Sunday, January 3, 2010


"ಮಾತು" ನಮ್ಮ ಪ್ರೀತಿಯ ಕಂದ..
------------------

ನಮ್ಮ ಪ್ರೀತಿಯ ಮಗು,ಎಲ್ಲರಂತೆಯೇ
ಮುದ್ದು ಮುದ್ದಾದ,ಮುದ್ದು ಮಗು.


ಕವುಚಿ,ಅಂಬೆಗಾಲಿಕ್ಕಿ,ಹಿಂದೆ ಹಿಂದೆ ಸರಿದು,ಕುಳಿತು
ತ್ತ..ತ್ತಾ..ಅ..ಆ..ಅಮ್ಮಾ ಅಪ್ಪಾ ಎನ್ನುತ್ತಾ ಎದ್ದು
ಪುಟು ಪುಟು..ಹೆಜ್ಜೆ ಹಾಕುತ್ತ ನಡೆದಾಗ,
ಸಂತಸಪಟ್ಟು,ಪೊಟೊ ತೆಗೆದು ಸಂಭ್ರಮಿಸಿದ್ದೇನೆ.

ಆಟ ಪಾಟ,ಶಾಲೆ ಮುಗಿಸಿ,
ಎಲ್ಲ ಬೇಕುಗಳ ಆಸೆಪಟ್ಟು,
ಹಟಹಿಡಿದು,ಅತ್ತು..ಪಡೆದು
ಸಂತಸಪಟ್ಟು ..ಪಟ್ಟು,ಸುಸ್ತಾಗಿದೆ ಈಗ.

ಮಾತೆಂಬ,
ನನ್ನ ಮತ್ತಿನ ಮಗುವೇ,
ಮಲಗಮ್ಮ ಮಲಗು...
ಮಲಗಪ್ಪ ಮಲಗು..
ರಾತ್ರಿಯಾಯಿತು ಕಂದ..
ಸಾಕು ಇಂದಿಗೆ,
ಎದ್ದರೆ ನಾಳೆ ಮತ್ತೆ ಶುರುಹಚ್ಚು...

ಮಲಗು,
ಮಾತೇ..ನನ್ನ ಮುದ್ದಿನ ಮಗುವೇ..
ಮನೆಯ ಮಾಳಿಗೆಯಲ್ಲಿ ಸದ್ದಡಗಿಹೊಗಲಿ...
ಜಾರಿಕೊ..ಕನಸಿನ ಲೊಕಕ್ಕೆ ಕಂದಾ...
ಸಾಕಿಂದಿಗೆ ಸಾಕು..
ರಾತ್ರಿಯಾಯಿತು ಕಂದಾ..
-------------------------

13 comments:

ಸವಿಗನಸು said...

ಚೆನ್ನಾಗಿದೆ ಕವನ....

ವೆಂಕಟಕೃಷ್ಣ ಕೆ ಕೆ ಪುತ್ತೂರು said...

danyavaadagaLu...

geete said...

Cute :)

madanna manila said...

ಇನ್ನೂ ಸರಿ ಓದಿದ್ದಿಲ್ಲೆ.

ದೀಪಸ್ಮಿತಾ said...

ಕವನ ಚೆನ್ನಾಗಿದೆ

prameela said...

maava, ningala kavana ella odide.thumba laaikiddu.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಗೀತೆ,ಮಾದಣ್ಣಾ,ದೀಪ,ಪ್ರಮೀಳಾ,
ಧನ್ಯವಾದಗಳು.

Vinay.S said...

Tumba Chennagide Sir. Kavite bahala ishta aaytu :-)

-Vinay.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಧನ್ಯವಾದಗಳು..ವಿನಯ್.

soumya said...

good one.

Unknown said...

Bhavayya, Tumba layakkiddu.1) Odule purusothille 2)Yavagadaru biduvu madi noduthe.3) Kannada type madule bathille.4)Comments rare.50 Idu heenge muduvariyali.5) Preeti, bhavane galu namma nammalli ippadu ,adara tilivale kaliyekku asthe.Aase namma mude nadasule,guri namma dikku,adara talapuva ase namma dari asthe.Balavada guri illaddare dari thapputhu ashte.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಅಗಾಗ ಪುರುಸೊತ್ತಾದಾಗ ಬರುತ್ತಿರಿ..
ಲಹರಿ..ಬಂದಾಗ ಮಾತ್ರ ಆನುದೆ ಬರವದು.

V.R.BHAT said...

ವೆಂಕಟರೇ, ಚೆನ್ನಾಗಿದೆ. ಮತ್ತೆ ಬರೀರಿ, ಧನ್ಯವಾದ

Post a Comment