Friday, May 6, 2011
ಕನ್ನಡಿ; ಎನಗೊಂದು ಅಚ್ಚರಿ.
~~~~~~~~~~~~~~~~~~~~

ಕನ್ನಡಿ;
ಏನಚ್ಚರಿ..!

ಕನ್ನಡಿ ಗಾಜಿನಿಂದಾಗಿದೆ...ನಿಜ.
ಆದರೆ
"ಗಾಜು"ಗಳೆಲ್ಲವೂ "ಕನ್ನಡಿ"ಗಳಲ್ಲವಲ್ಲ..!

ತನ್ನೊಳಗೆ ಖಾಲಿಯಾಗಿದ್ದೂ ,
ಇರುವುದ ಇರುವಂತೆ ಪ್ರತಿಫಲಿಸುವ
ನಮ್ಮ ಅರಿವಿಗೆ ತರುವ
"ಕನ್ನಡಿ" ಸತ್ಯ !
"ಪಾರದರ್ಶಕ ಗಾಜು" ಮಿಥ್ಯವೇ ?

ಮುಟ್ಟಲಾರದ,ತಲುಪಿ,ತಟ್ಟಲಾರದ
"ಪಾರದರ್ಶಕ ಗಾಜು"
ಕೇವಲ ದರ್ಶಕ !

ಆಹಾ...
ಒಳಗಿನ ಎಲ್ಲವನ್ನೂ ಕಂಡ ದಾರ್ಶನಿಕನಿಗೂ
ಅವನ ನಿಲುವಿನ
ದರ್ಶನಕ್ಕೆ.."ದರ್ಪಣ" ವೇ ಗತಿ !

ಅರೆ ! ಏನಚ್ಚರಿ !
ದಿಕ್ಕುಗಳ ಎಡ,ಬಲ
ಅದಲು ಬದಲಾಗಿ ತೋರಿಸಿದರೂ
ಆಕಾರ ವಿಕಾರಗಳು
ಅನುಭವಕ್ಕೆ ಸಲ್ಲುವುದು,
ನಮ್ಮೆದುರು ಬಂದ"ಪಾರದರ್ಶಕ ಗಾಜು"
ಬೆನ್ನಿಗೊಂದು "ಪರೆ" ಹಚ್ಚಿಸಿಕೊಂಡು
ಅಪಾರ...ದರ್ಶಕವಾಗಿ ಆಗಿ..
ಬದಲಾಗಿ
"ದರ್ಪಣ"ವಾದಾಗ !
ಅರೆ!
ಎಷ್ಟು ಸೊಗಸಾಗಿದೆ.
***********************

37 comments:

ಪ್ರವೀಣ್ ಭಟ್ said...

are aschrya.. ibru kannadai baggene bardiddeve onde sala.. sir sooper

ತನ್ನೊಳಗೆ ಖಾಲಿಯಾಗಿದ್ದೂ ,
ಇರುವುದ ಇರುವಂತೆ ಪ್ರತಿಫಲಿಸುವ
ನಮ್ಮ ಅರಿವಿಗೆ ತರುವ
"ಕನ್ನಡಿ" ಸತ್ಯ !
"ಪಾರದರ್ಶಕ ಗಾಜು" ಮಿಥ್ಯವೇ ?
sakat saalugalu.. hosa kavana muppu sihiyalla uppu anta nan blogalli haakideeni nodi
pravi

Anonymous said...

ಚೊಲೊ ಇದ್ರೋ..-ಇತಿ ಪ್ರೀತಿಯ ಗ೦ಗಣ್ಣ.

-ChinS said...

Superb Doddappa !!!

sunaath said...

ಅರ್ಥಪೂರ್ಣ ಕವನ!

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಬಹಳ ಸಮಯದ ನ೦ತರ ಚ೦ದದ ಕವನ ಕೊಟ್ಟದ್ದಕ್ಕೆ ಅಭಿನ೦ದನೆ.ಅರಿವಾಗಿಯೂ
ಅರಿವಿಗೆ ಬಾರದ ಕನ್ನಡಿ ಏನಚ್ಚರಿ...!!

