Thursday, July 15, 2010

Gregory Patrao :: Homestead Demolition

8 comments:

Venkatakrishna.K.K. said...

ಆತ್ಮೀಯರೇ,

ಹೃದಯ ಕಲಕುವ ವೀಡಿಯೊ ಒಂದು ಇಲ್ಲಿದೆ.
ದಯಮಾಡಿ ನಿಮ್ಮ ಅಮೂಲ್ಯ ಸಮಯದ ೭ ನಿಮಿಷಗಳನ್ನು ಈ ವೀಡಿಯೊ ನೋಡಲು ಮೀಸಲಿಡಿ.
ಗ್ರೆಗೊರಿ ಪತ್ರಾವೋ ಎಂಬ ನಮ್ಮದೇ ನಾಡಿನ ನೇಗಿಲಯೋಗಿಗೆ ನಮ್ಮದೇ ಸರ್ಕಾರಗಳಿಂದ ಆಗಿರುವ ಅನ್ಯಾಯದ ಕಥೆಯಿದು.
ಗ್ರೆಗೊರಿ ಪತ್ರಾವೋ ಯಾರ ಸುದ್ದಿಗೂ ಹೋಗದೆ ತನ್ನ ಪಾಡಿಗೆ ತಾನು ದಕ್ಷಿಣ ಕನ್ನಡದ ಹಳ್ಳಿಯೊಂದರಲ್ಲಿ ಸಾವಯವ ಕೃಷಿ ಮಾಡಿಕೊಂಡು ಬದುಕುತ್ತಿದ್ದ ಸಾಧಕ ರೈತ.
ಇಂದು ನಾಡಿನ ಎಲ್ಲ ರೈತರನ್ನು ಅಭಿವೃದ್ಧಿಯ ಹೆಸರಲ್ಲಿ ಒಕ್ಕಲೆಬ್ಬಿಸಿ ಅವರ ಜಮೀನು ಊರುಗಳಿಂದ ಅವರನ್ನು ಒದ್ದೋಡಿಸುತ್ತಿರುವ 'ರೈತನೇ ದೇಶದ ಬೆನ್ನೆಲುಬು' ಆಗಿರುವ ಈ ದೇಶದಲ್ಲಿ ನಮ್ಮ ಪಯಣ ಎತ್ತ ಕಡೆ ಎಂಬುದನ್ನು ನಾವು ಚಿಂತಿಸಬೇಕಿದೆ.
ಇದು ಗ್ರೆಗೊರಿ ಒಬ್ಬರ ಕಥೆಯಲ್ಲ. ರೈತ ಕುಟುಂಬಗಳಿಂದ , ಹಳ್ಳಿ ಮನೆಗಳಿಂದ ಬಂದಿರುವ ನಮಗೂ ನಾಳೆ ಇದೇ ಗತಿ ಬರಬಹುದು.
ಬನ್ನಿ ಜಾಗೃತರಾಗೋಣ.
ರೈತರನ್ನು ಬೆಂಬಲಿಸೋಣ.
ಅಭಿವೃದ್ಧಿಯ ಹೆಸರಲ್ಲಿ ನಮ್ಮ ರೈತರನ್ನು ಬೀದಿಗೆ ತಳ್ಳುವ ಹುನ್ನಾರದ ಕುತಂತ್ರದ ವಿರುದ್ಧ ದನಿ ಎತ್ತೋಣ.

sunaath said...

ಅಮರ ಈ ವಿಡಿಯೋ ಲಿಂಕ್ ಕಳಿಸಿದ್ದರು. ನೋಡಿ ಮನಸ್ಸು ಮರಗುತ್ತದೆ.

ವಸಂತ್ said...

