Wednesday, January 13, 2010


ಮೊಲ ಮತ್ತು ಆಮೆ
--------------


ಅನಿರೀಕ್ಷಿತವಾಗಿ
ತುಂಬ ಸಮಯದಿಂದ ನಿರೀಕ್ಷಿಸಿದ್ದ
ಆಮೆ
ಒಂದು ಸಿಕ್ಕಿತು.
ಸಿಹಿ ನೀರಿನ ಬಾವಿಯಲ್ಲೇ ಇತ್ತೋ?
ಪಾರವಿಲ್ಲದ ಸಮುದ್ರದಿಂದ ಬಂತೋ?
ಅಂತೂ ಬಂದ
ಆಮೆ
ಈಗ ಮನೆಯೊಳಗೇ ಮನೆ ಮಾಡಿದೆ.

ಆಮೆ
ನಡಿಗೆ ಎಂಥ ಚಂದ!
ಒಂದೊಂದೇ ಪುಟ್ಟ ಪುಟ್ಟ ಕಾಲನ್ನು ಊರಿ,
ನಿಧಾನಕ್ಕೆ ತಲೆ ಹೊರಗೆ ಹಾಕಿ,ಮೇಲೆ ಎತ್ತಿ,ಅಕ್ಕ ಪಕ್ಕ ನೋಡಿ,ಕಣ್ಣು ಹೊರಳಿಸಿ,
ಮುಂದೆ ಮುಂದೆ ಹೋಗುವ ಅಂದವೇ ಅಂದ.

ತಿನ್ನುವ,ಮೂಸುವ,ಮುಟ್ಟುವ.ಕೇಳುವ,ನೋಡುವ,
ಎಲ್ಲವೂ ಬೇಕು ಇದಕ್ಕೆ!
ಎಷ್ಟು ಬೇಕೆಂದರೆ ಇನ್ನೂರು ವರ್ಷ..
ಬದುಕುತ್ತಂತೆ...
ಅದಕ್ಕೇ
ಆಮೆ
ಎಲ್ಲರಿಗೂ ಇಷ್ಟ.

ಭೂಮಿಭಾರ ಹೊರುವಷ್ಟು ಗಟ್ಟಿ ಚಿಪ್ಪಲ್ಲಿ ನಕ್ಷತ್ರ ಇದ್ದರೆ
ಜಗತ್ತಿನಲ್ಲೆಲ್ಲಾ ಭಾರೀ ಬೆಲೆಯಂತೆ.
ಹೊರಗಿನ ಗಟ್ಟಿಯಷ್ಟೇ ಒಳಗೆ ಮೆತ್ತಗೆ ನೋಡು.
ಅದಕ್ಕೇ ಮನುಷ್ಯನಿಗೆ ನೀನೆಂದರೆ ಅಕ್ಕರೆ.

ಮುಂದೆ ಮುಂದೆ ಓಡಿದ ಮೊಲ,
ಸುಸ್ತಾಗಿ ಮಲಗುವುದು ಖಂಡಿತ.
ಕೊನೆಗೂ ಜಯ ನಿನಗೇ.
ಅದಕ್ಕೇ
ಆಮೆ
ನೀನಾಗು ನಮ್ಮೆಲ್ಲರ ಸಂಗಾತಿ.
ಜೊತೆ, ಜೊತೆಯಲ್ಲೇ
ಅನುಭವಿಸುತ್ತಾ..ಬದುಕನ್ನು ಪೂರ್ತಿ ಆನಂದಿಸೋಣ.
ಅವಸರದ,ವೇಗಿ,ಸುಂದರಿ ಆದರೂ
ಮೊಲವನ್ನು
ಕಳಿಸೋಣ, ದೂ....ರ. ಕಾಡಿಗೆ.
ಆಮೆ
ಇರಲಿ ನಾಡಿಗೆ.
------------

11 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಅವಸರದ,ವೇಗದ,ಧಾವಂತದ
ಬದುಕಿಗೆ ಹಾಕೊಣ ಕಡಿವಾಣ.
ಚಪ್ಪರಿಸುತ್ತ ಸವಿಯೋಣ
ನಾಲ್ಕು ದಿನದ ಬಾಳನ್ನ..

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

intrestig

Ittigecement said...

ಸುಂದರ ಕವನ....
ಮುದ್ದಾದ ಪುಟಾಣಿಯ ಫೋಟೊ...

ಎರಡೂ ಸೊಗಸಾಗಿದೆ...
ಅಭಿನಂದನೆಗಳು...

ಸಂಕ್ರಮಣದ ಶುಭಾಶಯಗಳು...

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಚೆನ್ನಾಗಿದೆ,
ಯೋಚಿಸಿ ನಡೆಯೋಣ..,ಓಡೋಣ,
ಓಡಿ ಯೋಚಿಸುವುದಕ್ಕಿ೦ತ !!
ಏನ೦ತೀರಿ?