Anonymous said...

ನಮ್ಮ ಬೆನ್ನನ್ನು ಮುಖಕ್ಕೆ ಹಿಡಿವ ಅಚ್ಚರಿ ಕನ್ನಡಿ!!! -ಅಜಕ್ಕಳ ಗಿರೀಶ

IBK said...

ಒಳ್ಳೆ ಕವನ, ಬರೆಯುವವರು ಕನ್ನಡಿ ಬಿಟ್ಟಿಲ್ಲ .. ನಾನೂ ಬರೆದಿದ್ದೆ !

ಇನ್ನು ಕನ್ನಡಿ ಏಕೆ ಒಡೆದು ಹಾಕಿದ್ದೇನೆ
ಚೂರು ಚೂರಾಗಿರುವ ಬಾಲ್ಯದ೦ತೆ !!

madanna manila said...

ಕನ್ನಡಿ ಯೊಳಗೆ ನಾವು ಕಾಣುವುದೆಲ್ಲಾ ಸತ್ಯವೇ>>? ಎನ್ನುವುದಕ್ಕೆ ಸೊಗಸಾಗಿ ತಿಳಿಸಿದ್ದೀರಿ.... " ಕನ್ನಡಿ " ಸತ್ಯ....!
ವಾಹ್.... ಏನರ್ಥೈಸೋಣ... ! ಬಹಳ ಸಾರಿ ಓದಬೇಕಾದೀತು ಈ ಅಚ್ಚರಿಯನ್ನ....

ವೆಂಕಟ್ರಮಣ ಭಟ್ said...

chennaagide bareeta iri..

ಕಲರವ said...

kannadiya bagge bahala sundaravaada kavana barediddiri,dhanyavaadagalu.

Deep said...

ಆಹಾ...
ಒಳಗಿನ ಎಲ್ಲವನ್ನೂ ಕಂಡ ದಾರ್ಶನಿಕನಿಗೂ
ಅವನ ನಿಲುವಿನ
ದರ್ಶನಕ್ಕೆ.."ದರ್ಪಣ" ವೇ ಗತಿ

ಈ ಸಾಲುಗಳು ಇಷ್ಟವಾಯಿತು
ದಾರ್ಶನಿಕ ನಿಗೂ ಒಂದು ಕನ್ನಡಿಗೂ ಮಾಡಿದ ಸಮೀಕರಣ ತುಂಬಾ ಹಿಡಿಸಿತು

ಮನಮುಕ್ತಾ said...

excellent..!!

ಸಾಗರದಾಚೆಯ ಇಂಚರ said...

sogasaagide kannadi, enacchari :)

Venkatakrishna.K.K. said...

ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲ ಸಹೃದಯಿ ಸಾಹಿತ್ಯಾಸಕ್ತರಿಗೆ

ಪ್ರೀತಿಯ ವಂದನೆಗಳು.

ಕಳೆದ ಮೂರು ದಿನದಲ್ಲಿ ಮುನ್ನೂರಕ್ಕೂ ಹೆಚ್ಚುಜನ ನನ್ನ ಕವನವನ್ನು ಓದಿದ್ದು,
ನನಗೆ ತುಂಬಾ ಖುಶಿಕೊಟ್ಟ ಸಂಗತಿ.

ಎಲ್ಲ ಓದುರಿಗೂ ಮತ್ತೊಮ್ಮೆ ವಂದನೆಗಳು.

ಮನಸು said...

super kavana sir... enta artha ide..

ನಾಗರಾಜ ಭಟ್ said...

ಸೊಗಸಾದ ಕವನ..ತುಂಬಾ ಇಷ್ಟವಾಯಿತು.

Subrahmanya said...

ಮತ್ತೆ ಮತ್ತೆ ಕಾಡಿದ ಸಾಲುಗಳಿವು. ಬಹಳ ಚತುರಮತಿಯಿಂದ ರಚಿತವಾದ ಕವನ.

Anonymous said...