ಇದು ತುಂಬಾ ಘೋರ ಸೋಚನೀಯ ಕೃತ್ಯ. ಇದಕ್ಕೆ ಸರ್ಕಾರವೇ ಬೆನ್ನೆಲುಬು. ಒಂದು ಕಡೆ ರೈತರ ಉದ್ಧಾರದ ಮಾತುಗಳು, ಮತ್ತೊಂದು ಕಡೆ ರೈತರನ್ನು ಒಕ್ಕಲೆಬ್ಬಿಸುತ್ತ ಅವರ ಹೊಲ ಗದ್ದೆಗಳನ್ನು ಕಸಿದುಕೊಂಡು. ಅವರು ಮಾಡುವ ಹೋರಾಟಗಳಿಗೆ ಲಾಟಿ ರುಚಿಯೊ, ಅಥವ ಗುಂಡಿಕ್ಕಿ ಸಾಯಿಸುವ ಪ್ರೌರುತ್ತಿಯೊ, ನಡೆಯುತ್ತಾ ಸಾಗುತ್ತಿದೆ. ಕರ್ನಾಟಕವನ್ನು ಕರ್ನಾಟಕದಂತಲ್ಲದೆ ಅಮೇರಿಕಾದಂತೊ, ಚೀನದಂತೊ, ಮಾಡಲು ಮುಂದಾಗಿರುವುದು ದುಃಖದ ಸಂಗತಿ. ಇಲ್ಲಿ ಇರುವ ಹೊಲ ಮನೆಗಳನ್ನು ಕಸಿದುಕೊಂಡು ವಿಷವಾಯುವನ್ನು ಹುಗುಳುವ ಕಾರ್ಖಾನೆಗಳಿಗೊ ಅಥವಾ ಮತ್ತಾವುದಕ್ಕೊ ಪರವಾನಿಗೆಗೆ ಕೊಟ್ಟು ನಮ್ಮನ್ನು ಉದ್ಧಾರ ಮಾಡುವ ಪರಿಯನ್ನು ಏನೆನ್ನಬೇಕೊ ತಿಳಿಯುತ್ತಿಲ್ಲ. ಮುದೊಂದು ದಿನ ನಮ್ಮಯ ಪಾಡು ದೇವರಿಗೆ ಗೊತ್ತಾಗಬೇಕಿದೆ. ನಮ್ಮ ಹಕ್ಕುಗಳಿಗೆ ನಾವೇ ಹೋರಾಡಿ ಗೆಲ್ಲಬೇಕಾದ ಕಾಲ ದೂರವಿಲ್ಲವೆಂದೆನಿಸುತ್ತದೆ. ಇಂತ ನೀತಿಗೆಟ್ಟ ಸರ್ಕಾರಗಳಿಗೆ ಏನೆನ್ನಬೇಕೊ ತಿಳಿಯುತ್ತಿಲ್ಲ. ನಮ್ಮ ಸಂಪತ್ತನ್ನೆ ಲೂಟಿ ಮಾಡಿ ತಿನ್ನುತ್ತಿದ್ದಾರೆ. ಅದರಂತೆ ಇಲ್ಲಿ ಕರ್ನಾಟಕವೆಂಬ ರಾಜ್ಯವಿತ್ತಲ್ಲ ಎನ್ನುವ ಕಾಲ ದೂರವಿಲ್ಲ ವೆಂದೆನಿಸುತ್ತದೆ ಅಲ್ಲವೆ.

ವನಿತಾ / Vanitha said...

Very sad to see this:(

ಸೀತಾರಾಮ. ಕೆ. / SITARAM.K said...

Very heart burning!

ರವಿಕಾಂತ ಗೋರೆ said...

ಈ ಕೃತ್ಯ ಎಸಗಿದ ಹಾಗೂ ಎಸಗುತ್ತಿರುವ ಹಡಬೆ ಅಧಿಕಾರಿಗಳಿಗೆ ಹಾಗೂ ಬೇವಾರ್ಸಿ ರಾಜಕಾರಣಿಗಳಿಗೆ ಧಿಕ್ಕಾರವಿರಲಿ..

ಪ್ರವೀಣ ಚಂದ್ರ said...

ಅಭಿವೃದ್ಧಿ ನಮಗೆ ಬೇಕು ನಿಜ. ಆದರೆ ಅದನ್ನು ಬಡವರ, ಕೃಷಿಕರ ಸಮಾದಿ ಮೇಲೆ ಕಟ್ಟಬೇಕೆ?

http://chukkichandira.wordpress.com/

ಬೆಳ್ಳಾಲ ಗೋಪಿನಾಥ ರಾವ್ said...

ನಿಜಕ್ಕೂ ಮನಕಲುಕುವ ಕರುಣಾ ಜನಕ ಘಟನೆಯಿದು.
ನಾವು ಇವರಿಗೇನಾ, ಇದಕ್ಕೇನಾ ಓಟು ಕೊಟ್ಟಿರೋದು ಎಂಬ ಅನುಮಾನ ಬರುತ್ತಿದೆ ಒಮ್ಮೊಮ್ಮೆ

Post a Comment