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಚೆನ್ನಾಗಿದೆ.
ಯೋಚಿಸಿ ನಡೆಯೋಣ..ಓಡೋಣ..,
ಓಡಿ...ಯೋಚಿಸುವುದಕ್ಕಿ೦ತ.
ಏನ೦ತೀರಿ?

Unknown said...

ಚೆನ್ನಾಗಿದೆ... ಆದ್ರೆ...ಕೆಲವೊಂದು ಕಡೆ ಬರೆದದ್ದು ತಾಳ ತಪ್ಪಿದೆ ಅನಿಸಿತು... ಅಥವಾ ನನಗೆ ಅರ್ಥವಾಗಲಿಲ್ಲವೋ ತಿಳಿಯದು...
"ತಿನ್ನುವ,ಮೂಸುವ,ಮುಟ್ಟುವ.ಕೇಳುವ,ನೋಡುವ,
ಎಲ್ಲವೂ ಬೇಕು ಇದಕ್ಕೆ!
ಎಷ್ಟು ಬೇಕೆಂದರೆ ಇನ್ನೂರು ವರ್ಷ..
ಬದುಕುತ್ತಂತೆ..."
ಇಲ್ಲಿ ಮೂರು ಮತ್ತು ನಾಲ್ಕನೇ ಸಾಲು ಏನೋ ತಪ್ಪಿದೆ ಅನಿಸಿತು...
ಅಂತೂ ತುಂಬಾ ಸುಂದರವಾಗಿ ಹೇಳಿದ್ದೀರಿ... ಚೆನ್ನಾಗಿದೆ.. ಹೀಗೆ ಬರೆಹಕ್ಕೆ ಬರುತ್ತಿರಲಿ...

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ನಿಧಾನವೇ ..ಪ್ರಧಾನ,
ಅಂತ ಆದಲ್ಲಿ,ಧೀರ್ಘ ಕಾಲದ ಅನುಭವ ನಮ್ಮದಾಗಬಹುದು
ಎನ್ನುವ ಆಶಯ.
ಅಥವಾ
ಇಂದಿನ ವೇಗದ ಬದುಕಿನ ರೀತಿ..
ನಾವು ಓಡುತ್ತಿರುವ ಪರಿ..
ನಮ್ಮನ್ನು ಯಾವ ರೀತಿ ವಂಚಿಸುತ್ತದೆ ಎಂದರೆ ನಾವೇನು ಮಾಡುತ್ತಿದ್ದೇವೆ ಎನ್ನೂದನ್ನು ನೋಡುವಷ್ಟೂ ಸಮಯವನ್ನು ನಾವು ಇವತ್ತು ಉಳಿಸಿಕೊಂಡಿಲ್ಲ.
ಅದಕ್ಕಾಗಿ ಆಮೆಯ ನಡಿಗೆ/ಬದುಕುವ ಕ್ರಮ ನಮ್ಮದಾಗಲಿ,ಅಂತ ಅನಿಸಿತು.
ಬರೆದೆ.ಅಷ್ಟೆ.
ರವಿಯವರೇ ಧನ್ಯವಾದಗಳು.
ಪ್ರಕಾಶ ಹೆಗಡೆಯವರೆ ಆಗಾಗ ಬರುತ್ತಿರಿ.
ಮುಳಿಯಾಲ ಕೂಸಿಗೆ ಧನ್ಯವಾದ.

ಶಿವಪ್ರಕಾಶ್ said...

Nice one :)

Subrahmanya said...

ನಿಧಾನವಾದರೇನಂತೆ ? ಬುದ್ದಿವಂತಿಕೆ ಮುಖ್ಯ ಅಲ್ಲವೇ .! ಚೆನ್ನಾಗಿದೆ ಕವನ....

Unknown said...

’ಅಂತೂ ಬಂದ ಆಮೆ ಈಗ ಮನೆಯೊಳಗೇ ಮನೆ ಮಾಡಿದೆ’, ’ಮೊಲವನ್ನು ಕಳಿಸೋಣ ದೂರ ಕಾಡಿಗೆ. ಆಮೆ ಇರಲಿ ನಾಡಿಗೆ’- ಇಂಥೆಲ್ಲ ಸಾಲುಗಳಿಂದ ಕವಿತೆಗೆ ಅಕ್ಷರಗಳ ಮೀರಿದ ಭಾವ ಪ್ರಾಪ್ತವಾಗಿದೆ ಸರ್. ಹೊಸಬಗೆಯ ಬರವಣಿಗೆ ಹೇಗೆ ಹೊಸಬಗೆಯ ಓದಿಗೆ ನಾಂದಿಯಾಗಬಲ್ಲದು ಎಂಬುದಕ್ಕೆ ಮಿಂಚಿನ ಸಾಕ್ಷಿ ಇದು. good writing.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ತ್ಯಾಂಕ್ಸ್..ಕಾವ್ಯಾ..

Post a Comment