odedha kannadigu nimma kavana galindha bele sikkanthagidhe...Venkat
Aapyayamaana....:))))

Venkatakrishna.K.K. said...

ತಮ್ಮ ಹೆಸರು ಗೊತ್ತಿಲ್ಲ..
ತಾವು ಏನು ಹೇಳುತ್ತಿದ್ದೀರಿ ಅಂತ ಅರ್ಥ ಆಗಿಲ್ಲ.
ಅದು ಹೇಗೆ ಒಡೆದಕನ್ನಡಿ..?
ಒಡೆದ ಕನ್ನಡಿಯ ವಿಚಾರ ಎಲ್ಲಿ ಬಂದಿದೆ..?
ಪ್ರತಿಫಲಿಸುವ ಕನ್ನಡಿಯ ಬಗ್ಗೆ ಮಾತ್ರ ನಾನು ಬರೆದದ್ದು.
( ಧೂಳಿಲ್ಲದ ಕನ್ನಡಿ,ಚೂರಾದರೂ ಎದುರು ಬಂದ ವಸ್ತು/ಮನುಷ್ಯರನ್ನು ಇದ್ದಂತೆ ತೋರಿಸುವುದಂತೂ ಸುಳ್ಳಲ್ಲವಲ್ಲ..! )

"ಮುಟ್ಟಲಾರದ,ತಲುಪಿ,ತಟ್ಟಲಾರದ
"ಪಾರದರ್ಶಕ ಗಾಜು"
ಕೇವಲ ದರ್ಶಕ !"

ಈ ಸಾಲುಗಳು,
ಪಾರಮಾರ್ಥಿಕ ಸತ್ಯ ದರ್ಶನ ಆದವರು
ಮತ್ತು ಸಾಮಾನ್ಯರನ್ನು ಸೂಚಿಸುತ್ತದೆ.
ಕನ್ನಡಿ ಅನುಭಾವಿಗಳಿಗೆ ಸಂಕೇತವಾಗಿ ಇಲ್ಲಿ ಬಂದಿದೆ.
ಕನ್ನಡಿಯ ಗುಣಕ್ಕೂ ಅವರ ವರ್ತನೆಗೂ ಇರುವ ಸಾಮ್ಯತೆ
(ತಮಗೆಲ್ಲ)ಗೊತ್ತಿರುವ ವಿಚಾರವೇ ತಾನೆ?

praneshachar said...

sookshmavagi charutateinda rachisida kavige sundaravagi moodide munduvariyali nimma baraha tarali nimage ananda yeri yettarakke barahadalli shubhaharikegalu

chandramukhi said...

Chennagide..

http://jyothibelgibarali.blogspot.com said...

chennagide kavana...

Venkatakrishna.K.K. said...

ಎಲ್ಲ ಓದುರಿಗೂ ಮತ್ತೊಮ್ಮೆ ವಂದನೆಗಳು.

prabhamani nagaraja said...

'ಕನ್ನಡಿ' ನಿಜಕ್ಕೂ ಒ೦ದು ಅಚ್ಚರಿಯ ವಸ್ತು. ಅದರ ಬಗ್ಗೆ ವಿಶೇಷ ಅ೦ತರಾರ್ಥದ ಕವನವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು.

Raghu said...

Nice lines...

ಅನಂತ್ ರಾಜ್ said...

ಕವನವು ಅರ್ಥಪೂರ್ಣವಾಗಿದೆ, ವೆ೦ಕಟಕೃಷ್ಣ ಅವರೆ. ಅಭಿನ೦ದನೆಗಳು.

ಅನ೦ತ್

Venkatakrishna.K.K. said...

ಪ್ರತಿಕ್ರೀಯಿಸಿದ ಎಲ್ಲರಿಗೂ ಧನ್ಯವಾದಗಳು.
ನನ್ನ ಉಳಿದ ಕವನಗಳ ಕಡೆಗೂ ಗಮನ ಹರಿಸಿ...

Radhika said...

Venkatakrishna avare,
Aaha bahala samayada nantara accha kannada padya odi santoshavaayitu.

Eshtu sundaravaagi varnisideeri ee sarala vastuvanna!

