Friday, January 29, 2010

ಗೆಳೆಯಾ..
ನೋವೇ ದೊರೆತರು ನಿನಗೆ
ಮಾಡಿಕೊಳ್ಳ ಬೇಕಲ್ಲ ಅದನ್ನು ಮುತ್ತಿನ ನತ್ತು.
ಸುಖದ ಮುತ್ತು.
ಶರೀರಕ್ಕಾದರೆ ನೋವು ಮಾಯದೇ
ದಿನ,ದಿನಗಳಲ್ಲಿ,ತಿಂಗಳುಗಳಲ್ಲಿ.
ಒಂದಷ್ಟು ಸಮಯದಲ್ಲಿ
ಆಗದದು ಸ್ವಾತಿ ಹನಿ.
ದೊರೆಯದು ಕೆನೆಕಟ್ಟಿ ಮುತ್ತು!

ಮನದೊಳಗೆ ಇಳಿಯ ಬೇಕು ಸುಳಿ ಸುತ್ತಿ ನೋವು.

ಘಟನೆಗಳು,ಸಂಗತಿಗಳು
ಭಾವನೆಗಳ ಭಾವಲೋಕಕ್ಕೆ ಕನ್ನವಿಕ್ಕಿ
ಕೊರೆಯಲಾರಂಬಿಸಿದರೆ
ತಿರುಳ ಕೊರೆವ ಮರಿದುಂಬಿಗಳು.

ಕದತೆರೆಯದಿದ್ದರೆ
ಮನದೊಳಗೆ
ಕೆಂಪುಗಂಬಳಿ ಹಾಸಿ
ಕರೆಯದಿದ್ದರೆ ಒಳಗೆ
ಸುತ್ತಬೇಕಷ್ಟೆ ತಾನೆ ಹೊರಗೆ ಸುತ್ತು ಪೌಳಿಯಲ್ಲಿ?

ಸುತ್ತ ಸುತ್ತಲಿ ಬಿಡು ಅದರ ಜಾಡು ಅದೇಹಿಡಿದು.
ಎಂದರಾಗದು ಗೆಳೆಯಾ

ಮೊಹಗೊಂಡು ಅದರ ಸ್ವರ ಮಾಧುರ್ಯಕ್ಕೆ,ಮಧುರಾಲಾಪಕ್ಕೆ
ಶೃತಿ ಸೇರಿಸಿದೆಯಾದರೆ ಸಾಕು
ಮತ್ತೆ ಅದು ಲಕ್ಶ್ಮಣರೇಖೆ ದಾಟಿದ ಸನ್ಯಾಸಿಯೇ ಸರಿ.

ಸ್ವರ್ಣ ಲಂಕೆಯಲ್ಲೂ
ಶೋಧಿಸು ಮೂಲವನು
ಕಾರ್ಯ ಕಾರಣ ಕಾರಕವನು
ಆನಂದಿಸು ಮರಿದುಂಭಿಯ
ಮಧುರ ಮರುಳ ಮೊರೆತವನು

ಸಡಿಲಿಸು ಪಟ್ಟು, ಬಿಟ್ಟು ಬಿಡು
ನೋವು ತಿನ್ನ ಬೇಕೆನ್ನುವ ಹುಚ್ಚು

ಅನುಭವಿಸು
ಕುಣಿ,ಕುಣಿಸು
ಅದರ ತಾಳಕ್ಕೆ ನೀನು,ನಿನ್ನ ತಾಳಕ್ಕೆ ಅದು.
ಆಗ
ಅದೊ
ನೋವಿನಾಳದ
ಸಮುದ್ರದಲ್ಲೂ ಸುಖದ ಮತ್ತು
ಅಲ್ಲ ..ಮುತ್ತು!
ಮಾಡಿಕೊ ನತ್ತು!
------------------

13 comments:

ಹೆಸರು ರಾಜೇಶ್, said...

ನನಗೆ ಇಷ್ಟವಾಯಿತು.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ತ್ಯಾಂಕ್ಸ್..ರಾಜೇಶ್.

AshaJP Bhat said...

good.

Subrahmanya said...

nice ....innashtu bareyiri..

Ittigecement said...

ತುಂಬಾ ಸೊಗಸಾಗಿದೆ...
ಶಬ್ಧಗಳು..
ಅದರ ಭಾವಗಳು ಸುಂದರವಾಗಿ ವ್ಯಕ್ತವಾಗಿದೆ...

ಅಭಿನಂದನೆಗಳು..ಚಂದದ ಕವನಕ್ಕೆ...

seema aarella said...

Thumbaa channagide...Novu manasannu kadadi bhavanegalannu horatharutthade...santhosha manasannu thumbi maathe illadanthe maadutthade....novu kramena hithavaagutthade...mutthagutthade... natthagutthade!!!!!
Hats off!

Anonymous said...

muttina nattu chennaagide.-girisha ajakkala

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ನನ್ನ ಬ್ಲಾಗ್ ನ್ನು ಓದುತ್ತಿರುವ,ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಧನ್ಯವಾದಗಳು.ಹೊಸದಾಗಿ ಬರುತ್ತಿರುವವರು ಹಿಂದಿನ ಬರಹಗಳನ್ನೂ,ಪುರುಸೊತ್ತುಮಾಡಿಕೊಂಡು ಓದಿ.
ತಮ್ಮ ಪ್ರೀತಿಯ,
ವೆಂಕಟಕೃಷ್ಣ.ಕೆ.ಕೆ.
ಪುತ್ತೂರು.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ನೋವೇ ಆದರೂ ಮಾಡಿಕೊಳ್ಳಬೇಕಲ್ಲ ಮುತ್ತಿನ ನತ್ತು,ಒ೦ದಷ್ಟು ಅತ್ತು.
ಅನುಭವ,ಅನನ್ಯತೆ ಮತ್ತು ಪಕ್ವತೆಯನ್ನು ಕೊಡುತ್ತದೆಯಲ್ವೇ?
ಚೆನ್ನಗಿದೆ ಸಾರ್

Unknown said...

Nice!!

ವೆಂಕಟಕೃಷ್ಣ ಕೆ ಕೆ ಪುತ್ತೂರು said...

Mr muliyal and ravikant sir thnxxxx.

ಸಾಗರದಾಚೆಯ ಇಂಚರ said...

ಸುಂದರ ಕವನ,
ಸಾಲುಗಳು ಬಹ ಮುದ ನೀಡುತ್ತವೆ

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸಾಗರದಾಚೆಯ ಇಂಚರಕ್ಕೊಂದು ಧನ್ಯವಾದ.

Post a Comment