಗಳು,ಗೊಂದಲವನ್ನು,ಇನ್ನೂ ಗೊಜಲಾಗಿಸುತ್ತವೆ.ಅವರ ಪ್ರತಿಕ್ರೀಯೆ ಹಾಗಿರ ಬಹುದೇ?ಹೀಗಿರಬಹುದೇ? ಎಂದು ಕೊರಗೂದಕ್ಕಿಂತ,ಅವ್ಯಕ್ತ ಯೋಚನೆಗಳಿಗೆ,ಚಿಂತಿಸುದಕ್ಕಿಂತ,ವ್ಯಕ್ತ ಪ್ರತಿಕ್ರೀಯೆ ಗಳಿಗೆ ಸ್ಪಂದಿಸುವುದು ಹೆಚ್ಚು ಪರಿಣಾಮಕಾರಿ ಮತ್ತು ಸರಿಯಾದ ವಿಧಾನ ಅಲ್ವೇ?ಇಲ್ಲದಿದ್ದಲ್ಲಿ ನಾವಾಗಿ ಮೂಲೆಯಲ್ಲಿದ್ದ ಚಿಂತೆಯ ಚೇಳು ಪೆಟ್ಟಿಗೆಗೆ ಕೈ ಹಾಕಿದಂತೆ.
ಓದಿ ನನ್ನ ಇನ್ನೊಂದು ಬರೆಹ..ಚಿಂತೆ ಯಾರಿಗೆ ಬೇಡ..ಹೇಳಿ..
http://sharadabooks.blogspot.com/2009/12/blog-post_16.html
ಗೌತಮ್..ದನ್ಯವಾದಗಳು..
ನಿಮ್ಮ ಮಾತಿಗೆ ನನ್ನ ಅಭಿಮತವೂ ಇದೆ ಸರ್, ಬೇರೆಯವರು ನನ್ನ ಬಗ್ಗೆ ಏನೆನ್ನುತ್ತಾರೆ ಅಂತ ಯೋಚಿಸುವುದು- ನಾನು ಸರಿಯಾಗಿಯೇ ಇದ್ದೇನೆ, ಆದರೂ ಜಗತ್ತು ಏಕೆ ನನ್ನಲ್ಲಿ ತಪ್ಪು ಹುಡುಕುತ್ತಿದೆ ಅಂತ ತಲೆಕೆಡಿಸಿಕೊಂಡು ಕೂಡುವುದು- ಎಲ್ಲ ’ನಾನು ಸಸ್ಯಹಾರಿ, ಹಾಗಾಗಿ ನನ್ನನ್ನು ತಿನ್ನಬೇಡ’ ಎಂದು ಹುಲಿಗೆ ಹೇಳಿದಷ್ಟೇ ಹುಚ್ಚುತನ ಅಂತ ಅನ್ನಿಸ್ತದೆ.
ಅದಕ್ಕೇ ದಾಸರು ಹಾಡಿದ್ದು..
ಸಂತೆಯೊಳಗೊಂದು ಮನೆಯ ಮಾಡಿ..
ಅಂತ..
correct... :-) chennagide... :-)
Post a Comment