natarajkangod said...

ಕವನ ಅರ್ಥಪೂರ್ಣವಾಗಿದೆ ಅದು ನಿಮ್ಮ ಅಂತರಾಳವನ್ನು ಕೂಡ ನಿಮ್ಮ ಕಲ್ಪನೆಯ ಕನ್ನಡಿಯಲ್ಲಿ ತೋರಿಸ್ತಾ ಇದೆ ನನಗೊಂದು ಸಾಲು ಕನ್ನಡಿಗೆ ಸಂಬಂದಿಸಿದಂತೆ ನೆನಪಾಗುತ್ತಿದೆ "ಇಬ್ಬನಿ ತಾಗಿದ ಕನ್ನಡಿಯಂತೆ ಮಬ್ಬಾಗಿದೆ ಹೃದಯ "

Venkatakrishna.K.K. said...

ನಟರಾಜ್ ಕಾನ್ಗೋಡ್ ರವರೇ..
ವಂದನೆಗಳು.ನನ್ನ ಉಳಿದ ಕವನಗಳನ್ನು ಗಮನಿಸಿ..
ರಾಧಿಕಾ..
ತಮ್ಮ ಮೆಚ್ಚುಗೆಯ ನುಡಿ ಖುಷಿಯಾಯಿತು.ಪ್ರೀತಿ ಇರಲಿ.

ಕೃಷ್ಣಪ್ರಕಾಶ ಬೊಳುಂಬು/കൃഷ്ണപ്രകാശ് ബൊളുമ്പു said...
This comment has been removed by the author.
devisuthe said...

nija, yavagalu 'sathya darpana', nimma bhavaneya, pratibheya darshana EE kannadiya kavana, Odi nenapayitu eradu dinada hinde odida 10th std(cbse), englishna ondu kavana "Mirror", true, mirror hides never whether fair or ugly, very meaningful

Kadhyaa... said...

Thats a very nice with the word "Gaaju" tumba chengadide..

prashasti said...

ತುಂಬಾ ಚೆನ್ನಾಗಿದೆ. ಈ ಕವನವನ್ನು ಇಷ್ಟು ತಡವಾಗಿ ಓದಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆಯಿರಲಿ.. ಕವನವನ್ನೋದಿದಾಗ ಆಗದ ಅರ್ಥ ನಿಮ್ಮ ಕೆಲ ಕಾಮೆಂಟುಗಳನ್ನೋದಿದಾಗಾಯಿತು.. ಬಹಳ ಸಮಯದ ನಂತರ ಮತ್ತೆ ಬರೆಯೋ ಬದಲು ಬರೆಯುತ್ತಿರಬೇಕಾಗಿ ಈ ಎಳೆಯನ ವಿನಂತಿ :-)

prashasti said...

ತುಂಬಾ ಚೆನ್ನಾಗಿದೆ. ಈ ಕವನವನ್ನು ಇಷ್ಟು ತಡವಾಗಿ ಓದಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆಯಿರಲಿ.. ಕವನವನ್ನೋದಿದಾಗ ಆಗದ ಅರ್ಥ ನಿಮ್ಮ ಕೆಲ ಕಾಮೆಂಟುಗಳನ್ನೋದಿದಾಗಾಯಿತು.. ಬಹಳ ಸಮಯದ ನಂತರ ಮತ್ತೆ ಬರೆಯೋ ಬದಲು ಬರೆಯುತ್ತಿರಬೇಕಾಗಿ ಈ ಎಳೆಯನ ವಿನಂತಿ :-)

ಶಾಂತಲಾ ಭಂಡಿ said...

ವೆಂಕಟಕೃಷ್ಣ ಅವರೆ...
ಕನ್ನಡಿಯೆಂದರೆ ಇಷ್ಟವೇ ನನಗೆ. ಈ ಕನ್ನಡಿಯಂತೂ ತುಂಬ ಇಷ್ಟವಾಯಿತು :-)
ಬರೆಯುತ್ತಿರಿ.

ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ

JAYADEVA PRASAD said...

very nice

Post a Comment